ಕಾಸರಗೋಡು : ಕಾಞಂಗಾಡು ನೆಹರು ಕಾಲೇಜಿನಲ್ಲಿ ನಡೆದ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜು ತಂಡ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
ಕಾಲೇಜು ವಿದ್ಯಾರ್ಥಿಗಳಾದ ನಿರಂಜನ್ ಬಲ್ಲುಳ್ಳಾಯ, ನಿತಿನ್ ಕುಮಾರ್, ಅಶ್ವಿನಿ, ದೀಕ್ಷಿತ್, ಅಕ್ಷಯ್, ರೂಪ, ನಿಶ, ಅಕ್ಷತ ಹಾಗೂ ಭವ್ಯಶ್ರೀ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಟ್ಯ ಗುರು ಬಾಲಕೃಷ್ಣ ಉಡ್ಡಂಗಳ ನಿರ್ದೇಶನ ಹಾಗೂ ದಾಮೋದರ ಬೆಟ್ಟಂಪಾಡಿ ಭಾಗವತಿಕೆ, ರಾಜೇಂದ್ರ ಪುಂಡಿಕೈ ಚೆಂಡೆ, ವರ್ಷಿತ್ ಕೆಜೆಕ್ಕಾರ್ ಮದ್ದಳೆಯಲ್ಲಿ ಸಹಕರಿಸಿದ್ದರು.
ಉಪನ್ಯಾಸಕರುಗಳಾದ ಶಂಕರ ಖಂಡಿಗೆ, ಸುರೇಶ್ ಕೆ.ಎಂ., ಶಿಲ್ಪ, ಕೃಷ್ಣವೇಣಿ ಮತ್ತು ಪ್ರಜಿತ್ ಯಕ್ಷಗಾನ ತಂಡದ ಉಸ್ತುವಾರಿ ವಹಿಸಿದ್ದರು.
ಕಾಲೇಜು ಪ್ರಾಂಶುಪಾಲ ಡಾ.ವಿಘ್ನೇಶ್ವರ ವರ್ಮುಡಿ,ಆಡಳಿತ ಮಂಡಳಿ ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್ ಕೆ., ಕಾಲೇಜು ಯೂನಿಯನ್ ಅಧ್ಯಕ್ಷೆ ನಯನಶ್ರೀ, ಫೈನ್ ಆರ್ಟ್ಸ್ ಕಾರ್ಯದರ್ಶಿ ತನಿಷ್ ರಾಜ್ ಅಭಿನಂದನೆ ವ್ಯಕ್ತ ಪಡಿಸಿದ್ದಾರೆ.