×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಪ್ರತಿಭೆಯನ್ನು ಹೊರಹೊಮ್ಮಿಸಲು ಕಾರ್ಯಪ್ರವೃತ್ತರಾಗೋಣ

ಉನ್ನತ ಮಟ್ಟದ ತಂತ್ರಜ್ಞಾನದ ಬಳಕೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಇನ್ನೂ ಕಲಿಯುವಂತದ್ದು ಸಾಕಷ್ಟಿವೆ. ಅಂತಹಾ ಜ್ಞಾನದ ಅಭಿವೃದ್ದಿಗೆ ಮುಂದಿನ ಪೀಳಿಗೆಯು ಸೂಕ್ತವಾಗಿದೆ. ಗ್ರಾಮೀಣ ಬದುಕಲ್ಲಿ ತಂತ್ರಜ್ಞಾನವನ್ನು ಪಸರಿಸಲು ಇಂದಿನ ವಿದ್ಯಾರ್ಥಿ ಸಮೂಹವು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸುವತ್ತ ಕಾರ್ಯಪ್ರವೃತ್ತರಾಗಬೇಕು. ಅಂತೆಯೇ ವಿದ್ಯಾರ್ಥಿ ಸಮೂಹವು ಬರುವಂತಹ ಅವಕಾಶಗಳ ಸದ್ವಿನಿಯೋಗ ಮಾಡುವತ್ತ ಗಮನಹರಿಸಬೇಕು. ಹಾಗಾದಲ್ಲಿ ಮಾತ್ರವೇ ಕಲಾಂರ ಗ್ರಾಮೀಣ ವಿಕಾಸದ ಕನಸು ನನಸಾಗಲು ಸಾಧ್ಯ ಎಂದು ಇಸ್ರೋ (ಐ.ಎಸ್.ಆರ್.ಒ)ದ ನಿವೃತ್ತ ಖಗೋಳ ವಿಜ್ಞಾನಿ ಪ್ರೊ. ಯಂ. ಕೃಷ್ಣಸ್ವಾಮಿಯವರು ನುಡಿದರು. ಅವರು ಪೆರ್ಲ

Read More

ನಾಲಂದ ಮಹಾವಿದ್ಯಾಲಯ ಆಶ್ರಯದಲ್ಲಿ ವೈದ್ಯಕೀಯ ಶಿಬಿರ

ಪೆರ್ಲ ನಾಲಂದ ಮಹಾವಿದ್ಯಾಲಯದ ಗ್ರಾಮವಿಕಾಸ ಯೋಜನೆಯ ಅಂಗವಾಗಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರು ಅಕ್ಟೋಬರ್ 28 ರಂದು ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿಕೊಟ್ಟರು. ಸ್ವರ್ಗ ಶಾಲೆಯ ವ್ಯವಸ್ಥಾಪಕ ಹೃಷಿಕೇಶ ಭಟ್‌ರವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕೆ.ಎಂ.ಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಹರ್ಬಟ್ ವೈದ್ಯಕೀಯ ಶಿಬಿರದಲ್ಲಿ ಮಕ್ಕಳ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಗಳನ್ನು ನಡೆಸಿ ಸೂಕ್ತ ಮಾಹಿತಿಗಳನ್ನು

Read More

ನಾಲಂದದಲ್ಲಿ ರಕ್ತದಾನ ಶಿಬಿರ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಕಾಲೇಜ್ ಯೂನಿಯನ್ ರಕ್ತದಾನ ಶಿಬಿರದ ಮೂಲಕ ಎನ್.ಎಸ್.ಎಸ್ ದಿನಾಚರಣೆಯನ್ನು ಆಚರಿಸಿತು. ಕಾಲೇಜು ಪ್ರಾಂಶುಪಾಲ ಪ್ರೊ| ಪಿ. ಶಂಕರನಾರಾಯಣ ಹೊಳ್ಳರು ಉದ್ಘಾಟಿಸಿ ಮಾನವನು ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಂಡು ರಕ್ತದಾನ ಮಾಡಿ ಇತರರಿಗೆ ಜೀವತುಂಬುವ ಮಹತ್ಕಾರ್ಯವನ್ನು ಬದುಕಿನಲ್ಲಿ ಮಾಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಡಾ| ಷರೀನಾರವರು ವಿದ್ಯಾರ್ಥಿಗಳಿಗೆ ರಕ್ತದ ಮಹತ್ವವನ್ನು

Read More

ಪ್ರಜಾಪ್ರಭುತ್ವ ದಿನ ಆಚರಣೆ

ಪೆರ್ಲ : ನಾಲಂದ ಮಹಾವಿದ್ಯಾಲಯದ ಎನ್.ಎನ್.ಎಸ್ ಘಟಕವು ಪ್ರಜಾಪ್ರಭುತ್ವ ದಿನವನ್ನು ಆಚರಿಸಿತು. ಉಪನ್ಯಾಸಕಿ ಮಧುರವಾಣಿಯವರು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುತ್ತಾ ಪ್ರಪಂಚ ಯುದ್ಧ ಮುಕ್ತವಾದರೆ ಪ್ರತಿಯೊಬ್ಬನೂ ಶಾಂತಿ, ಸಮಾಧಾನದಿಂದ ಬದುಕಬಹುದು. ಅದರ ಮೂಲಕ ದೇಶದ ಅಭಿವೃದ್ಧಿಯಾಗುತ್ತದೆ. ಹಿಂಸೆಯಿಂದ ಏನನ್ನೂ ಗಳಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ನೆನಪಿಸುವುದೇ ಪ್ರಜಾಪ್ರಭುತ್ವ ದಿನದ ಉದ್ದೇಶ. ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಂಡಿರಬೇಕು ಉತ್ತಮ ನಾಯಕನ ಆಯ್ಕೆಯಾಗಬೇಕು. ಆ ಮೂಲಕ ಮಹಿಳಾ ಸಬಲೀಕರಣ ನಡೆಯಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಎನ್.ಎಸ್.ಎಸ್ ಯೋಜನಾಧಿಕಾರಿ ಉಪನ್ಯಾಸಕ

Read More

ವಿಶ್ವ ಸಾಕ್ಷರತಾ ದಿನ

ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಿತು. ಅಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಹಿಂದಿ ಉಪನ್ಯಾಸಕಿ ಶಾಂಭವಿಯವರು ಮಾತನಾಡುತ್ತ, ಅನಕ್ಷರಸ್ಥರು ಓದು ಬರಹಗಳನ್ನು ಕಲಿತು ತನ್ನ ಪ್ರಗತಿಯ ಜೊತೆಗೆ ದೇಶದ ಪ್ರಗತಿಯನ್ನು ಬಯಸುವುದು ಸಾಕ್ಷರತೆಯ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶಂಕರ ಖಂಡಿಗೆ ಅವರು ಇಂದಿನ ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಾವು ಅಕ್ಷರಜ್ಞಾನದ ಜೊತೆಗೆ ಕ್ಯಾಶ್‌ಲೆಸ್ ವ್ಯವಹಾರ ಮುಂತಾದ ಹೊಸ

Read More

ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ – ಕಾರ್ಯಾಗಾರ

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಿಂದ ಇತ್ತೀಚೆಗೆ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ್ಯಾಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೀಪುಲ್ಸ್ ಕಾಲೇಜು ಮುನ್ನಾಡು ಇದರ ಬಿ.ಬಿ.ಎ. ವಿಭಾಗದ ಮುಖ್ಯಸ್ಥ ಮತ್ತು ಜೆ.ಸಿ.ಐ ಯ ತರಬೇತುದಾರ ಶ್ರೀ ಪುಷ್ಪಾಕರ ಬಂಡಿಚ್ಚಾಲ್‌ರವರು ಕಾರ್ಯಗಾರ ಉದ್ಘಾಟಿಸಿ ಮಾನವನು ಬದುಕಿನಲ್ಲಿ ಯಶಸ್ಸು ಗಳಿಸಬೇಕಾದರೆ ಉತ್ತಮ ಗುರಿ, ಪರಿಶ್ರಮ, ಶ್ರಧ್ಧೆ ಅತೀ ಅಗತ್ಯ ಸಮಾಜ ಸೇವೆಯ ಮೂಲಕ ಸಂಬಂಧಗಳು ಬಲಗೊಳ್ಳುತ್ತದೆ ಮತ್ತು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

Read More

ಸ್ವಾತಂತ್ರ್ಯದ ಅರ್ಥ ಕೆಡುತ್ತಿದೆ – ಟಿ. ಆರ್. ಕೆ. ಭಟ್

ದೇಶ ಭಕ್ತ ವೀರರ ನಿರಂತರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿತು. ಅವರ ಕನಸು ನನಸಾಯಿತು. ಆದರೆ ಇಂದು ಸ್ವಾತಂತ್ರ್ಯದ ಅರ್ಥ ಕೆಡುತ್ತಿದೆ ಎಂದು ಟಿ.ಆರ್.ಕೆ ಭಟ್‌ರವರು ವಿಷಾದ ವ್ಯಕ್ತಪಡಿಸಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ಮಾತನಾಡುತ್ತಾ, ‘ನಾವು ಪಡೆದ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ನಿರಂತರ ಹೋರಾಟದ ಅಗತ್ಯವಿದೆ ಸೂರ್ಯ ಚಂದ್ರರಿರುವಲ್ಲಿಯವರೆಗೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಿ’ ಎಂದು ಶುಭಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕರವರು ಕಾಲೇಜಿನಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ

Read More

ಸ್ವಾತಂತ್ರ್ಯದ ಅರ್ಥ ಕೆಡುತ್ತಿದೆ – ಟಿ. ಆರ್. ಕೆ. ಭಟ್

ದೇಶ ಭಕ್ತ ವೀರರ ನಿರಂತರ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರಕಿತು. ಅವರ ಕನಸು ನನಸಾಯಿತು. ಆದರೆ ಇಂದು ಸ್ವಾತಂತ್ರ್ಯದ ಅರ್ಥ ಕೆಡುತ್ತಿದೆ ಎಂದು ಟಿ.ಆರ್.ಕೆ ಭಟ್‌ರವರು ವಿಷಾದ ವ್ಯಕ್ತಪಡಿಸಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಗೈದು ಮಾತನಾಡುತ್ತಾ, ‘ನಾವು ಪಡೆದ ಸ್ವಾತಂತ್ರ್ಯ ಉಳಿಸಿಕೊಳ್ಳಬೇಕಾದರೆ ನಿರಂತರ ಹೋರಾಟದ ಅಗತ್ಯವಿದೆ ಸೂರ್ಯ ಚಂದ್ರರಿರುವಲ್ಲಿಯವರೆಗೆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಿ’ ಎಂದು ಶುಭ ಹಾರೈಸಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕರವರು ಕಾಲೇಜಿನಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ

Read More

ಹಿರೋಶಿಮಾ ನಾಗಸಾಕಿ ದಿನಾಚರಣೆ

ಮಾನವ ಸಿಟ್ಟುಗೊಂಡಾಗ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿರುವುದು ಹೀರೋಶಿಮಾ ಮತ್ತು ನಾಗಸಾಕಿ ಎಂಬುದಾಗಿ ಪೆರ್ಲ ನಾಲಂದ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಲ್ಲಿ ನಡೆದ ಹೀರೋಶಿಮಾ ನಾಗಸಾಕಿ ದಿನಾಚರಣೆಯಲ್ಲಿ ಮಾತನಾಡುತ್ತ ಇಂಗ್ಲೀಷ್ ಉಪನ್ಯಾಸಕಿ ಶಶಿರೇಖಾರವರು ಅಲ್ಲಿಯ ದಾರುಣತೆಯನ್ನು ತಿಳಿಸಿದರು. ಎರಡನೇ ಮಹಾಯುದ್ಧವು ಅಣುಬಾಂಬ್ ಪ್ರಯೋಗಿಸುವುದರ ಮೂಲಕ ಕೊನೆಗೊಂಡಿತು. ಅಂದಿನಿಂದ ಅನಂತರ ವಿಶ್ವದ ಹೆಚ್ಚಿನ ರಾಷ್ಟ್ರಗಳು ಯುದ್ಧ ಬೇಡ, ಶಾಂತಿ ಬೇಕು ಎಂದು ಅಣ್ವಸ್ತ್ರ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಿದವು. ಮಾನವನ ಬದುಕು ಕ್ಷಣಿಕ, ಯುದ್ಧದಲ್ಲಿ, ದ್ವೇಷದಲ್ಲಿ

Read More

ನಾಲಂದದ ಶುಚಿತ್ವಾ ಪಖ್ವಾಡಾ

ಪೆರ್ಲ ನಾಲಂದಾ ಮಹಾವಿದ್ಯಾಲಯದ ಎನ್. ಎಸ್. ಎಸ್ ಘಟಕದ ವತಿಯಲ್ಲಿ ’ಶುಚಿತ್ವ ಪಖ್ವಾಡಾ’ ಕಾರ್ಯಕ್ರಮದ ಅಂಗವಾಗಿ ಎಣ್ಮಕಜೆ ಪಂಜಾಯತಿನ ನಲ್ಕ ಪ್ರದೇದ ಮನೆಯವರಿಗೆ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಮನೆ ಮನೆ ಅಭಿಯಾನಕ್ಕೆ ಎಣ್ಮಕಜೆ ಪಂಚಾಯತ್ತಿನ ಅಡ್ಕಸ್ಥಳ ವಾರ್ಡಿನ ಸದಸ್ಯ ಸತೀಶ್ ಕುಲಾಲ್ ನಲ್ಕರವರು ಚಾಲನೆಯನ್ನು ನೀಡಿದರು. ನಮ್ಮ ಪರಿಸರವನ್ನು ನಾವು ರಕ್ಷಿಸಿದರೆ ನಮಗೂ, ದೇಶಕ್ಕೂ ಒಳಿತು. ಪರಿಸರ ಕಲುಷಿತವಾದರೆ ನಾನಾ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದರು. ಹಮೀದ್ ನಲ್ಕರವರು ಅಭಿಯಾನಕ್ಕೆ

Read More