×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ರಾಷ್ಟ್ರೀಯ ಸೇವಾ ಯೋಜನೆ ಸಪ್ತದಿನ ಶಿಬಿರ ಉದ್ಘಾಟನೆ

ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಈ ವರ್ಷದ ವಿಶೇಷ ಸಪ್ತದಿನ ಶಿಬಿರವು ಎಣ್ಮಕಜೆ ಗ್ರಾಮಪಂಚಾಯತ್ತಿನ ಬೇಂಗಪದವು ಶ್ರೀ ಗಿರಿಜಾಂಬ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ಎಣ್ಮಕಜೆ ಗ್ರಾಮ ಪಂಚಾಯತ್ತಿನ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಉದ್ಘಾಟಿಸಿ ಇಂತಹ ಶಿಬಿರವು ಮಕ್ಕಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ವಿಕಸನ, ಸೇವಾಮನೊಭಾವ ಬೆಳೆಸಲು, ಸಹಬಾಳ್ವೆ ಮತ್ತು ಸಮಾಜಮುಖಿ ಅಬಿವೃದ್ಧಿಗೆ ಸಹಕಾರಿ ಆಗಲಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಣ್ಮಕಜೆ ಗ್ರಾಮ ಪಂಚಾಯತ್ತಿನ ಉಪಾಧ್ಯಕ್ಷರಾದ ಪುಟ್ಟಪ್ಪ

Read More

ಪೆರ್ಲ : ವಿವೇಕ ಉದ್ಯೋಗ ಮೇಳ ಕೌಂಟರ್ ಉದ್ಘಾಟನೆ

ಪೆರ್ಲ : 13 ಜನವರಿ 2017 ರಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯಾದ ಆವರಣದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಆಯೋಜಿಸಿರುವ ಬೃಹತ್ ವಿವೇಕ ಉದ್ಯೋಗ ಮೇಳಕ್ಕೆ ಪೂರಕವಾಗಿ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ನಾಲಂದ ಕಾಲೇಜಿನಲ್ಲಿ ಕಾರ್ಯಾಲಯ ಉದ್ಘಾಟನೆಗೊಂಡಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕಾರ್ಯಾಲಯವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧಿಕಾರಿ ವಿವೇಕ ಭಂಡಾರಿ ಉದ್ಯೋಗ ಮೇಳದ ಮಾಹಿತಿ ನೀಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಕೆ ಕಮಲಾಕ್ಷ ಪ್ರಾಸ್ತಾವಿಕ

Read More

ವಿಶ್ವ ಏಡ್ಸ್ ದಿನಾಚರಣೆ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಮತ್ತು ರೆಡ್‌ರಿಬ್ಬನ್ ಕ್ಲಬ್‌ವತಿಯಿಂದ ವಿಶ್ವಎಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಜನಜಾಗೃತಿ ರ್‍ಯಾಲಿ ಕಾಲೇಜಿನ ಪರಿಸರದಿಂದ ಪ್ರಾರಂಭಗೊಂಡು ಪೆರ್ಲ ಪೇಟೆಯಲ್ಲಿ ಸಮಾರೋಪಗೊಂಡಿತು. ಎಡ್ಸ್ ವಿರುದ್ಧ ಜನಜಾಗೃತಿ ರ್‍ಯಾಲಿಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ಶಿವಕುಮಾರ್ ಉದ್ಘಾಟಿಸಿ ವಿದೇಶಿ ಸಂಸ್ಕೃತಿಯನ್ನು ಅನುಸರಿಸಿದ ಪರಿಣಾಮವಾಗಿ ಈ ಮಾರಕರೋಗ ಹರಡಲು ಕಾರಣವಾಯಿತು. ಈ ರೋಗದ ವಿರುದ್ದ ಜನಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ರ್‍ಯಾಲಿಯು ಸ್ತುತ್ಯಾರ್ಹವಾಗಿದೆ ಎಂದರು. ಎಣ್ಮಕಜೆ ಪಂಚಾಯತು ಅಧ್ಯಕ್ಷೆಯಾದ ಶ್ರೀಮತಿ ರೂಪವಾಣಿ

Read More

ಅಂಗನವಾಡಿ ಪರಿಸರ ಶುಚಿತ್ವ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕವು ಎಣ್ಮಕಜೆ ಪಂಚಾಯತಿಗೆ ಒಳಪಟ್ಟ ಬೇಂಗಪದವು ಅಂಗನವಾಡಿ ಪರಿಸರವನ್ನು ಶುಚಿಗೊಳಿಸಲಾಯಿತು. ಈ ಕಾಯಕ್ರಮವನ್ನು ವಾರ್ಡು ಸದಸ್ಯರಾದ ಮೊಹಮ್ಮದ್ ಹನೀಫ್ ನಡುಬೈಲು ಅವರು ಉದ್ಘಾಟಿಸಿ ಎನ್ಎಸ್ಎಸ್ನಂತಹ ವಿದ್ಯಾರ್ಥಿ ಸಂಘಟನೆಗಳು ಪರಿಸರ ಸಂರಕ್ಷಣೆ ಹಾಗು ಶುಚಿತ್ವದ ಬಗ್ಗೆ ಜನಜಾಗೃತಿ ಮೂಡಿಸುವುದು ಅಗತ್ಯ ಮತ್ತು ಸ್ವಾಗತಾರ್ಹ ಎಂದು ಹೇಳಿದರು. ಅತ್ಯಂತ ಎಳೆಯ ವಯಸ್ಸಿನಲ್ಲೇ ಪರಿಸರ ಪ್ರೇಮ, ಪರಿಸರದ ಬಗೆಗಿನ ಕಾಳಜಿ ಸೃಷ್ಟಿಸುವಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ಮಮತಾ ಅವರು ಅಭಿಪ್ರಾಯಪಟ್ಟರು.

Read More

ಮಕ್ಕಳ ದಿನಾಚರಣೆ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿಎನ್‌ಎಸ್‌ಎಸ್ ವತಿಯಿಂದಮಕ್ಕಳ ದಿನಾಚರಣೆಯನ್ನುಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಧನ್ಯ ಕೆ.ಪಿ ವಹಿಸಿ ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್‌ಲಾಲ್ ನೆಹರು ಅವರ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ದೇಶದಾದ್ಯಂತ ಆಚರಿಸಲು ಅವರಿಗೆ ಮಕ್ಕಳಲ್ಲಿದ್ದ ಪ್ರೀತಿಯೆ ಕಾರಣ ಎಂದು ಹೇಳಿದರು. ಬಾಲಕಾರ್ಮಿಕತ್ವದ ನಿರ್ಮೂಲನೆ, ಬಾಲಾಪರಾದ, ಮೊದಲಾದ ಕೆಟ್ಟಪಧ್ದತಿಗಳನ್ನು ಹೋಗಲಾಡಿಸಿ ಮಕ್ಕಳ ಭವಿಷ್ಯವನ್ನು ಸುದೃಢಗೊಳಿಸಬೇಕು ಎಂದರು. ಕಾರ್ಯಕ್ರಮದ ಮುಖ್ಯ ಅಥಿತಿಯಾದ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಕು| ಅರ್ಪಿತಾ ಅವರು

Read More

ಅಂತಾರಾಷ್ಟ್ರೀಯ ಏಕತಾದಿನ

ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯಿ ಪಟೇಲ್‌ರವರ ಮಹಾನ್ ಕೊಡುಗೆಗಳನ್ನೂ ನೇತೃತ್ವ ಗುಣಗಳನ್ನೂ ಸ್ವಾತಂತ್ರ್ಯಾ ನಂತರದ ಭಾರತೀಯರೆಲ್ಲ ಸದಾ ಸ್ಮರಿಸಬೇಕು. ಅವರ ರೂಪ ಮತ್ತು ಮುಖ ಭಾವವು ಶಾಂತ ರೀತಿಯಲ್ಲಿದ್ದರೂ ಅವರ ಮನೋದಾರ್ಢ್ಯವು ಉಕ್ಕಿನಂತಹದಾಗಿತ್ತು ಎಂಬುದು ಸರ್ವವಿದಿತ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಮಲಯಾಳಂ ಉಪನ್ಯಾಸಕಿ ವಿನೀಶ ಅವರು ಅಭಿಪ್ರಾಯಪಟ್ಟರು. ಸದ್ರಿ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ನಡೆದ ಅಂತಾರಾಷ್ಟೀಯ ಏಕತಾ ದಿನವನ್ನು ಆಚರಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು. ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು.ಗೀತಾ ಪಿ ಅವರು

Read More

ನಾಲಂದ ರಕ್ತದಾನ ಶಿಬಿರ

ನಾಲಂದ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ರಕ್ತದಾನ ಶಿಬಿರವು ತಾರೀಕು 20-10-2016 ರಂದು ಕಾಲೇಜಿನಲ್ಲಿ ನಡೆಯಿತು. ಸುಮಾರು 50 ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಪ್ರಾಧ್ಯಾಪಕರಾದ, ಶ್ರೀನಿಧಿ, ಕುಮಾರಿ ಶಿಲ್ಪಾ ಮೊದಲಾದವರು ರಕ್ತದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ . ಕಮಾಲಾಕ್ಷ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ , ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ, ಶಿಬಿರದಲ್ಲಿ ಪಾಲ್ಗೊಂಡಿದ್ದರು. ಎನ್. ಎಸ್.ಎಸ್ ಕಾರ್ಯದರ್ಶಿಗಳಾದ ವಿಕಾಸ್, ಭವಿಷ್ಯ, ಸುಧಾಕರ ಹಾಗೂ ವಿದ್ಯಾರ್ಥಿಗಳಾದ ಸೆರಿನಾ, ಅಭಿಲಾಷ್,

Read More

ನಾಲಂದದಲ್ಲಿ ಜನ್ಮದಿನಾಚರಣೆ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ಮಹಾತ್ಮಗಾಂಧಿ ಮತ್ತು ಲಾಲ್ ಬಹದೂರ್ ಶಾಸ್ತ್ರಿಗಳ ಜನ್ಮದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಟ್ಟಂಪಾಡಿ ಸರ್ವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪಿಲಿಂಗಲ್ಲು ಕೃಷ್ಣ ಭಟ್ಟರು ಭಾಗವಹಿಸಿದರು. ದೇಶದ ಜನರನ್ನು ಸಂಘಟಿಸಿ ಬ್ರಿಟೀಷರ ವಿರುದ್ದ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ಮೊದಲಾದ ಚಳವಳಿಗಳನ್ನು ನಡೆಸಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದು ಹೇಳಿದ್ದಲ್ಲದೆ ಅವರ ಬದುಕಿನ ಮಹತ್ವದ ಘಟನೆಗಳನ್ನು ತಿಳಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಗಳ ಬಗ್ಗೆ ಮಾತನಾಡುತ್ತಾ

Read More

ನಾಲಂದದಲ್ಲಿ ವಿಶ್ವ ಆಹಾರ ದಿನ ಆಚರಣೆ

ಪೆರ್ಲ ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ವಿಶ್ವ ಆಹಾರ ದಿನವನ್ನು ಆಚರಿಸಲಾಯಿತು. ಈ ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಹಿಂದಿ ಸಹಪ್ರಾಧ್ಯಾಪಕಿ ಶಾಂಭವಿಯವರು ಇಂದು ಜನರು ವಾಣಿಜ್ಯ ಬೆಳೆಗಳನ್ನು ಬೆಳೆಸಿ ತಮ್ಮ ಸಂಪತ್ತನ್ನು ಹೆಚ್ಚಿಸುತ್ತಾ ಸುಖ ಭೋಗಗಳ ಕಡೆಗೆ ಮಾರು ಹೋದದ್ದರಿಂದ ಆಹಾರ ಉತ್ಪನ್ನಗಳ ಪ್ರಮಾಣ ಕುಸಿಯುತ್ತಿದೆ. ಇದು ಮುಂದೆ ಒಂದು ಕಾಲಕ್ಕೆ ತೀವ್ರ ಸಂಕಷ್ಟಕ್ಕೆ ಎಡೆಮಾಡಿಕೊಡುತ್ತದೆ. ಆದುದರಿಂದ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಕಡೆಗೆ ಯುವಕರು ಮನಸ್ಸು ಮಾಡಬೇಕು, ಬದುಕಲು ಸಂಪತ್ತಿಗಿಂತ ಆಹಾರ ಮುಖ್ಯ ಎಂದರು.

Read More

ರಕ್ತದಾನ ಕುರಿತು ಕಾರ್ಯಾಗಾರ

ಪೆರ್ಲ: ನಾಲಂದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸ್ವಯಂ ರಕ್ತದಾನದ ಕುರಿತಾಗಿ ಕಾರ್ಯಗಾರ ನಡೆಯಿತು. ರಕ್ತದಾನವೆಂಬುವುದು ಮಹಾದಾನ. ಅದನ್ನು ಮೂರು ತಿಂಗಳಿಗೊಮ್ಮೆ ಫಲಾಪೇಕ್ಷೆ ಇಲ್ಲದೇ ದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯವಿದೆ. ಯುವ ಜನಾಂಗ ರಕ್ತದಾನ ಮಾಡುವುದರಿಂದ ತಮ್ಮ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚುವುದಲ್ಲದೇ ತಮ್ಮ ಆರೋಗ್ಯದ ಹಿತದೃಷ್ಟಿಯಲ್ಲಿಯೂ ಉತ್ತಮ ಎಂದು ಬ್ಲಡ್ ಬ್ಯಾಂಕ್‌ನ ಸಂಯೋಜಕ ವಿನೋದ್ ಕುಮಾರ್ ವಿ. ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶಂಕರ ಖಂಡಿಗೆ ಅಧ್ಯಕ್ಷತೆಯನ್ನು

Read More