×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಸ್ವಾವಲಂಬಿ ಬದುಕಿಗೆ- ಸ್ವ ಉದ್ಯೋಗ

ಮಾನವನು ಸ್ವಾವಲಂಬಿಯಾಗಿ ಬದುಕಬೇಕಾದರೆ ಸ್ವ- ಉದ್ಯೋಗಿಯಾಗಿರಬೇಕು. ಎಂದು ಕೈಗಾರಿಕಾ ವಿಸ್ತರಣಾಧಿಕಾರಿಯಾದ ಅಶೋಕ್ ಎನ್. ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ನಡೆಸುವ ಸ್ವ- ಉದ್ಯೋಗ ಎಂಬ ಸರ್ಟಿಫಿಕೇಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುಡಿಕೈಗಾರಿಕೆಗಳಿಗೆ ಪ್ರಧಾನ ಸ್ಥಾನವಿತ್ತು. ಆ ಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಊರೂರು ಅಲೆಯುತ್ತಿರಲಿಲ್ಲ ಸ್ವಾವಲಂಬಿಗಳಾಗಿದ್ದರು. ಇಂದು ಅದನ್ನು ಮರೆತುದರಿಂದ ದೇಶದಲ್ಲಿ ನಿರುದ್ಯೋಗಿಗಳು ಸೃಷ್ಠಿಯಾಗುತ್ತಿದ್ದಾರೆ. ಇದಕ್ಕೆ ಸ್ವ-ಉದ್ಯೋಗ ಒಂದೇ ಪರಿಹಾರ ಮಾರ್ಗ. ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳು ಮತ್ತು ಸಾಧ್ಯತೆಗಳಿವೆ. ಸರಕಾರ ತುಂಬಾ ಸವಲತ್ತುಗಳನ್ನು ಕೊಡುತ್ತದೆ. ಆದರೆ ಅದನ್ನು ಅರಿತುಕೊಂಡು ಮುನ್ನಡೆಯುವ ಧೈರ್ಯ ಜನರಲ್ಲಿ ಇಲ್ಲವಾಗಿ ಇಂದಿನ ವಿದ್ಯಾರ್ಥಿಗಳಿಗೆ ಆ ನಿಟ್ಟಿನಲ್ಲಿ ಧೈರ್ಯ ತುಂಬಲು ಮತ್ತು ಸ್ವ-ಉದ್ಯೋಗ ಸಾಧ್ಯತೆಗಳನ್ನು ತಿಳಿದು ಕೊಳ್ಳಲು ಇಂತಹಾ ಕೋರ್ಸ್ ಸಹಕಾರಿಯಾಗುತ್ತದೆ. ಈ ರೀತಿಯ ಕಾರ್ಯಗಳನ್ನು ಹೆಚ್ಚು ಹೆಚ್ಚು ಮಾಡಿದಾಗ ಜನ ಸ್ವಾವಲಂಬಿಗಳಾಗುತ್ತಾರೆ. ಮಾತ್ರವಲ್ಲದೆ ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.

IMG_4425

ಕಾಲೇಜು ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿದ್ಯಾವಂತರಿಗೆಲ್ಲ ಸರಕಾರಿ ಉದ್ಯೋಗ ದೊರಕಲಾರದು. ಅದನ್ನು ನಿರೀಕ್ಷಿಸಿ ಕುಳಿತರೆ ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತದೆ. ಆ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆ ಕಂಡುಬಂದಿದೆ ಅದನ್ನು ಬಿಟ್ಟು ಸ್ವ ಉದ್ಯೋಗದ ಕಡೆಗೆ ಮನ ಮಾಡಿದರೆ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡಂತಾಗುತ್ತದೆ, ಮಾತ್ರವಲ್ಲದೆ ನಮ್ಮ ಬದುಕು ಸುಗಮವಾಗುತ್ತದೆ ಎಂದರು.

ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ. ಶಿವಕುಮಾರ್‌ರವರು ಪ್ರತಿಯೊಬ್ಬರೂ ಉದ್ಯೋಗಿಗಳಾಗಿ ನಿಮ್ಮ ಬದುಕು ಹಸನಾಗಿಸಿಕೊಳ್ಳಿ ಎಂದು ಶುಭಹಾರೈಸಿದರು. ಸ್ಟಾಫ್‌ ಕಾರ್ಯದರ್ಶಿ ಪ್ರೋ. ಕೇಶವ ಶರ್ಮ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೋ. ಶಂಕರ ಖಂಡಿಗೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪಾತಿಮ್ಮತ್ ಶಾಹಿರ ಸ್ವಾಗತಿಸಿ, ಸೋನಲ್ ರಾವ್ ವಂದಿಸಿದರು, ತಪ್ಸೀರ ಕಾರ್ಯಕ್ರಮ ನಿರೂಪಿಸಿದರು.

ದೇಶದಲ್ಲಿ ವಾರ್ಷಿಕವಾಗಿ ಪದವಿಗಳಿಸಿ ಹೊರಬರುತ್ತಿರುವ ಯುವಕರಲ್ಲಿ ಶೇಕಡಾ 59 ಮತ್ತು ಯುವತಿಯರಲ್ಲಿ ಶೇಕಡಾ 24 ಗ್ರಾಮೀಣ ಭಾಗದಲ್ಲಿ ಕಾರ್ಮಿಕರಾಗಿದ್ದು, ಇವರೊಂದಿಗೆ ಶೇಕಡಾ 16 ರಷ್ಟು ಪದವಿ ಪಡೆದ ಯುವಕರು ಮತ್ತು ಶೇಕಡಾ 28 ರಷ್ಟು ಯುವತಿಯರು ನಿರುದ್ಯೋಗಿಗಳಾಗಿದ್ದಾರೆ. ಇವರೆಲ್ಲ ಸ್ವಾಲಂಬಿಗಳಾಗಬೇಕಿದ್ದರೆ ಸ್ವ-ಉದ್ಯೋಗದ ಬಗ್ಗೆ ಆಸಕ್ತಿ ತೋರಬೇಕು. ಸ್ವ- ಉದ್ಯೋಗಕ್ಕಾಗಿ ಧಾರಾಳ ಅವಕಾಶಗಳಿದ್ದು ಅವನ್ನು ಯುವ ಜನಾಂಗ ತನ್ನದಾಗಿಸಿಕೊಳ್ಳಬೇಕು.

ಡಾ| ವಿಘ್ನೇಶ್ವರ ವರ್ಮುಡಿ