News & Events
’ಸ್ಮಾರ್ಟ್ ಎಂಡ್ ಸಕ್ಸಸ್‌ಫುಲ್ ಓಂಟ್ರ್‌ಪೃನರ್’
ಪೆರ್ಲ ನಾಲಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಮೆನೇಜ್‌ಮೆಂಟ್ ವಿಭಾಗಗಳ ಜಂಟಿ ಪ್ರಾಯೋಜಕತ್ವದಲ್ಲಿ ’ಸ್ಮಾರ್ಟ್ ಎಂಡ್ ಸಕ್ಸಸ್‌ಫುಲ್ ಓಂಟ್ರ್‌ಪೃನರ್’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರವು ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮುನ್ನಾಡು ಪೀಪಲ್ಸ್ ಕೋ ಆಪರೇಟರ್ ಕಾಲೇಜಿನ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥ, J.C.I ತರಬೇತುದಾರ, ಎನ್.ಎಸ್. ಎಸ್ ಯೋಜನಾಧಿಕಾರಿ ಮತ್ತು ಲೇಖಕರೂ ಆದ ಶ್ರೀ ಪುಷ್ಪಾಕರನ್ ಬಂಡಿಚ್ಚಾಲ್ ಆಗಮಿಸಿದ್ದರು. ಕಾಲದ ಬದಲಾವಣೆಗೆ ತಕ್ಕಂತೆ ನಾವು ಎಲ್ಲಾ ವಿದ್ಯಾಮಾನಗಳನ್ನು ಅರಿತುಕೊಂಡು ಮುಂದಿನ ಹತ್ತು ವರ್ಷದಲ್ಲಿ ನಡೆಯಬಹುದಾದುದನ್ನು ಮುಂಚಿತವಾಗಿ ಚಿಂತಿಸುವಷ್ಷು
’ವಿಶ್ವ ಉರಗ ದಿನ’ ಆಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್‌ನ ವತಿಯಲ್ಲಿ ’ವಿಶ್ವ ಉರಗ ದಿನ’ವನ್ನು ಆಚರಿಸಲಾಯಿತು. ಈ ಕಾರ್‍ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಿದ್ಯಾಸಂಸ್ಥೆಯ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್‌ರವರು ವಹಿಸಿದ್ದರು. ಕಲ್ಲನಾಗರ ಕಂಡರೆ ಹಾಲೆರೆಯೆಂಬರಯ್ಯ, ದಿಟದ ನಾಗರ ಕಂಡರೆ ಹೊಡೆಯೆಂಬರಯ್ಯ ಎಂಬ ವಚನದ ಸಾಲನ್ನು ಉಲ್ಲೇಖಿಸುತ್ತಾ, ಹಿಂದೂ ಸಂಸ್ಕ್ರತಿಯಲ್ಲಿ ನಾಗನಿಗೆ ದೇವರ ಸ್ಥಾನವಿದೆ ಎಂದರು. ಭೂಮಿತ್ರ ಸೇನೆಯ ಸಂಚಾಲಕರಾದ ರಂಜಿತ್ ಕುಮಾರ್‌ರವರು ದಿನದ ಪ್ರತ್ಯೇಕತೆಯನ್ನು ವಿವರಿಸಿದರು. ಕಾಡು ನಾಶವಾದರೆ ಹಾವುಗಳೂ ನಾಶವಾದಂತೆ, ಹಾವನ್ನು ಕೊಲ್ಲದೆ ಬದುಕಲು ಬಿಡಬೇಕು ಪ್ರಕೃತಿಯಲ್ಲಿ
ವಿಶ್ವ ಜನಸಂಖ್ಯಾ ದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಭೂಮಿತ್ರ ಸೇನಾ ಕ್ಲಬ್ ಹಾಗೂ ಎನ್. ಎಸ್. ಎಸ್ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀಯುತ ಅಶೋಕ ಮೊಟ್ಟಕುಂಜ ಅವರು ವಹಿಸಿ ’ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಜನಸಂಖ್ಯಾ ನಿಯಂತ್ರಣ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಯ ದೃಷ್ಠಿಯಲ್ಲಿ ಮೌಲ್ಯಾಧಾರಿತ ಕೌಟುಂಬಿಕ ರಚನೆ ಅಗತ್ಯ’ ಎಂದು ನುಡಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಶ್ರೀ ನಾರಾಯಣ ಶೆಟ್ಟಿಯವರು ಜನಸಂಖ್ಯೆಯ ಹೆಚ್ಚಳದಿಂದ ಆಗುತ್ತಿರುವ ಪರಿಣಾಮಗಳ
ಸಾಹಿತ್ಯ ಸಂಘ ಉದ್ಘಾಟನೆ
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಸಾಹಿತಿಯೂ ಆದ ಡಾ| ಹರಿಕೃಷ್ಣ ಭರಣ್ಯ ನೆರವೇರಿಸಿದರು. ಕಾಸರಗೋಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ, ಸಂಗೀತ, ಭಾಷಾ ವೈವಿಧ್ಯಗಳು ಜಗತ್ತಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಡೀ ಜಗತ್ತು ಇಲ್ಲಿದೆ. ಇಂತಹ ಶ್ರೀಮಂತ ನಾಡಿನಲ್ಲಿ ಹುಟ್ಟಿ ಬೆಳೆದ ನಾವು ಧನ್ಯರು. ಯಾರೂ ಒಮ್ಮೆಲೇ ದೊಡ್ಡ ಕವಿಯೋ ಸಾಹಿತಿಯೋ ಆಗಲಾರರು. ಶಾಲಾ ಮಟ್ಟದಲ್ಲಿ ಇದನ್ನು ರೂಢಿಸಿಕೊಂಡು ಬೆಳೆಯ ಬೇಕಾಗಿದೆ. ಅದಕ್ಕೆ ಇಂತಹ ವೇದಿಕೆಗಳು
ಸಂಖ್ಯಾಶಾಸ್ತ್ರದ ಪರಿಮಾಣಗಳ ಬಳಕೆ
ಜೂನ್ 27, 2016 ರಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗವು ’ಸಂಖ್ಯಾಶಾಸ್ತ್ರದ ಪರಿಮಾಣಗಳ ಬಳಕೆ’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು. ಸಂಪನ್ಮೂಲ ವ್ಯಕ್ತಿಯಾಗಿ ಕಣ್ಣೂರು ವಿಶ್ವವಿದ್ಯಾನಿಲಯದ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧಕಿ ಶ್ರೀಮತಿ ಉದಯ.ಎ ಭಾಗವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸಂಖ್ಯಾಶಾಸ್ತ್ರವು ನಮ್ಮ ಜೀವನಕ್ಕೆ ಅಗತ್ಯವಾದ ಒಂದು ಮಾನದಂಡ ಎಂದರು. ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ ಮತ್ತು ಸ್ಟಾಫ್ ಸೆಕ್ರೆಟರಿ ಕೆ.ಕೇಶವಶರ್ಮ ಶುಭಹಾರೈಸಿದರು. ಉಪನ್ಯಾಸಕಿ ಕು| ಶಿಲ್ಪಾ
ಯೋಗದಿಂದ ರೋಗ ಮುಕ್ತ – ಕೋಳಾರು ಸತೀಶ್ಚಂದ್ರ ಭಂಡಾರಿ
ಅಂತಾರಾಷ್ಟ್ರೀಯ ಯೋಗ ದಿನವನ್ನು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೋಳಾರು ಸತೀಶ್ಚಂದ್ರ ಭಂಡಾರಿಯವರು ಮಾತನಾಡುತ್ತ ಜೂನ್ 21 ಎಂದರೆ ದೀರ್ಘ ಹಗಲಿರುವ ದಿವಸ ಅದೇ ದಿನವನ್ನು ಯೋಗದಿನವಾಗಿ ಆಚರಿಸುವಂತೆ ಮೋದಿಯವರು ತಿಳಿಸಿದರು, ಮಾತ್ರವಲ್ಲದೆ ಜಗತ್ತಿನಾದ್ಯಂತ ಪ್ರಚಾರ ಮಾಡಿದರು. ಆದರೆ ಯೋಗ ಎಂಬುದು ದಿನಾಚರಣೆಯನ್ನು ಆಚರಿಸುವಲ್ಲಿಗೆ ನಿಲ್ಲಬಾರದು ಅದು ಜೀವನದುದ್ದಕ್ಕೂ ನಡೆಸಬೇಕಾದ ಕ್ರಿಯೆ. ದೈಹಿಕ ಮಾನಸಿಕ ಶುಚಿತ್ವದಿಂದ ಜೀವನದಲ್ಲಿ ಯೋಗ ಮಾಡುತ್ತ ಬಂದರೆ ನಾವು ರೋಗ ಮುಕ್ತರಾಗುತೇವೆ ಎಂದರು. ಕಾಲೇಜಿನಲ್ಲಿ ಒಂದು ವಾರಗಳ ಯೋಗ ಶಿಬಿರವನ್ನು ನಡೆಸಿದ
ಅಂತರಾಷ್ಠ್ರೀಯ ಯೋಗ ದಿನಾಚರಣೆ
ಅಂತರಾಷ್ಠ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಒಂದು ವಾರದ ಯೋಗ ಶಿಬಿರ ಆರಂಭವಾಗಿದೆ. ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ.ಕಮಲಾಕ್ಷರು ಶಿಬಿರಕ್ಕೆ ಚಾಲನೆ ನೀಡಿದರು. ಯೋಗಾಚಾರ್ಯರಾದ ಆನೆಮಜಲು ಶ್ರೀ ವಿದ್ಯಾಧರರು ಯೋಗಾಸನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ಶಿಬಿರ ಪ್ರಾರಂಭಿಸಿದರು. ಉಪನ್ಯಾಸಕ ಕೆ.ಕೇಶವಶರ್ಮ ಯೋಗಾಚಾರ್ಯರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ವಾಗತಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಮತ್ತು ಶ್ರೀನಿಧಿಯವರು ಶಿಬಿರದ ಜವಾಬ್ದಾರಿಯನ್ನು ವಹಿಸಿಕೊಂಡರು. ಉಪನ್ಯಾಸಕರು ಮತ್ತು 40 ಕ್ಕೂ ಮಿಕ್ಕಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
One Day Seminar on “COMMON DESEASES IN RAINY SEASON”
A Seminar on, Common Diseases in Rainy Season was held at Nalanda college Auditorium on 15th June, 2016, under the auspices of the Department of Geography. Mr. Abhilash T.K. Head of the Department welcomed the gathering. The Principal Dr. K. Kamalaksha presided over the function. Sri. Suresh, District Malaria Officer, Kasaragod talked on the topic,