×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಜೀವನದ ಮಹೋನ್ನತಿಗೆ ಶಿಕ್ಷಣ

ಮಾನವನು ಜೀವನದಲ್ಲಿ ಗುರಿಯನ್ನು ಸಾಧಿಸಿ ಮಹೋನ್ನತಿಯನ್ನು ಪಡೆಯಬೇಕಾದರೆ ಶಿಕ್ಷಣ ಅತೀ ಅಗತ್ಯ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಸರಸ್ವತಿಯವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವೃತ್ತಿ ಮಾರ್ಗದರ್ಶನದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಪ್ರಸ್ತುತ ಸಮಾಜದಲ್ಲಿ ಉತ್ತಮ ಸ್ಥಾನ, ಮಾನ, ಗೌರವಗಳು ಲಭಿಸಬೇಕಾದರೆ ಸ್ನಾತಕೋತ್ತರ ಶಿಕ್ಷಣಗಳನ್ನು ಹೊಂದಿರಬೇಕು. ಇಂದಿನ ಸ್ಷರ್ಧಾತ್ಮಕ ಬದುಕಿನಲ್ಲಿ ಪ್ರತಿಕ್ಷಣವೂ ಹೊಸತನ್ನು ಕಲಿಯುತ್ತ ಕಾಲಕ್ಕೆ ತಕ್ಕಂತೆ ಬೌದ್ಧಿಕತೆಯನ್ನು ಬೆಳೆಸುತ್ತ ಹೋಗಬೇಕು. ನಾವು ನಿಂತ ನೀರಿನಂತಿರದೆ

Read More

ಯಕ್ಷಗಾನದಲ್ಲಿ ನಾಲಂದಕ್ಕೆ ’ಎ’ ಗ್ರೇಡ್

ಕಣ್ಣೂರು ವಿಶ್ವವಿದ್ಯಾನಿಲಯದ 2017-18 ರ ಕಲೋತ್ಸವವು ಎಸ್.ಎನ್ ಕಾಲೇಜ್ ತೋಟಡದಲ್ಲಿ ನಡೆಯಿತು. ಯಕ್ಷಗಾನ ಸ್ಪರ್ಧೆಯಲ್ಲಿ ’ಸುದರ್ಶನ ವಿಜಯ’ ಎಂಬ ಕಥಾ ಪ್ರಸಂಗವನ್ನು ಪ್ರದರ್ಶಿಸಿ ಪೆರ್ಲ ನಾಲಂದ ಮಹಾವಿದ್ಯಾಲಯವು ’ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಸಾಗರ್, ನಿರಂಜನ್ ಬಳ್ಳುಳ್ಳಾಯ, ವಿಕಾಸ್, ಅಭಿಲಾಷ್, ಅರ್ಪಿತ್, ಅಕ್ಷತಾ, ಪ್ರಜ್ಞಾ, ನಿಶಾ, ಶರ್ಮಿತಾ ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಉಪನ್ಯಾಸಕ, ಉಪನ್ಯಾಸಕಿಯರು ಅಭಿನಂದಿಸಿದರು. ಯಕ್ಷಗಾನ ತಂಡದ ತರಬೇತುದಾರರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸಹಕರಿಸಿದರು. ಉಪನ್ಯಾಸಕ ಶಂಕರ

Read More

ತಾಳ್ಮೆ, ಏಕಾಗ್ರತೆಗಳೇ ನೆನಪಿಗೆ ಶಕ್ತಿ

ವಿದ್ಯಾರ್ಥಿಗಳಲ್ಲಿ ತಾಳ್ಮೆ, ಏಕಾಗ್ರತೆಗಳಿದ್ದಾಗ ಮಾತ್ರ ನೆನಪಿನ ಶಕ್ತಿ ಹೆಚ್ಚುವುದು ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕೌನ್ಸಿಲರ್ ಗಿರೀಶ್‌ರವರು ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಪ್ಲೇಸ್‌ಮೆಂಟ್‌ಸೆಲ್‌ನ ವತಿಯಲ್ಲಿ ’ಪರೀಕ್ಷಾ ತಯಾರಿ ಮತ್ತು ನೆನಪಿನ ಶಕ್ತಿ’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ನಮ್ಮಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ, ಅದನ್ನು ನಾವು ಅರಿತಿರುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಸದಾ ಧನಾತ್ಮಕ ಚಿಂತನೆಯನ್ನು ಮಾಡುತ್ತ ಸಾಗಿದರೆ ಎಲ್ಲ ಕಡೆಗಳಲ್ಲಿ ಗೆಲ್ಲುತ್ತೇವೆ, ನಮ್ಮಲ್ಲಿ ಋಣಾತ್ಮಕ ಚಿಂತನೆಗಳು ಬಂದಾಗ ಸೋಲುತ್ತೇವೆ

Read More

ವಿದ್ಯಾರ್ಥಿಗಳ ಸಾಧನೆ

ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ’ವಾಣಿಜ್ಯ ಮತ್ತು ನಿರ್ವಹಣಾ’ ವಿಭಾಗದ ’ದ್ಯುತಿ ೨ಏ೧೮’ ಕ್ವಿಜ್ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಕಾಸ್, ರೂಪಲಕ್ಷ್ಮಿ, ಧನ್ಯ ಕೆ. ಪಿ, ಶೀತಲ್, ಆಯಿಶತ್ ಶಂಸೀರ, ಅಶ್ವಿನಿ ಕ್ರಾಸ್ತ, ಪ್ರದೀಪ್ ಇವರು ಭಾಗವಹಿಸಿದರು. ವಿದ್ಯಾರ್ಥಿಗಳ ಸಾಧನೆಗಾಗಿ ನಾಲಂದದ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಆಡಳಿತಾಧಿಕಾರಿ ಕೆ. ಶಿವಕುಮಾರ್ ಅಭಿನಂದನೆ ಹೇಳಿದರು.

Read More

ಸಮಷ್ಠಿಯ ಚಿಂತನೆ ಮೂಡಿಬರಬೇಕು

ಸಂಸ್ಥೆಯಲ್ಲಿ ಕೆಲಸಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ವ್ಯಷ್ಠಿ ಮರೆತು ಸಮಷ್ಠಿಯ ಚಿಂತನೆಯನ್ನು ಮಾಡುತ್ತ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಸಂಸ್ಥೆ ಉಜ್ವಲವಾಗಿ ಬೆಳೆಯುತ್ತದೆ. ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್‌ರವರು ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಶಂಕರನಾರಾಯಣ ಹೊಳ್ಳರ ಬೀಳ್ಕೊಡುಗೆ ಸಮಾರಂಭದಲ್ಲಿ ನುಡಿದರು. ನಾವು ಹಾಕುವ ತಳಪಾಯದಲ್ಲಿರುತ್ತದೆ ಅದರ ಭವಿಷ್ಯ. ಅಂತಹ ಕೆಲಸವನ್ನು ಹಿಂದಿನ ಪ್ರಾಂಶುಪಾಲರು ಮಾಡಿದ್ದಾರೆ. ಸಂಸ್ಥೆ ಭವಿಷ್ಯತ್ತಿನಲ್ಲಿ ನಾಲಂದ ವಿಶ್ವವಿದ್ಯಾನಿಲಯದಂತಾಗಲಿ ಎಂದು ಹಾರೈಸಿ, ಶಂಕರನಾರಾಯಣ ಹೊಳ್ಳ ದಂಪತಿಗಳಿಗೆ ಶುಭವಾಗಲೆಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ

Read More

ಮಾನವೀಯ ಸಂಬಂಧ ಮತ್ತು ನಾಯಕತ್ವ ಗುಣ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ’ಮಾನವೀಯ ಸಂಬಂಧಗಳು ಮತ್ತು ನಾಯಕತ್ವ ಗುಣ’ ಎಂಬ ವಿಷಯದ ಬಗೆಗೆ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಟ್ಲ ಜೆ.ಸಿ.ಐ. ಟ್ರೈನರ್ ಹಸನ್ ವಿಟ್ಲ ಭಾಗವಹಿಸಿದ್ದರು. ಮಾನವ ಹುಟ್ಟುವಾಗ ಮನುಷ್ಯ ರೂಪದ ಪ್ರಾಣಿಯಾಗಿರುತ್ತಾನೆ. ಬೆಳೆಯುತ್ತ ಸಂಸ್ಕಾರಗೊಂಡ ಮಾನವನಾಗುತ್ತಾನೆ. ನಮ್ಮಲ್ಲಿರುವ ಕೆಟ್ಟದನ್ನು ಕಳೆದು ಒಳ್ಳೆಯದನ್ನು ಇತರರಿಗಾಗಿ ಸವೆಸಿ ಉತ್ತಮ ಮಾನವರಾಗೋಣ. ನಾವು ಇತರರನ್ನು ತಿದ್ದುವುದಕ್ಕಿಂತ ಮೊದಲು ನಾವು ನಮ್ಮನ್ನು ಸರಿಮಾಡೋಣ ಎಂದು ಅವರು ನುಡಿದರು. ಭಾರತೀಯ ಸಂಸ್ಕೃತಿಯಲ್ಲಿ

Read More

ಉಜ್ವಲ ದೇಶಪ್ರೇಮ ಇಂದಿನ ಅಗತ್ಯ

ಪ್ರಸಕ್ತ ಯಾಂತ್ರಿಕ ಬದುಕಿನಲ್ಲಿ ಗುರು ಹಿರಿಯರಲ್ಲಿ ವಿನಯವನ್ನೂ, ದೇಶ ಪ್ರೇಮವನ್ನೂ ಉಳಿಸಿ ಬೆಳೆಸಿ ಕೊಂಡು ಬಂದರೆ ದೇಶ ಉಜ್ವಲಗೊಳ್ಳುವುದರೊಂದಿಗೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಭಾರತೀಯ ವಾಯುಪಡೆಯ ನಿವೃತ್ತ ಸರ್ಜನ್ ಹರಿಪ್ರಸಾದ ಪೆರ್ಮುಖ ಹೇಳಿದರು. ಅವರು ಪೆರ್ಲ ನಾಲಂದ ಕಾಲೇಜಿನ ಗಣರಾಜ್ಯೋತ್ಸವದ ದ್ವಜಾರೋಹಣಗೈದು ಮಾತನಾಡಿದರು. ಭಾರತಾಂಬೆಯ ಮಕ್ಕಳಾಗಿ ಹುಟ್ಟಿದ ನಾವು ಧನ್ಯರು. ದೇಶಕ್ಕೆ ನಾವು ಏನು ಕೊಟ್ಟೆವು ಎಂಬುದು ಮುಖ್ಯ ಆದುದರಿಂದ ನೀವೆಲ್ಲ ದೇಶ ಸೇವಕರಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ ಕಾರ್ಯಕ್ರಮದ

Read More

ಸ್ಪರ್ಧಾಮನೋಭಾವ ಬೆಳೆಯಲಿ

ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಹಾಗಿದ್ದರೆ ಮಾತ್ರ ಕಾಲಕ್ಕೆ ತಕ್ಕಂತೆ ಬೆಳೆಯಲು ಸಾಧ್ಯ. ಅಂತಹವನಿಗೆ ಲೋಕದಲ್ಲಿ ಸ್ಥಾನ, ಮಾನ, ಗೌರವಗಳು ಸಿಗುತ್ತವೆ ಎಂದು ಡಾ| ಜಯಗೋವಿಂದ ಉಕ್ಕಿನಡ್ಕ ಅವರು ನುಡಿದರು ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ಹಮ್ಮಿಕೊಂಡ ಬಿ. ಕ್ವಿಜ್ 2018 ನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲೋಕದ ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಇಂತಹ ಸ್ಪರ್ಧೆಗಳು ಅತೀ ಅಗತ್ಯ ಎಂದು ಶುಭಹಾರೈಸಿದರು.

Read More

ಇಂಧನ ಮಹತ್ವ ಅರಿಯಬೇಕು

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಇಂಧನ ಸಂರಕ್ಷಣೆ’ ಎಂಬ ವಿಷಯದ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕೇರಳ ವಿದ್ಯುಚ್ಚಕ್ತಿ ಇಲಾಖೆಯ ಇಂಜಿನಿಯರ್ ನಾಗರಾಜ ಭಟ್ಟರವರು ಮಾತನಾಡುತ್ತ ಇಂದಿನ ಯಾಂತ್ರಿಕ ಯುಗದಲ್ಲಿ ಇಂಧನಗಳಿಲ್ಲದೆ ದೈನಂದಿನ ಬದುಕು ನಡೆಯಲಾರದು ಎಂಬ ಪರಿಸ್ಥಿತಿ ಬಂದಿದೆ. ಅದು ತಿಳಿದಿದ್ದರೂ ಜನರು ಇಂಧನವನ್ನು ವ್ಯರ್ಥವಾಗಿ ಹಾಳು ಮಾಡುತ್ತಿದ್ದಾರೆ. ಒಮ್ಮೆ ನಷ್ಟವಾದುದು ಮತ್ತೆ ದೊರಕಲಾರದು. ಆದುದರಿಂದ ಪ್ರತಿಯೊಬ್ಬ ವ್ಯಕ್ತಿ ಇಂಧನದ ಮಹತ್ವವನ್ನು ಅರಿತು ಮಿತವಾಗಿ ಬಳಸಿದರೆ ಕೊರತೆ ಕಂಡುಬರಲಾರದು. ಬೆಳವಣಿಗೆಯ ವೇಗ ಹೆಚ್ಚಿದಂತೆ

Read More

ಪರಿಸರಕ್ಕೆ ಪ್ಲಾಸ್ಟಿಕ್ ಮಾರಕ

ಪ್ಲಾಸ್ಟಿಕ್‌ನ ಉಪಯೋಗದಿಂದ ಪರಿಸರನಾಶವಾಗುವುದರೊಂದಿಗೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಈಶ್ವರ ಶರ್ಮ ನಲ್ಕರವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳು ಎಂಬ ವಿಷಯz’ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಪ್ಲಾಸ್ಟಿಕ್ ನಿರೋಧಿಸಿದರೆ ಮಾತ್ರ ಪರಿಣಾಮಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತಾಪಮಾನದ ಏರುವಿಕೆ ಮತ್ತು ಪ್ರಾಕೃತಿಕ ವೈಪರೀತ್ಯಗಳಿಗೆ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯೇ ಕಾರಣ ಎಂದರು.

Read More