ಪೆರ್ಲ: ಕಣ್ಣೂರು ವಿಶ್ವ ವಿದ್ಯಾಲಯ ಅಂಗೀಕೃತ ಪೆರ್ಲ ನಾಲಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಬ್ರಿಡ್ಜ್ ಕೋರ್ಸ್ ನಡೆಯಲಿದೆ.
ಏಪ್ರಿಲ್ 1 ರಿಂದ ತರಬೇತಿ ಆರಂಭವಾಗಲಿದ್ದು, ಮಾರ್ಚ್ 2019 ರಲ್ಲಿ ಪ್ಲಸ್ ಟು ಪರೀಕ್ಷೆ ಬರೆದ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟೇಟಿಸ್ಟಿಕ್ಸ್, ಮಾರ್ಕೆಟಿಂಗ್ ವಿತ್ ಸೋಫ್ಟ್ ಸ್ಕಿಲ್ ಡೆವೆಲಪ್ಮೆಂಟ್, ಸ್ಪೋಕನ್ ಇಂಗ್ಲೀಷ್ ವಿಷಯಗಳಲ್ಲಿ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಮಾರ್ಚ್ 31ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕಾಗಿದ್ದು ಹೆಚ್ಚಿನ ಮಾಹಿತಿ ಅಥವಾ ಹೆಸರು ನೊಂದಾವಣೆಗೆ ಕಾಲೇಜು ಕಚೇರಿ ದೂರವಾಣಿ ಸಂಖ್ಯೆ 04998 226350 ಅಥವಾ 8086831333, 9496476953 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕಾಲೇಜು ಪ್ರಕಟಣೆಯಲ್ಲಿ ತಿಳಿಸಲಾಗಿದೆ.