×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಪರಿಸರ ಸಂರಕ್ಷಣೆಯೇ ನಮ್ಮ ಆರೋಗ್ಯ ರಕ್ಷಣೆ ನಮ್ಮ ಮನೆಯ ಸುತ್ತು ಮುತ್ತ ಸ್ವಚ್ಛವಾಗಿ ಇಟ್ಟು ಕೊಂಡರೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಹಂದಿ ಜ್ವರ ಮೊದಲಾದವುಗಳನ್ನು ತಡೆಗಟ್ಟಬಹುದು. ಮಳೆ ನೀರು ಒಂದೆಡೆ ನಿಂತಾಗ ಅದರಲ್ಲಿ ಸೊಳ್ಳೆಗಳುಂಟಾಗಿ ನಾನಾ ರೀತಿಯ ರೋಗಗಳು ಹರಡಲು ಕಾರಣವಾಗುತ್ತದೆ. ವಿದ್ಯಾರ್ಥಿಗಳಾದ ನೀವು ನಿಮ್ಮ ಪರಿಸರವನ್ನು ಕಾಯ್ದುಕೊಳ್ಳಬೇಕು ಮಾತ್ರವಲ್ಲದೆ ಪರಿಸರದ ಮಹತ್ವವನ್ನು ಇತರರಿಗೆ ತಿಳಿಸಿ ಜಾಗೃತಗೊಳಿಸಬೇಕೆಂದು ಪೆರ್ಲ ಸರಕಾರಿ ಹೋಮಿಯೋ ಆಸ್ಪತ್ರೆಯ ಡಾ| ಸ್ಮಿತಾರವರು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಬಗೆಗೆ ತಿಳಿಸಿಕೊಟ್ಟರು. ಅವರು ಪೆರ್ಲ ನಾಲಂದಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ’ಸ್ವಚ್ಛತಾ ಪಕ್ವಡಾ’ದ ಅಂಗವಾಗಿ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

parisara jagrithi

ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆರೋಗ್ಯವೇ ಭಾಗ್ಯ ಅದಕ್ಕಿಂತ ಹಿರಿದಾದ ಸಂಪತ್ತು ಬೇರೆ ಇಲ್ಲ. ಪ್ರಾಣಿ, ಪಕ್ಷಿಗಳು ಪರಿಸರವನ್ನು ರಕ್ಷಿಸುತ್ತವೆಯೇ ಹೊರತು ನಾಶ ಮಾಡುವುದಿಲ್ಲ. ಆದರೆ ಬುದ್ಧಿವಂತನಾದ ಮನುಷ್ಯ ಹಾಳು ಮಾಡಿ ತನ್ನ ಸಾವಿಗೆ ತಾನೇ ಕಾರಣನಾಗುತ್ತಾನೆ ಎಂದು ಕಾಲೇಜಿನ ಸ್ಟಾಫ್ ಕಾರ್ಯದರ್ಶಿ ಕೆ.ಕೇಶವಶರ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಣ್ಣೂರು ವಿಶ್ವವಿದ್ಯಾನಿಲಯದ ಸ್ವಚ್ಛತಾ ಪಕ್ವಡಾದ ಅಂಗವಾಗಿ ನಡೆಸಬೇಕಾದ 15 ದಿನಗಳ ಕಾರ್ಯಕ್ರಮಗಳ ವಿವರವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿ ಪ್ರದೀಪ್ ಸ್ವಾಗತಿಸಿ, ವಿತೇಶ್ ವಂದಿಸಿದರು. ವಿಕಾಸ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು, ಎನ್.ಎಸ್.ಎಸ್ ಘಟಕದ ಸದಸ್ಯರು ಉಪಸ್ಥಿತರಿದ್ದರು.