×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದದಲ್ಲಿ ಯೋಗ ತರಬೇತಿ

ಯೋಗ ಸಂಯೋಜಕ ಶ್ರೀ ಜಯರಾಮ ರವರು ದಿನಾಂಕ 4-8-2017 (ಶುಕ್ರವಾರ) ರಂದು ನಾಲಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ ಯೋಗಾಸನವನ್ನು ಕಲಿಸಿಕೊಟ್ಟರು.

Read More

ನಾಲಂದದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಪರಿಸರ ಸಂರಕ್ಷಣೆಯೇ ನಮ್ಮ ಆರೋಗ್ಯ ರಕ್ಷಣೆ ನಮ್ಮ ಮನೆಯ ಸುತ್ತು ಮುತ್ತ ಸ್ವಚ್ಛವಾಗಿ ಇಟ್ಟು ಕೊಂಡರೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಹಂದಿ ಜ್ವರ ಮೊದಲಾದವುಗಳನ್ನು ತಡೆಗಟ್ಟಬಹುದು. ಮಳೆ ನೀರು ಒಂದೆಡೆ ನಿಂತಾಗ ಅದರಲ್ಲಿ ಸೊಳ್ಳೆಗಳುಂಟಾಗಿ ನಾನಾ ರೀತಿಯ ರೋಗಗಳು ಹರಡಲು ಕಾರಣವಾಗುತ್ತದೆ. ವಿದ್ಯಾರ್ಥಿಗಳಾದ ನೀವು ನಿಮ್ಮ ಪರಿಸರವನ್ನು ಕಾಯ್ದುಕೊಳ್ಳಬೇಕು ಮಾತ್ರವಲ್ಲದೆ ಪರಿಸರದ ಮಹತ್ವವನ್ನು ಇತರರಿಗೆ ತಿಳಿಸಿ ಜಾಗೃತಗೊಳಿಸಬೇಕೆಂದು ಪೆರ್ಲ ಸರಕಾರಿ ಹೋಮಿಯೋ ಆಸ್ಪತ್ರೆಯ ಡಾ| ಸ್ಮಿತಾರವರು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಬಗೆಗೆ ತಿಳಿಸಿಕೊಟ್ಟರು. ಅವರು ಪೆರ್ಲ

Read More

ಎನ್.ಎಸ್.ಎಸ್‌.ನ ಮಹತ್ವದ ಬಗ್ಗೆ ಅರಿವು ಕಾರ್ಯಕ್ರಮ

ಮಾನವ ನಿಜವಾದ ಮನುಷ್ಯನಾಗುವುದು ಸಮಾಜ ಸೇವೆಯಿಂದ. ಒಬ್ಬ ವ್ಯಕ್ತಿ ಸಮರ್ಥನಾಗಿ ಬೆಳೆಯ ಬೇಕಾದರೆ ಸಮಾಜದಿಂದ ಸಾಕಷ್ಟು ಪಡೆದು ಕೊಳ್ಳುತ್ತಾನೆ. ಅದೇ ರೀತಿ ತನ್ನನ್ನು ಗುರುತಿಸಿಕೊಳ್ಳಬೇಕಾದರೆ ಸಮಾಜಕ್ಕೆ ಅರ್ಪಿಸಿಕೊಳ್ಳಬೇಕು. ನಾವು ವಿದ್ಯಾರ್ಥಿ ದೆಸೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿ ಜೀವನದಲ್ಲಿ ಉಳಿಸಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುವುದು. ಆಧುನಿಕ ಯುಗದಲ್ಲಿ ಮಾನವ ಯಾಂತ್ರಿಕನಾಗುತ್ತಾ ಸ್ವಾರ್ಥಿಯಾಗುತ್ತಿದ್ದಾನೆ. ಮಾನವೀಯತೆ, ಬಂಧುತ್ವಗಳ ಅರ್ಥ ಕ್ಷೀಣಿಸುತ್ತಿದೆ. ಅಂತಹಾ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಸಮರ್ಪಣಾ ಭಾವ ಮೂಡಿಸಲು ರಾಷ್ಟ್ರೀಯ ಸೇವಾ ಯೋಜನೆ ಅಗತ್ಯ. ಪಾಠದ ಜೊತೆಗೆ ಸಾಧ್ಯವಾದಷ್ಟು ಸಮಾಜಸೇವೆ ಮಾಡಿ

Read More

ವಿಶ್ವಪ್ರಕೃತಿ ಸಂರಕ್ಷಣಾ ದಿನಾಚರಣೆ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಭೂಮಿತ್ರಾ ಸೇನಾ ಘಟಕದ ವತಿಯಿಂದ ವಿಶ್ವಪ್ರಕೃತಿ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೂಮಿತ್ರಾ ಸೇನಾ ಘಟಕದ ಅಧ್ಯಕ್ಷೆ ಕುಮಾರಿ ಭವ್ಯಶ್ರಿ ವಹಿಸಿ ಉತ್ತಮ ಜೀವನ ನಡೆಸಲು ಪ್ರಕೃತಿ ಸಂರಕ್ಷಣೆ ಅತ್ಯಗತ್ಯ ಎಂದರು. ಮುಖ್ಯ ಅತಿಥಿಯಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ ಮಾತನಾಡಿ ಜೀವಜೈವದ ಉಳಿವಿಗಾಗಿ ಪ್ರಕೃತಿ ಸಂರಕ್ಷಣೆ ಮಾಡುವುದರ ಜೊತೆಗೆ ಪರಿಸರ ಸ್ನೇಹಿಯಾಗಿ ಜೀವನ ಮೈಗೂಡಿಸಿಕೊಳ್ಳಬೇಕು. ನಮ್ಮ ಪರಿಸರದಲ್ಲಿ ಸಸ್ಯ ಸಂಪತ್ತನ್ನು ವ್ಯವಸ್ಥಿತ ರೀತಿಯಲ್ಲಿ ಬೆಳೆಸುವುದರಿಂದ ಗಾಳಿ, ಬೆಳಕು, ಆಹಾರ

Read More

ಜನಸಂಖ್ಯಾ ದಿನಾಚರಣೆ

ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ಆರ್ಥಿಕ ಅಭಿವೃದ್ಧಿಯೂ, ಮಾನವ ಸಂಪನ್ಮೂಲದ ಅಭಿವೃದ್ಧಿಯೂ ಆಗಬೇಕು. ಪ್ರತಿಯೊಬ್ಬ ಮಾನವನೂ ವಿದ್ಯಾವಂತನಾಗಿ ದೇಶಪ್ರೇಮಿಯಾಗಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿ ಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪೆರ್ಲ ನಾಲಂದ ಮಹಾ ವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಶ್ರುತಿಯವರು ಕಾಲೇಜಿನಲ್ಲಿ ನಡೆದ ಜನಸಂಖ್ಯಾ ದಿನಾಚರಣೆಯಂದು ನುಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿ, ಉಪನ್ಯಾಸಕ ಶಂಕರ ಖಂಡಿಗೆಯವರು ಅಧ್ಯಕ್ಷತೆ ವಹಿಸಿ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನದೇ ಆದ ಕರ್ತವ್ಯಗಳು, ಜವಾಬ್ದಾರಿಗಳಿವೆ. ಆದುದರಿಂದ ಯಾರೂ ದೇಶ

Read More

ರಾಗಿಂಗ್ ವಿರುದ್ಧ ಜಾಗೃತಿ

ನಾಲಂದ ಕಾಲೇಜಿನ ಎನ್. ಎಸ್. ಎಸ್ ಘಟಕದ ಸಹಯೋಗದಲ್ಲಿ ರಾಗಿಂಗ್‌ನ ವಿರುದ್ಧ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಬದಿಯಡ್ಕ ಪೋಲಿಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ಕೆ.ಆರ್ ಅಂಬಾಡಿಯವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂಬಾಡಿಯವರು ಮಾತನಾಡುತ್ತಾ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡಿದರೆ ಅದು ರಾಗಿಂಗ್ ಮಾಡಿದಂತಾಗುತ್ತದೆ ಅದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಆದುದರಿಂದ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಕಲಿತು ಉತ್ತಮ ಪ್ರಜೆಗಳಾಗಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸೀನಿಯರ್ ಪೋಲಿಸ್ ಅಧಿಕಾರಿ

Read More

’ವಿದ್ಯಾಸಿಂಧು’ ದತ್ತಿನಿಧಿಗೆ ಚೆಕ್ ಸಮರ್ಪಣೆ

ನಾಲಂದ ಮಹಾವಿದ್ಯಲಯದ ಪ್ರಥಮ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಲ್ಲಿ ಗರಿಷ್ಠ ಸಾಧನೆ ಮಾಡಿದವರಿಗೆ ಕೊಡಮಾಡುವ ’ವಿದ್ಯಾಸಿಂಧು’ ಹೆಸರಿನಲ್ಲಿ ದತ್ತಿನಿಧಿಯೊಂದನ್ನು ಸ್ಥಾಪಿಸಲಾಗಿದೆ. ಈ ಸಂಬಂಧ ಬಿಎಸ್ಸಿ ಜಿಯಾಗ್ರಫಿ ವಿಭಾಗಕ್ಕೆ ದಿ| ಸೋಮಜೆ ಮಹಾಲಿಂಗ ಭಟ್ಟ ಅವರ ಹೆಸರಿನಲ್ಲಿ ಸ್ಥಾಪಿಸಲಾದ ದತ್ತಿನಿಧಿಗೆ ಮಕ್ಕಳಾದ ಶ್ರೀ ಗೋವಿಂದರಾಜ ಮತ್ತು ಸಹೋದರರು 1,50,000 ರೂಪಾಯಿಗಳ ಚೆಕ್‌ನ್ನು ನಾಲಂದದ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೆ. ಶಿವಕುಮಾರ್ ಅವರಿಗೆ ಸಮರ್ಪಿಸಿದರು. ಸೋಮಜೆ ಶ್ರೀ ಗೋವಿಂದರಾಜರ ಮನೆಯಲ್ಲಿ ನಡೆದ ಈ ಸಮರ್ಪಣಾ ಸಮಯದಲ್ಲಿ ಆಡಳಿತ ಸಮಿತಿಯ ಸದಸ್ಯ ಶ್ರೀ ಶಂ.ನಾ.ಖಂಡಿಗೆ ಹಾಜರಿದ್ದು

Read More

ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವ ವಿಧಾನ ಎಂಬ ವಿಷಯದ ಬಗ್ಗೆ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಹೃಷಿಕೇಶ್ ಮಾತನಾಡುತ್ತಾ, ನಮ್ಮ ಪರಿಸರ ಕಲುಷಿತಗೊಂಡಾಗ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಸಾಂಕ್ರಾಮಿಕ ರೋಗಗಳು ಹರಡುವುದು ಮುಖ್ಯವಾಗಿ ಸೊಳ್ಳೆಗಳಿಂದ. ಸಂಧ್ಯಾ ಸಮಯದಲ್ಲಿ ಹೆಣ್ಣು ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೊ ಜ್ವರ ಹರಡುತ್ತದೆ. ಅದೇ ರೀತಿ ಎಚ್1ಎನ್1 ಮಲೇರಿಯಾ ಮೊದಲಾದ ರೋಗಗಳು ಬಾರದಂತೆ ತಡೆಗಟ್ಟಬೇಕಾದರೆ ಪರಿಸರ ಸ್ವಚ್ಛವಾಗಿರಬೇಕು. ನಮ್ಮ ಆರೋಗ್ಯ ನಮ್ಮ ಕೈಯಲೇ ಇದೆ ಎಂದು ರೋಗ ತಡೆಗಟ್ಟುವ ವಿಧಾನಗಳನ್ನು

Read More

ಮಾದಕ ವ್ಯಸನ ವಿರೋಧಿ ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಮಾದಕ ವ್ಯಸನ ವಿರೋಧಿ ದಿನವನ್ನು ಉತ್ತಮ ಕಾರ್ಯಕ್ರಮದೊಂದಿಗೆ ಆಯೋಜಿಸಲಾಯಿತು. ಕಾಲೇಜು ಉಪನ್ಯಾಸಕ ಕೆ.ಕೇಶವಶರ್ಮರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಮನುಷ್ಯ ಅಮಲು ಪದಾರ್ಥಗಳ ಬಳಕೆಯಿಂದ ಬುದ್ಧಿ ಸ್ವಾಸ್ಥ್ಯ ಕಳೆದು ಮೃಗವಾಗುತ್ತಾನೆ. ಮನಸ್ಸು ಶುದ್ದವಿದ್ದರೆ ನಾವು ಮತ್ತು ನಮ್ಮ ಪರಿಸರ ಶುದ್ದವಾಗಿರುತ್ತದೆ. ಮಾನವರಾದ ನಾವು ಶುದ್ದರಾಗಿ ನಮ್ಮಿಂದ ಲೋಕಪರಿಶುದ್ದಗೊಂಡು ಮಾದಕ ಮುಕ್ತ ಭಾರತ ನಿರ್ಮಾಣವಾಗಬೇಕು. ಇಂದು ಯುವ ಜನಾಂಗ ಶೋಕೀ ಜೀವನಕ್ಕೆ ಮರುಳಾಗಿ ಮಾದಕ ದ್ರವ್ಯಗಳ ದಾಸರಾಗಿರುವುದು ಸಾಮಾನ್ಯವಾಗಿದೆ. ಅದು ಮೊದಮೊದಲು

Read More

ನಾಲಂದದಲ್ಲಿ ವಿಶ್ವಯೋಗ ದಿನ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಎನ್. ಎಸ್. ಎಸ್ ಘಟಕದ ಸಹಯೋಗದೊಂದಿಗೆ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ನಾಲಂದ ಆಡಳಿತಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಡಾ| ಉಕ್ಕಿನಡ್ಕ ಮಾತನಾಡುತ್ತ ಯೋಗ ಎಂಬುದು ಒಂದು ಮತೀಯ ಚಿಂತನೆಯಲ್ಲ ಅದೊಂದು ಧರ್ಮ. ಮಾನವ ತನ್ನ ಜೀವನದಲ್ಲಿ ಒಂದು ಗುರಿಯನ್ನು ಸಾಧಿಸಲು ಯೋಗ ಅಗತ್ಯ. ಅದನ್ನು ಅಭ್ಯಾಸ ಮಾಡಿದರೆ ಮನಸ್ಸು ಶುದ್ಧವಾಗುತ್ತದೆ. ಜೀವನ ಸಾರ್ಥಕಗೊಳ್ಳುತ್ತದೆ, ರೋಗ ದೂರವಾಗುತ್ತದೆ ಎಂದು ನುಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ

Read More