×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ

ಪೆರ್ಲ: ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಬೆಳೆದಂತೆ ಜಾಗತಿಕ ಸಮಸ್ಯೆಗಳನ್ನು ಸೌಹಾರ್ದ ಹಾಗೂ ಕಾನೂನು ಬದ್ಧವಾಗಿ ಬಗೆ ಹರಿಸಲು ಅಂತಾರಾಷ್ಟೀಯ ನ್ಯಾಯಾಲಯ ಸ್ಥಾಪಿತವಾಗಿದೆ ಎಂದು ನಾಲಂದ ಕಾಲೇಜು ಜಿಯೋಗ್ರಾಫಿ ವಿಭಾಗದ ಉಪನ್ಯಾಸಕಿ ಸುಮಾ ಹೇಳಿದರು.

ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ನ್ಯಾಯ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

Justice

ವ್ಯಕ್ತಿ ಶೋಷಣೆ, ತೊಂದರೆಗೊಳಗಾದಾಗ ಆ ಪರಿಸ್ಥಿತಿಯಿಂದ ರಕ್ಷಣೆ ಪಡೆಯುವ ಹಕ್ಕು ಅವನಿಗಿದೆ. ಸಮಸ್ಯೆಗಳ ನಿವಾರಣೆಗೆ ನೀತಿ ನಿಯಮ, ಕಾನೂನಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಎರಡು ದೇಶಗಳ ನಡುವಿನ ಆಂತರಿಕ ಸಮಸ್ಯೆಗಳನ್ನು ಬಗೆ ಹರಿಸಲು ಅಂತರಾಷ್ಟ್ರೀಯ ನ್ಯಾಯಾಲಯ ಅಥವಾ ವಿಶ್ವ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ.

ಪ್ರಪಂಚದಲ್ಲಿ ಶಾಂತಿ ಮತ್ತು ರಕ್ಷಣೆ ಏರ್ಪಡಿಸಲು, ರಾಷ್ಟ್ರೀಯ ವ್ಯವಹಾರಗಳ ಲೋಪದೋಷಗಳನ್ನು ನಿವಾರಿಸಲು, ರಾಷ್ಟ್ರಗಳು ಪರಸ್ಪರ ಸಹಕಾರ ಮತ್ತು ಸ್ನೇಹದಿಂದಿರಲು, ಯುದ್ಧ ಮತ್ತು ಯುದ್ಧ ಭಯದಿಂದ ತಪ್ಪಿಸಲು, ಪ್ರಪಂಚದ ರಾಷ್ಟ್ರಗಳನ್ನು ಒಟ್ಟುಗೂಡಿಸಲು, ಸಮಸ್ಯೆಗಳನ್ನು ಶಾಂತಿ ಮಾರ್ಗದಿಂದಲೇ ಬಗೆ ಹರಿಸಿ ಜನ ಜೀವನ ಮಟ್ಟವನ್ನು ಹೆಚ್ಚಿಸುವುದೇ ಜಾಗತಿಕ ಮಟ್ಟದ ನ್ಯಾಯಾಲಯ ಸ್ಥಾಪನೆಯ ಪ್ರಮುಖ ಉದ್ದೇಶವಾಗಿದೆ.

ಆಯಾ ರಾಷ್ಟ್ರಗಳು ಸಲ್ಲಿಸಿದ ಕಾನೂನು ವ್ಯಾಜ್ಯಗಳನ್ನು ಸ್ವೀಕರಿಸಿ, ಸಲಹೆ ಅಭಿಪ್ರಾಯಗಳನ್ನು ಅವಲೋಕಿಸಿ ಮಾನ್ಯತೆ ಪಡೆದ ದೇಶಗಳ ಕಾನೂನು ಮೊಕದ್ದಮೆ, ವ್ಯಾಜ್ಯಗಳನ್ನು ಪುರಸ್ಕರಿಸುತ್ತದೆ. ವಿಶ್ವ ಕಲ್ಯಾಣಕ್ಕಾಗಿ ಸ್ಥಾಪಿತವಾದ ನ್ಯಾಯಾಲಯಗಳು ಜಾಗತಿಕ ಸಾಮರಸ್ಯ ಮೂಡಿಸುವಲ್ಲಿ ಪ್ರಧಾನ ಪಾತ್ರ ವಹಿಸುವುದು ಎಂದರು.

ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಅಭಿಲಾಶ್, ಜಗತ್, ಅಜಿತ್, ಅಂಜನಾ, ಕಾವ್ಯ ಉಪಸ್ಥಿತರಿದ್ದರು. ಕವಿತಾ ಸ್ವಾಗತಿಸಿದರು.ಚೈತ್ರ ವಂದಿಸಿದರು.ಸೌಮ್ಯ ನಿರೂಪಿಸಿದರು.