×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಮಾದಕ ವ್ಯಸನ ವಿರೋಧಿ ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಮಾದಕ ವ್ಯಸನ ವಿರೋಧಿ ದಿನವನ್ನು ಉತ್ತಮ ಕಾರ್ಯಕ್ರಮದೊಂದಿಗೆ ಆಯೋಜಿಸಲಾಯಿತು.

Anti Drug Day 2017

ಕಾಲೇಜು ಉಪನ್ಯಾಸಕ ಕೆ.ಕೇಶವಶರ್ಮರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮನುಷ್ಯ ಅಮಲು ಪದಾರ್ಥಗಳ ಬಳಕೆಯಿಂದ ಬುದ್ಧಿ ಸ್ವಾಸ್ಥ್ಯ ಕಳೆದು ಮೃಗವಾಗುತ್ತಾನೆ. ಮನಸ್ಸು ಶುದ್ದವಿದ್ದರೆ ನಾವು ಮತ್ತು ನಮ್ಮ ಪರಿಸರ ಶುದ್ದವಾಗಿರುತ್ತದೆ. ಮಾನವರಾದ ನಾವು ಶುದ್ದರಾಗಿ ನಮ್ಮಿಂದ ಲೋಕಪರಿಶುದ್ದಗೊಂಡು ಮಾದಕ ಮುಕ್ತ ಭಾರತ ನಿರ್ಮಾಣವಾಗಬೇಕು. ಇಂದು ಯುವ ಜನಾಂಗ ಶೋಕೀ ಜೀವನಕ್ಕೆ ಮರುಳಾಗಿ ಮಾದಕ ದ್ರವ್ಯಗಳ ದಾಸರಾಗಿರುವುದು ಸಾಮಾನ್ಯವಾಗಿದೆ. ಅದು ಮೊದಮೊದಲು ಸ್ನೇಹಿತನಾಗಿ ಬಂದು ಕೊನೆಗೆ ಶತ್ರುವಾಗಿ ನಮ್ಮ ಸಂಸಾರ ಬೀದಿಪಾಲಾಗಿಸುತ್ತದೆ. ಆದುದರಿಂದ ಪ್ರಾಥಮಿಕ ಶಾಲಾ ಮಟ್ಟದಿಂದಲೇ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅಗತ್ಯ ಎಂದರು.

ಕಾಲೇಜು ಪ್ರಾಂಶುಪಾಲ ಪ್ರೊ| ಪಿ. ಶಂಕರನಾರಾಯಣ ಹೊಳ್ಳರು ಮಾದಕ ವ್ಯಸನದ ವಿರುದ್ಧ ಸಂದೇಶ ಸಾರುವ ಪೋಸ್ಟರ್ ರಚನಾ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡುತ್ತಾ ಮಾದಕ ವ್ಯಸನದಂತೆ ಯುವಜನಾಂಗವನ್ನು ಇಂದು ಮೊಬೈಲ್‌ಗಳು ದಾರಿತಪ್ಪಿಸುತ್ತಿವೆ. ವಿದ್ಯಾರ್ಥಿಗಳು ಅದರಿಂದ ದೂರ ಇರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದರು. ಉಪನ್ಯಾಸಕ ಸುರೇಶ್ ಸ್ವಾಗತಿಸಿ. ವಿದ್ಯಾರ್ಥಿನಿ ಅರ್ಪಿತಾ ವಂದಿಸಿದರು ವಿದ್ಯಾರ್ಥಿ ವಿಕಾಸ್ ಕಾರ್ಯಕ್ರಮ ನಿರೂಪಿಸಿದರು.