ನಾಲಂದ ಕಾಲೇಜಿನ ಎನ್. ಎಸ್. ಎಸ್ ಘಟಕದ ಸಹಯೋಗದಲ್ಲಿ ರಾಗಿಂಗ್‌ನ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಕೆ.ಆರ್ ಅಂಬಾಡಿಯವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂಬಾಡಿಯವರು ಮಾತನಾಡುತ್ತಾ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿದರೆ ಅದು ರಾಗಿಂಗ್ ಮಾಡಿದಂತಾಗುತ್ತದೆ ಅದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಆದುದರಿಂದ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕಲಿತು ಉತ್ತಮ ಪ್ರಜೆಗಳಾಗಿ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸೀನಿಯರ್ ಪೋಲಿಸ್ ಅಧಿಕಾರಿ ರಾಮಕೃಷ್ಣನ್‌ರವರು ವಿದ್ಯಾರ್ಥಿಗಳಿಗೆ ರಾಗಿಂಗ್ನ ಹಲವು ಬಗೆಗಳನ್ನು ತಿಳಿಸಿ ಅದರ ಕ್ರೂರತೆಯನ್ನು ಮನವರಿಕೆ ಮಾಡಿಕೊಟ್ಟದ್ದಲ್ಲದೆ ಕಾನೂನಿನಲ್ಲಿರುವ ಶಿಕ್ಷೆಗಳನ್ನು ತಿಳಿಸಿದರು. ಯಾವುದೇ ಕೆಲಸ ಮಾಡುವುದಕ್ಕಿಂತ ಮೊದಲು ಯೋಚಿಸಬೇಕು. ಮಾಡಿದ ಅನಂತರ ದು:ಖಿಸಿ ಫಲವಿಲ್ಲ ಎಂದರು. ರಾಗಿಂಗ್ ಇನ್ನಿತರ ಅಪರಾಧಗಳಿಗೂ ದಾರಿ ಮಾಡಿಕೊಡುತ್ತದೆ, ಆದುದರಿಂದ ವಿದ್ಯಾರ್ಥಿಗಳಾದ ನೀವು ಇನ್ನೊಬ್ಬರ ಸಾವಿಗೆ ಕಾರಣರಾಗಿ ನಿಮ್ಮ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ತಿಳಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ| ಪಿ. ಶಂಕರನಾರಾಯಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಉಪನ್ಯಾಸಕ ರಂಜಿತ್ ಕುಮಾರ್ ಸ್ವಾಗತಿಸಿ, ವಿದ್ಯಾರ್ಥಿ ವಿಕಾಸ್ ವಂದಿಸಿದರು. ಉಪನ್ಯಾಸಕಿ ಉಷಾಶ್ರೀ ಕಾರ್ಯಕ್ರಮ ನಿರೂಪಿಸಿದರು