×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದದಲ್ಲಿ ಸರ್ಟಿಫಿಕೇಟ್ ಕೋರ್ಸ್

ಶ್ರದ್ಧೆ, ಪ್ರಾಮಾಣಿಕತೆ ಮತ್ತು ನಿರಂತರ ಪರಿಶ್ರಮವಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಯನ್ನು ಮಾಡಲು ಸಾಧ್ಯ ಎಂದು ಪೆರ್ಲ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಚಿನ್‌ರವರು ನುಡಿದರು. ಕಾಲೇಜಿನ ವಾಣಿಜ್ಯ ಮತ್ತು ಮೇನೇಜ್‌ಮೆಂಟ್ ವಿಭಾಗದ ವತಿಯಿಂದ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಮತ್ತು ಜಿ.ಎಸ್.ಟಿ ಎಂಬ ಎರಡು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಉದ್ಘಾಟಿಸಿ ಮಾತನಾಡುತ್ತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ ಇದನ್ನು ಪೂರ್ಣವಾಗಿ ಬಳಸಿಕೊಂಡು ಮುಂದೆ ಬರುವ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಉತ್ತಮ ಉದ್ಯೋಗವನ್ನುಗಳಿಸುವಂತಾಗಲಿ ಎಂದು ಶುಭಹಾರೈಸಿದರು.

IMG_20180326_151242

ಕಾಲೇಜು ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಕುಮಾರ್‌ರವರು ಜಿ.ಎಸ್.ಟಿ ಬಂದು ಒಂದು ವರ್ಷವಾದರೂ ಅದರ ಬಗೆಗೆ ತಪ್ಪು ಕಲ್ಪನೆಗಳಿವೆಯೇ ಹೊರತು ಪೂರ್ಣ ಅರಿವಿನ ಕೊರತೆ ಎದ್ದು ಕಾಣುತ್ತಿದೆ. ಆ ಕಾರಣದಿಂದಾಗಿ ಉಚಿತವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಯ ಅರಿವು ಮೂಡಿಸುವುದು ಈ ಕೋರ್ಸ್‌ನ ಉದ್ದೇಶ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಪ್ರಾಂಶುಪಾಲ ಡಾ|ವಿಘ್ನೇಶ್ವರ ವರ್ಮುಡಿಯವರು ಸರಕು ಮತ್ತು ಸೇವಾ ತೆರಿಗೆಯ ಬಗೆಗೆ ತಿಳುವಳಿಕೆ ನೀಡುವ ಕೋರ್ಸ್‌ಗಳ ಅಗತ್ಯವಿದೆ ಎಂದು ಮನಗಂಡು ಕಣ್ಣೂರು ವಿಶ್ವ ವಿದ್ಯಾನಿಲಯದ ಯಾವುದೇ ಕಾಲೇಜುಗಳಲ್ಲಿಲ್ಲದ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡುವ ಪ್ರಯತ್ನಕ್ಕೆ ತೊಡಗಿದ್ದೇವೆ. ಇದನ್ನು ಪ್ರಯೋಜನಕಾರಿಯಾಗುವಂತೆ ಬಳಸಿಕೊಂಡು ಸಾಮಾಜಿಕ ಬದುಕಿಗೆ ಕಾಲಿಡುವಾಗ ಇಲ್ಲಿ ಕಲಿತ ವಿದ್ಯಾರ್ಥಿ ಸ್ವಾವಲಂಬಿಯಾಗಿ ಬದುಕುವಂತಾಗಬೇಕು ಎಂಬುದು ನಮ್ಮ ಹೆಬ್ಬಯಕೆ. ಅದಕ್ಕಾಗಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸುವ ನಿಟ್ಟಿನಲ್ಲಿ ಇಂತಹ ತರಬೇತಿಗಳು ಅತೀ ಅಗತ್ಯ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮಾಲಿನಿ ಎನ್. ಶುಭಹಾರೈಸಿದರು. ಉಪನ್ಯಾಸಕಿ ಮಧುರವಾಣಿ ಬಿ. ಸ್ವಾಗತಿಸಿ, ಶ್ರುತಿ ಯು.ಜಿ. ವಂದಿಸಿದರು. ಉಪನ್ಯಾಸಕ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.