News & Events
ನಾಲಂದದಲ್ಲಿ ವಿವೇಕಾನಂದ ಜಯಂತಿ
ಪೆರ್ಲ : “ವಿವೇಕಾನಂದರು ಭಾರತೀಯ ಸಂಸ್ಕಾರವನ್ನುಜಗತ್ತಿಗೆ ತಿಳಿಸಿ ಅತೀ ಸಣ್ಣ ವಯಸ್ಸಿನಲ್ಲೇ ಖ್ಯಾತಿ ಪಡೆದವರು. ಯುವಜನಾಂಗಕ್ಕೆ ಆದರ್ಶರಾದವರೂ ಆಗಿದ್ದಾರೆ” ಎಂದು ಕರುಣಾಕರ ಮಾಸ್ತರ್ ಹೇಳಿದರು. ಅವರು ನಾಲಂದ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಮತ್ತು ಆಡಳಿತ ಮಂಡಳಿ ಜಂಟಿಯಾಗಿ ಸಂಘಟಿಸಿದ ವಿವೇಕಾನಂದರ 154 ನೇ ಜಯಂತಿ ಮತ್ತು ರಾಷ್ಟ್ರೀಯ ಯುವದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿವೇಕಾನಂದರ ಜೀವನಚರಿತ್ರೆಯನ್ನು ಹಲವಾರು ವಿಚಾರಗಳ ಮೂಲಕ ವಿದ್ಯಾರ್ಥಿಗಳ ಮುಂದಿಟ್ಟ ಅವರು ಯುವಜನರು ವಿದೇಶಿ ಸಂಸ್ಕೃತಿಗೆ ಮಾರುಹೋಗಿ ಭಾರತೀಯ ಸಂಸ್ಕಾರವನ್ನು ಮರೆಯುತ್ತಿರುವ ಈ ಸಂದರ್ಭದಲ್ಲಿ
ಸಂಕುಚಿತ ಸಮಾಜದ ಪರಿವರ್ತನೆ ಎನ್.ಎಸ್.ಎಸ್ನಿಂದ ಸಾಧ್ಯ- ಡಾ|ಸಿ.ಬಾಲನ್
ಎನ್.ಎಸ್.ಎಸ್ನ ವಿದ್ಯಾರ್ಥಿಗಳು ತಮ್ಮ ಸೇವಾ ಸಮಯದಲ್ಲಿ ಯಾವುದಾದರೊಂದು ಒಳ್ಳೆಯ ಸಮಾಜ ಸೇವೆಯನ್ನು ಮಾಡಿ ಸಮಾಜದಲ್ಲಿ ಗುರುತನ್ನು ಉಳಿಸಬೇಕು ಎಂದು ಪೆರಿಯ ಡಾ|ಅಂಬೆಡ್ಕರ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಸಿ.ಬಾಲನ್ ಅವರು ಉಮೇಶ್ ಭಂಡಾರಿ ಪೂವನಡ್ಕ ಅವರ ಮನೆಯಲ್ಲಿ ನಡೆದ ತರಗತಿಯಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಇವರು ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ಶಿಬಿರಾರ್ಥಿಗಳ ಜೊತೆ ಸಂವಹನ ನಡೆಸಿದರು. ಕಾರ್ಯಕ್ರಮದಲ್ಲಿ ಶಂಕರ ಖಂಡಿಗೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,
ಮಾದಕ ವಸ್ತುಗಳ ಸಮಸ್ಯೆ ತಿಳುವಳಿಕಾ ತರಗತಿ
ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ಮಾದಕ ವಸ್ತುಗಳ ಸಮಸ್ಯೆ ತಿಳುವಳಿಕಾ ತರಗತಿ ದರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಮತ್ತು ಜಸ ಜಾಗೃತಿ ವೇದಿಕೆಯ ಕಾಸರಗೋಡು ವಲಯದ ಸಹಕಾರದಲ್ಲಿ ನಡೆಯಿತು.ಜನಜಾಗೃತಿ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಮೇಲ್ವಿಚಾರಕರಾದ ಮೋಹನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪ
ಉತ್ತಮ ಸಮಾಜ ನಿರ್ಮಾಣಕ್ಕೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರ ಮುಹಮ್ಮದ್ ಆಲಿ ಕೆ. ಪೆರ್ಲ
ಪೆರ್ಲ : ಬೇಂಗಪದವು ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಅಂಗವಾಗಿ, ಶಿಕ್ಷಣದಲ್ಲಿ ಸಾಮಾಜಿಕ ಸೇವೆಯ ಮೌಲ್ಯ ಎಂಬ ವಿಷಯದ ಬಗ್ಗೆ ಸರಕಾರಿ ಕಾಲೇಜು ಕಾಸರಗೋಡಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಭೂಮಿತ್ರ ಸೇನಾ ಕ್ಲಬ್ಬಿನ ಸಂಚಾಲಕರೂ ಆದ ಮುಹಮ್ಮದ್ ಆಲಿ ಕೆ. ಪೆರ್ಲ, ಸಮಾಜ ಬೆಳೆದರೆ ರಾಷ್ಟ್ರ ಬೆಳೆಯುವುದು, ಉತ್ತಮ ಸಮಾಜ ನಿರ್ಮಾಣಕ್ಕೆ ಎನ್.ಎಸ್.ಎಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು ಎಂದು ಹೇಳಿದರು.
ಇಟ್ಟಿಪಳ್ಳ
ಎಣ್ಮಕಜೆ ಗ್ರಾಮ ಪಂಚಾಯತಿಗೊಳಪಟ್ಟ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಿಂದ ಅನತಿ ದೂರದಲ್ಲಿ ಕಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಮನೋಹರವಾದ ಒಂದು ನೀರಿನ ಸಂಗ್ರಹವಿದೆ. ಈ ಮದಕಕ್ಕೆ ಪ್ರದೇಶವಾಸಿಗಳು “ಇಟ್ಟಿಪಳ್ಳ” ಎಂದು ಕರೆಯುತ್ತಾರೆ. ಇತಿಹಾಸ ಯಾವುದೇ ಇರಲಿ ಈ ಮದಕದಲ್ಲಿ ಏಪ್ರೀಲ್ ತಿಂಗಳಲ್ಲೂ ಬತ್ತದ ನೀರಿನ ಸಂಗ್ರಹ ವಿಜ್ಞಾನಕ್ಕೆ ಒಂದು ಸವಾಲಾಗಿದೆ. ಇತ್ತೀಚೆಗೆ ಇದೇ ಪ್ರದೇಶದಲ್ಲಿ ಶಿಬಿರವನ್ನು ಹಮ್ಮಿಕೊಂಡ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಈ ಮದಕಕ್ಕೆ ಭೇಟಿ ಕೊಟ್ಟು ಶುಚಿಗೊಳಿಸಿದರು. ಇಂತಹ
ಬೇಂಗಪದವು-ಬಾಂಕನ-ಸೇರಾಜೆ-ದಾಸ್ರೋಕು ರಸ್ತೆ ನಿರ್ಮಾಣ
ಪೆರ್ಲ : ನಾಲಂದ ಕಾಲೇಜಿನ ಎನ್.ಎಸ್.ಎಸ್ ಘಟಕದ ಸದಸ್ಯರು ಈ ವರ್ಷದ ಶಿಬಿರದಲ್ಲಿ ಬೇಂಗಪದವು-ಬಾಂಕನ-ಸೇರಾಜೆ-ದಾಸ್ರೋಕು ರಸ್ತೆ ನಿರ್ಮಾಣ ಮಾಡಿದರು. ಸಪ್ತದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ತಮ್ಮ ಶ್ರಮದಿಂದ, ಕುಟುಂಬಶ್ರೀಯ ಸದಸ್ಯರು, ಪ್ರದೇಶದ ಜನರ ಮತ್ತು ಯಂತ್ರದ ಸಹಾಯದಿಂದ ಸ್ಥಳೀಯ ನಿವಾಸಿಗಳ ಹಲವಾರು ವರುಷಗಳ ಬೇಡಿಕೆಯನ್ನು ಪೂರೈಸಿದರು. ಸುಮಾರು ಎರಡು ಕಿ.ಮೀ ಗಳಷ್ಟಿರುವ ಈ ರಸ್ತೆಯ ನಿರ್ಮಾಣ ಪ್ರದೇಶದ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ ಮತ್ತು ಕುರುಚಲು ಪೊದೆಗಳನ್ನು ಕಡಿದು ರಸ್ತೆಯ ಪ್ರಥಮ ನಿರ್ಮಾಣ ವೃತ್ತಿಯನ್ನು ಎನ್.ಎಸ್.ಎಸ್ ಘಟಕದ ಸದಸ್ಯರು ಮಾಡಿದರು.
ಬೇಂಗಪದವು-ಬಸ್ಸು ತಂಗುದಾಣ
ಪೆರ್ಲ : ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ಈ ವರ್ಷದ ವಿಶೇಷ ಸಪ್ತದಿನ ಶಿಬಿರದಲ್ಲಿ ವಿದ್ಯಾರ್ಥಿಗಳು ಬೇಂಗಪದವು ಬಸ್ಸು ತಂಗುದಾಣವನ್ನು ಊರ ದಾನಿಗಳ ಸಹಾಯದಿಂದ ಕೇವಲ ಐದು ದಿನದಲ್ಲಿ ನಿರ್ಮಿಸಿ ದಾಖಲೆ ಮಾಡಿದ್ದಾರೆ. ಈ ಬಸ್ಸು ತಂಗುದಾಣವನ್ನು ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪಾವಾಣಿ ಆರ್. ಭಟ್ ಲೋಕಾರ್ಪಣೆ ಮಾಡಿದರು. ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯ ಸತೀಶ್ ಕುಲಾಲ್ ನಲ್ಕ, ನಾಲಂದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿಯಾದ ಶಿವಕುಮಾರ್ ಕೆ, ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಸಮಾರೋಪ
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರದ ಸಮಾರೋಪ ಸಮಾರಂಭ ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಉದ್ಘಾಟಿಸಿ, ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡಾಗ ತಮಗೂ ದೇಶಕ್ಕೂ ಒಳಿತಾಗುತ್ತದೆ, ಈ ನಿಟ್ಟಿನಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕವು ನಿರ್ಮಿಸಿದ ಬೇಂಗಪದವು ಬಸ್ ತಂಗುದಾಣ, ಬೇಂಗಪದವು-ಬಾಂಕನ-ಸೊಮಾಜೆ-ದಾಸ್ರೋಕು ರಸ್ತೆ, ಬೇಂಗಪದವಿನಂದ ಶಾಲೆಗೆ ಬರುವ ಕಾಲುದಾರಿ
ಶ್ರಮದಾನ ಉದ್ಘಾಟನೆ
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬೇಂಗಪದವು ಶ್ರೀ ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಪ್ತ ದಿನ ವಿಶೇಷ ಶಿಬಿರದ ಶ್ರಮದಾನ ಕೆಲಸವನ್ನು ಎಣ್ಮಕಜೆ ಪಂಚಾಯತ್ತಿನ ಕ್ಷೇಮ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷ ಶ್ರೀ ಉದಯ.ಬಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಾಲಂದಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅಶೋಕ ಮೋಟ್ಟಕುಂಜ,ವಿನೀಷ, ಶಾಂಭವಿ, ಸ್ಥಳೀಯರಾದ ರಾಧಾಕೃಷ್ಣ ಆಳ್ವ ಪೂವನಡ್ಕ, ಅಬ್ದುಲ್ ಲತೀಫ್ ಬೇಂಗಪದವು, ರಾಮಣ್ಣ ಪೂಜಾರಿ ಬಾಂಕನ, ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ರಾಷ್ಟ್ರೀಯ
ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ – ಸೆಮಿನಾರ್
ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಬೇಂಗಪದವು ಶ್ರೀ ಗಿರಿಜಾಂಬ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಪ್ತ ದಿನ ವಿಶೇಷ ಶಿಬಿರದಲ್ಲಿ “ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿ” ಎಂಬ ವಿಷಯದ ಕುರಿತು ಸೆಮಿನಾರ್ ನಡೆಯಿತು. ವಿಷ್ಣುಪ್ರಕಾಶ್ ಮುಳ್ಳೇರಿಯ ಇವರು ಸಂಪನ್ಮೂಲ ವ್ಯಕ್ತಿಯಾಗಿ ತರಗತಿಯನ್ನು ನಡೆಸಿಕೊಟ್ಟರು. ಕೇಂದ್ರ ಸರಕಾರದ ಯೋಜನೆಯಾದ ಡಿಜಿಟಲ್ ಇಂಡಿಯ-ಕ್ಯಾಷ್ ಲೆಸ್ ಸೊಸೈಟಿಯ ಕುರಿತು ಅನೇಕ ವಿಚಾರಗಳನ್ನು ತಿಳಿಸಿದರು. 500 ಮತ್ತು 1000 ಮುಖಬೆಲೆಯ ಅಪಮೌಲ್ವೀಕರಣದಿಂದ ಉದ್ಭವಿಸಿದ ಹಣದ ವಿನಿಮಯ ಮತ್ತು