ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ಆರ್ಥಿಕ ಅಭಿವೃದ್ಧಿಯೂ, ಮಾನವ ಸಂಪನ್ಮೂಲದ ಅಭಿವೃದ್ಧಿಯೂ ಆಗಬೇಕು. ಪ್ರತಿಯೊಬ್ಬ ಮಾನವನೂ ವಿದ್ಯಾವಂತನಾಗಿ ದೇಶಪ್ರೇಮಿಯಾಗಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿ ಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪೆರ್ಲ ನಾಲಂದ ಮಹಾ ವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಶ್ರುತಿಯವರು ಕಾಲೇಜಿನಲ್ಲಿ ನಡೆದ ಜನಸಂಖ್ಯಾ ದಿನಾಚರಣೆಯಂದು ನುಡಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ, ಉಪನ್ಯಾಸಕ ಶಂಕರ ಖಂಡಿಗೆಯವರು ಅಧ್ಯಕ್ಷತೆ ವಹಿಸಿ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಕರ್ತವ್ಯಗಳು, ಜವಾಬ್ದಾರಿಗಳಿವೆ. ಆದುದರಿಂದ ಯಾರೂ ದೇಶ ದ್ರೋಹಿಗಳಾಗದೆ ದೇಶ ಸೇವಕರಾಗಿ ಎಂದರು.
ಎನ್.ಎಸ್.ಎಸ್ ಕಾರ್ಯದರ್ಶಿ, ವಿದ್ಯಾರ್ಥಿ ವಿಕಾಸ್ ಸ್ವಾಗತಿಸಿ, ನಿಶಾಂತ್ ವಂದಿಸಿದರು.