ಜನಸಂಖ್ಯಾ ಹೆಚ್ಚಳ ಶಾಪವಲ್ಲ. ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ದೇಶದ ಸಂಪತ್ತಾಗಿ ಮಾರ್ಪಡುತ್ತದೆ ಎಂದು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಹೇಳಿದರು.
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಜನಸಂಖ್ಯಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಭಾರತದ ಒಟ್ಟು ಜನಸಂಖ್ಯೆ 130 ಕೋಟಿ ಮೀರಿದ್ದು, ಚೈನಾವನ್ನು ಮೀರಿಸಿ ಮೊದಲನೇ ಸ್ಥಾನಕ್ಕೆ ಬರಲು ಸಣ್ಣ ಅಂತರವೇ ಬಾಕಿಯಿದೆಯಷ್ಟೇ. ನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬರುವುದು ಮುಖ್ಯವಲ್ಲ. ಆ ಜನಸಂಖ್ಯೆಯನ್ನು ಸಂಪತ್ತಾಗಿ ಮಾರ್ಪಾಡು ಮಾಡುವುದು ಮುಖ್ಯ.
ಜನಸಂಖ್ಯಾ ಬೆಳವಣಿಗೆಯಿಂದ ಬಡತನ, ಆಹಾರದ ಕೊರತೆ ಮುಂತಾದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಆದರೇ ಜನಸಂಖ್ಯೆ ನಮ್ಮ ದೇಶದ ಸಂಪತ್ತಾಗಿ ಬದಲಾದಗ ಇವೆಲ್ಲವೂ ಇಲ್ಲದಾಗುತ್ತದೆ, ದೇಶ ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಅಭಿಲಾಶ್, ಜಗತ್, ಅಜಿತ್, ಅಂಜನಾ, ಕಾವ್ಯ ಉಪಸ್ಥಿತರಿದ್ದರು. ಅಕ್ಷಿತ ಸ್ವಾಗತಿಸಿದರು. ಸ್ವಾತಿ ವಂದಿಸಿದರು. ಅಕ್ಷಯ್ ನಿರೂಪಿಸಿದರು.