News & Events
ಏಕದಿನ ವಿಚಾರಗೋಷ್ಠಿ : ನಾಯಕತ್ವಕೌಶಲ್ಯ
ಪೆರ್ಲ: ನಾಲಂದ ಮಹಾವಿದ್ಯಾಲಯ ಎನ್.ಎಸ್.ಎಸ್ ಘಟಕ ಮತ್ತು ಜೆ.ಸಿ.ಐ.ಯ ಸಹಯೋಗದೊಂದಿಗೆ ನಾಯಕತ್ವ ಕೌಶಲ್ಯದ ಕುರಿತು ಒಂದು ದಿನದ ವಿಚಾರಗೋಷ್ಠಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶಿವಕುಮಾರ್ ವಹಿಸಿ ನಾಯಕನಾದವ ಜವಬ್ದಾರಿಯುತವಾಗಿ ವರ್ತಿಸಿ ಗುಂಪನ್ನು ಮುನ್ನಡೆಸವ ಕೌಶಲ್ಯ ಹೊಂದಿರಬೇಕು ಮತ್ತು ಅವನು ಇತರರಿಗೆ ಮಾದರಿಯಾಗುತ್ತಾನೆ. ನಾಯಕತ್ವಕೌಶಲ್ಯ ವಿಚಾರಧಾರೆ ವಿದ್ಯಾರ್ಥಿಗಳಿಗೆ ಸಹಕಾರಿಯಾಲಿದೆ ಎಂದು ಹೇಳಿದರು. ವಿದ್ವಾನ್ ಎಸ್.ಬಿ. ಖಂಡಿಗೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಸೇವೆಗೋಸ್ಕರ ತಮ್ಮನ್ನು ತಾವು ತೊಡಗಿಸಿಕೊಳ್ಳುವಾಗ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ
ಪ್ರಾಕೃತಿಕ ನೀರು,ಕೆರೆ ; ಜೀವನಾಡಿ-ಕಜಂಪಾಡಿ ಸುಬ್ರಹ್ಮಣ್ಯ ಭಟ್
ಜಲಸಾಕ್ಷರತಾ ಅಭಿಯಾನದ ಭಾಗವಾಗಿ ನಿರ್ಮಿಸುತ್ತಿರುವ ಜೀವಜಲ ಕಿರುಚಿತ್ರದ ಚಿತ್ರೀಕರಣ ಕಜಂಪಾಡಿ ಪ್ರದೇಶದಲ್ಲಿರುವ ಸುಬ್ರಹ್ಮಣ್ಯ ಭಟ್ಟರ ತೋಟದಲ್ಲಿರುವ ಜಲಾಶಯದ (ವಿಶಾಲವಾದಕೆರೆ ) ಪರಿಸರದಲ್ಲಿ ನಡೆಯಿತು. ಸುಬ್ರಹ್ಮಣ್ಯ ಭಟ್ಟರತೋಟದಲ್ಲಿರುವ ವಿಶಾಲವಾದಕೆರೆ ಸ್ವಾತಂತ್ರ್ಯಪೂರ್ವದಲ್ಲಿ ಅವರ ಹಿರಿಯರು ನಿರ್ಮಿಸಿದ್ದು . 1958 ರ ನಂತರ ಸುಬ್ರಹ್ಮಣ್ಯ ಭಟ್ ಅವರು ವಿಶಾಲವಾದ ಕೆರೆಯಲ್ಲಿ ನೀರು ತುಂಬಿ ನಿಲ್ಲುವಂತೆ ಪ್ರತಿ ವರ್ಷವು ಕೆರೆಯ ಕೆಲಸಕಾರ್ಯಗಳನ್ನು ಬಹಳಷ್ಟು ಅಚ್ಚುಕಟ್ಟಾಗಿ ಮಾಡಿಸುತ್ತಾ ಬಂದಿದ್ದಾರೆ. ಸುಮಾರು 15 ಅಡಿ ಆಳ 5000 ಚದರ ಅಡಿ ವಿಸ್ತೀರ್ಣದಲ್ಲಿರುವ ಕೆರೆ ನೀರಿನಿಂದ ತುಂಬಿತುಳುಕುತ್ತಿದೆ. ಪ್ರತೀ ದಿನ ಸುಮಾರು
ಡಿಜಿಟಲ್ & ಕ್ಯಾಶ್‌ಲೆಶ್ ಸಿಸ್ಟಮ್ : ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ
ಪೆರ್ಲ : ನಾಲಂದ ಮಹಾವಿದ್ಯಾಲಯದಲ್ಲಿ ಕಾಲೇಜಿ ಅರ್ಥಶಾಸ್ತ್ರ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗ ಹಾಗೂ ವಿವೇಕಾನಂದ ಕಾಲೇಜು ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿಜಿಟಲ್ ಮತ್ತು ಕ್ಯಾಶ್‌ಲೆಶ್ ಸಿಸ್ಟಮ್ ಎಂಬ ವಿಷಯದಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ನಡೆಯಿತು. ವಿಚಾರಗೋಷ್ಠಿಯನ್ನು ಸುಧೀರ್‌ಕುಮಾರ್ ಶೆಟ್ಟಿ ಎಣ್ಮಕಜೆ ಯು.ಎ. ಇಇದರ ನಿರ್ದೇಶಕರು ಮತ್ತು ಅಧ್ಯಕ್ಷರು ಯು.ಎ.ಇ ಎಕ್ಸೇಂಜ್ .ಯಲ್.ಯಲ್.ಸಿ. ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀ ಸುಧೀರ್‌ಕುಮಾರ್ ಶೆಟ್ಟಿ ಎಣ್ಮಕಜೆ ಅವರು ಡಿಜಿಟಲ್& ಕ್ಯಾಶ್‌ಲೆಶ್ ಸಿಸ್ಟಮ್ ಎಂಬ ವಿಷಯದಲ್ಲಿ ಮಾತಾನಾಡಿದರು. ಸರಕಾರ
ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡ್
ಕಣ್ಣೂರು ವಿಶ್ವವಿದ್ಯಾನಿಲಯದ 2016-17 ನೇ ವರ್ಷದ ಕಲೋತ್ಸವವು ಇತ್ತೀಚೆಗೆ ಕಾಸರಗೋಡು ಎಲ್.ಬಿ.ಎಸ್ ಇಂಜಿನಿಯರಿಂಗ್ ಕಾಲೇಜು, ಪೊವ್ವಲ್‌ನಲ್ಲಿ ನಡೆಯಿತು. ಪೆರ್ಲ ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಕ್ಷಗಾನ ಸ್ಪರ್ಧೆಯಲ್ಲಿ ’ಎ’ ಗ್ರೇಡಿನೊಂದಿಗೆ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ವಿಕಾಸ್ (ದೇವೇಂದ್ರ), ಪ್ರಜ್ಞಾ (ಅಗ್ನಿ), ಗಿರೀಶ್ (ವರುಣ), ಅರ್ಪಿತ್ (ನರಕಾಸುರ), ಅಭಿಲಾಷ್ (ಮುರಾಸುರ), ನಿರಂಜನ್ ಬಲ್ಲುಲಾಯ (ಕೃಷ್ಣ), ಸಾಗರ್ (ಸತ್ಯಭಾಮ), ಶರತ್ ಕುಮಾರ್ ಮತ್ತು ಶರ್ಮಿತಾ (ದೂತರು), ಇವರು ’ನರಕಾಸುರ ಮೋಕ್ಷ’ ಎಂಬ ಕಥಾಭಾಗವನ್ನು ಆಡಿ ತೋರಿಸಿ ಜನಮೆಚ್ಚುಗೆಗೆ ಪಾತ್ರರಾದರು.
ಜಲ ಸಾಕ್ಷರತಾ ಅಭಿಯಾನ ರ್ಯಾಲಿ
ಪೆರ್ಲ: ನಾಲಂದ ಮಹಾವಿದ್ಯಾಲಯದ ಭೂಮಿತ್ರಾ ಸೇನಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನೊಳಗೊಂಡ ಜಲ ಸಾಕ್ಷರತಾ ಅಭಿಯಾನವನ್ನು ರ್‍ಯಾಲಿ ನಡೆಸಿ ಜಲ ಸಂರಕ್ಷಣೆಯ ಘೋಷಣೆಗಳನ್ನು ಕರೆದು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರ್ಯಾಲಿ ಕಾಲೇಜಿನ ಪರಿಸರದಿಂದ ಆರಂಭವಾಗಿ ಪೆರ್ಲ ಪೇಟೆಯಲ್ಲಿ ಸಮಾಪಣೆಗೊಂಡಿತು. ಜಲ ಸಾಕ್ಷರತಾ ಅಭಿಯಾನವನ್ನು ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಕೆ. ಶಿವಕುಮಾರ್ ಉದ್ಘಾಟಿಸಿ, ಪಂಚಭೂತಗಳಲ್ಲಿ ನೀರು ಮತ್ತು ಗಾಳಿ ಅತೀ ಪ್ರಧಾನವಾದದ್ದು. ಇವೆರಡರ ಲಭ್ಯತೆ ಮತ್ತು ಗುಣಮಟ್ಟ ಗಣನೀಯವಾಗಿ ವೈಪರೀತ್ಯವಾಗಿರುವುದು ವಿಷಾಧನೀಯ. ಜಲ ಸಂರಕ್ಷಣೆ ಮತ್ತು ಉಸಿರಾಡಲು
ಡಾ| ಕೆ. ಕಮಲಾಕ್ಷರಿಗೆ ವಿದಾಯ ಕೂಟ
ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ| ಕೆ.ಕಮಲಾಕ್ಷರನ್ನು ಇತ್ತೀಚೆಗೆ ಬೀಳ್ಕೊಡಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಯ ಸಂದರ್ಭ ನೋಡಿ ನಮ್ಮ ನಿರೀಕ್ಷೆಗೂ ಮೀರಿ ತಮ್ಮದೇ ಆದ ರೀತಿಯಲ್ಲಿ ಸಂಸ್ಥೆಯ ಒಳಿತಿಗಾಗಿ ನಿರಂತರವಾಗಿ ದುಡಿದ ಡಾ| ಕಮಲಾಕ್ಷರು ಶುಕ್ಲ ಪಕ್ಷದ ಚಂದ್ರನಂತೆ ಮುಂದೆ ಬದುಕಿನಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘವು ನಾಲಂದ ಕಾಲೇಜನ್ನು ವಹಿಸಿಕೊಂಡಾಗ ಮುಂದೆ ಇದನ್ನು ನಡೆಸುವ ಸಾರಥಿ ಯಾರೆಂಬ ವಿಚಾರ ಬಂದಾಗ
ವಿಶ್ವ ಅರ್ಬುದ ದಿನ
ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ವತಿಯಲ್ಲಿ ವಿಶ್ವ ಅರ್ಬುದ ದಿನವನ್ನು ಆಚರಿಸಲಾಯಿತು. ಮದ್ಯಪಾನ, ಧೂಮಪಾನ, ಹೊಗೆಸೊಪ್ಪಿನ ಸೇವನೆಗಳಿಂದ ಮತ್ತು ಎಂಡೋಸಲ್ಪಾನ್ ಮೊದಲಾದ ಮಾರಕ ವಿಷಗಳನ್ನು ಬಳಸಿ ಬೆಳೆಸಿದ ಆಹಾರಗಳನ್ನು ಸೇವಿಸುವುದರಿಂದ ಆಹಾರ ಕ್ರಮಗಳಿಂದ ಅರ್ಬುದ ರೋಗ ಬರುತ್ತದೆ. ಆದುದರಿಂದ ಕೆಟ್ಟವ್ಯಸನಗಳಿಗೆ ಬಲಿಯಾಗದೆ ಶುದ್ಧ ಆಹಾರವನ್ನು ಸೇವಿಸಿದರೆ ನಮ್ಮ ಬದುಕು ಹಸನಾಗುತ್ತದೆ. ಈ ವಿಚಾರದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದು ಕಾಲೇಜಿನ ಉಪನ್ಯಾಸಕ ಕಿಶನ್ ಪಳ್ಳತ್ತಡ್ಕರವರು ನುಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ್ ಖಂಡಿಗೆಯವರು ಅರ್ಬುದ ರೋಗಗಳಲ್ಲಿ ಹಲವು
’ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆಯಿಂದ ಸುಸ್ಥಿರ ಅಭಿವೃದ್ಧಿ ಹಾಗೂ ಜೀವವೈವಿಧ್ಯಗಳ ಅಸ್ತಿತ್ವ’ ಎಂಬ ಸಂದೇಶದೊಂದಿಗೆ ಜೀವ ಜಲ ಕಿರುಚಿತ್ರಕ್ಕೆ ಚಾಲನೆ.
ಪೆರ್ಲ: ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಭೂಮಿಯ ಮೇಲ್ಮೈ ನೀರಿನ ಸಂರಕ್ಷಣೆ – ಪ್ರಾಕೃತಿಕ ನೀರಿನ ಮೂಲಗಳಾದ ತೋಡು, ಕೆರೆ, ಹಳ್ಳಗಳ ಸಂರಕ್ಷಣೆಯತ್ತ ಜನಜಾಗೃತಿ ಮೂಡಿಸುವಲ್ಲಿ ಹೆಜ್ಜೆಯನ್ನಿಟ್ಟಿದ್ದಾರೆ. ತೋಡುಗಳಿಗೆ ವಿವಿಧ ಶೈಲಿಗಳಲ್ಲಿನ ತಡೆ ನಿರ್ಮಾಣ, ತಡೆಗಳ ಮೂಲಕ ಸಂಗ್ರಹಿದ ನೀರಿನ ಉಪಯೋಗ, ಕೆರೆಗಳ ಸಂರಕ್ಷಣೆ, ಕೃಷಿ ಚಟುವಟಿಕೆಗಳಲ್ಲಿ ನೀರಿನ ಸದ್ಭಳಕೆ ,ಮುಂತಾದ ವಿಷಾಯಾಧರಿತ ಕಿರು ಚಿತ್ರಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ : ಶಂಕರನಾರಾಯಣ ಹೊಳ್ಳ ಚಾಲನೆ ನೀಡಿದರು. ಸ್ಥಳೀಯ ತೋಡುಗಳ ಉಗಮ ಹಾಗೂ ಅವುಗಳ ಹರಿಯುವಿಕೆಯ ವಿವಿಧ ಪ್ರದೇಶಗಳ
ಮಾದಕ ವಸ್ತುಗಳ ವಿರುದ್ದ ತಿಳುವಳಿಕಾ ಜನಜಾಗೃತಿ
ಪೆರ್ಲ : ಕೇರಳ ರಾಜ್ಯ ಯುವಜನ ಆಯೋಗ ಮತ್ತು ಎನ್.ಎಸ್.ಎಸ್ ನ ನೇತೃತ್ವದಲ್ಲಿ ಮಾದಕ ವಸ್ತುಗಳ ವಿರುದ್ದ ತಿಳುವಳಿಕಾ ತರಗತಿಯನ್ನು ನಾಲಂದ ಮಹಾವಿದ್ಯಾಲದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅಬಕಾರಿ ನಿಗ್ರಹ ಅಧಿಕಾರಿ ಯನ್. ಜಿ. ರಘನಾಥನ್ ತರಗತಿ ನಡೆಸಿದರು. ಯುವಜನಾಂಗ ಮಾದಕ ವಸ್ತುಗಳ ದುಷ್ಪಾರಿಣಮಗಳ ಬಗ್ಗೆ ತಿಳಿದು ಜಾಗೃತರಾಗಬೇಕು ಹಾಗೂ ಮದ್ಯ, ಬೀಡಿ-ಸಿಗರೇಟು, ಪಾನ್ ಮಸಾಲ, ಗಾಂಜ, ಮುಂತಾದ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಹೇಳಿದರು. ಕೇರಳ ರಾಜ್ಯ ಯುವಜನ ಆಯೋಗದ ಸದಸ್ಯ ಮಣಿಕಂಠ, ಪ್ರಸ್ತುತ
ಪ್ರಜಾಪ್ರಭುತ್ವ ದಿನಾಚರಣೆ
ಪೆರ್ಲ ನಾಲಂದ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ಎನ್. ಎಸ್. ಎಸ್ ನ ಸಹಯೋಗದೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾರತೀಯ ಸೇನಾ ನಿವೃತ್ತ ಹವಾಲ್ದಾರ್ ಚಂದ್ರ ಕೆ. ಅವರು ದ್ವಜಾರೋಹಣಗೈದು ಪ್ರಜಾಪ್ರಭುತ್ವದ ಅಂಗವಾಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಿದ್ಯಾರ್ಥಿಗಳ ಪ್ರಾಥನೆಯೊಂದಿಗೆ ಸಭಾಕಾರ್ಯಕ್ರಮವು ಪ್ರಾರಂಭವಾಗಿ ಮುಖ್ಯ ಅತಿಥಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ತನ್ನ ಸೇನಾ ಜೀವನದ ಅನುಭವವಗಳನ್ನು ಹಂಚಿಕ್ಕೊಂಡರು ಹಾಗೂ ವಿದ್ಯಾರ್ಥಿಗಳು ತಮ್ಮನ್ನು ತಾವು ದೇಶ ಸೇವೆಗೆ ತೊಡಗಿಸಿಕ್ಕೊಳ್ಳಬೇಕು ಎಂದರು. ಶ್ರೀಯುತರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 1998 ರಲ್ಲಿ