ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ವಿಧಾನ ಎಂಬ ವಿಷಯದ ಬಗ್ಗೆ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಹೃಷಿಕೇಶ್ ಮಾತನಾಡುತ್ತಾ, ನಮ್ಮ ಪರಿಸರ ಕಲುಷಿತಗೊಂಡಾಗ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಸಾಂಕ್ರಾಮಿಕ ರೋಗಗಳು ಹರಡುವುದು ಮುಖ್ಯವಾಗಿ ಸೊಳ್ಳೆಗಳಿಂದ. ಸಂಧ್ಯಾ ಸಮಯದಲ್ಲಿ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೊ ಜ್ವರ ಹರಡುತ್ತದೆ. ಅದೇ ರೀತಿ ಎಚ್1ಎನ್1 ಮಲೇರಿಯಾ ಮೊದಲಾದ ರೋಗಗಳು ಬಾರದಂತೆ ತಡೆಗಟ್ಟಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು. ನಮ್ಮ ಆರೋಗ್ಯ ನಮ್ಮ ಕೈಯಲೇ ಇದೆ ಎಂದು ರೋಗ ತಡೆಗಟ್ಟುವ ವಿಧಾನಗಳನ್ನು ತಿಳಿಸಿಕೊಟ್ಟರು.
ಕಾಲೇಜು ಪ್ರಾಂಶುಪಾಲ ಪ್ರೊ|.ಪಿ.ಶಂಕರನಾರಾಯಣ ಹೊಳ್ಳರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಆರೋಗ್ಯವೇ ಭಾಗ್ಯ. ಅದಿಲ್ಲದಿದ್ದರೆ ಏನಿದ್ದೂ ಪ್ರಯೋಜನವಿಲ್ಲ ಎಂದರು. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಲ್ತ್ ಇನ್ಸ್ಪೆಕ್ಟರ್ ಚಂದ್ರನ್ರವರು ಪರಿಸರ ಶುಚಿತ್ವದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಮತ್ತು ಸ್ಟಾಫ್ ಕಾರ್ಯದರ್ಶಿ ಕೆ. ಕೇಶವಶರ್ಮ ಉಪಸ್ಥಿತರಿದ್ದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿ ವಿದ್ಯಾರ್ಥಿನಿ ಪವಿತ್ರಾ ವಂದಿಸಿದರು. ವಿದ್ಯಾರ್ಥಿ ವಿಕಾಸ್ ಕಾರ್ಯಕ್ರಮ ನಿರೂಪಿಸಿದರು.