×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಉಜ್ವಲ ದೇಶಪ್ರೇಮ ಇಂದಿನ ಅಗತ್ಯ

ಪ್ರಸಕ್ತ ಯಾಂತ್ರಿಕ ಬದುಕಿನಲ್ಲಿ ಗುರು ಹಿರಿಯರಲ್ಲಿ ವಿನಯವನ್ನೂ, ದೇಶ ಪ್ರೇಮವನ್ನೂ ಉಳಿಸಿ ಬೆಳೆಸಿ ಕೊಂಡು ಬಂದರೆ ದೇಶ ಉಜ್ವಲಗೊಳ್ಳುವುದರೊಂದಿಗೆ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಭಾರತೀಯ ವಾಯುಪಡೆಯ ನಿವೃತ್ತ ಸರ್ಜನ್ ಹರಿಪ್ರಸಾದ ಪೆರ್ಮುಖ ಹೇಳಿದರು. ಅವರು ಪೆರ್ಲ ನಾಲಂದ ಕಾಲೇಜಿನ ಗಣರಾಜ್ಯೋತ್ಸವದ ದ್ವಜಾರೋಹಣಗೈದು ಮಾತನಾಡಿದರು. ಭಾರತಾಂಬೆಯ ಮಕ್ಕಳಾಗಿ ಹುಟ್ಟಿದ ನಾವು ಧನ್ಯರು. ದೇಶಕ್ಕೆ ನಾವು ಏನು ಕೊಟ್ಟೆವು ಎಂಬುದು ಮುಖ್ಯ ಆದುದರಿಂದ ನೀವೆಲ್ಲ ದೇಶ ಸೇವಕರಾಗಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಆಡಳಿತಾಧಿಕಾರಿ ಕೆ.ಶಿವಕುಮಾರ್ ಕಾರ್ಯಕ್ರಮದ

Read More

ಸ್ಪರ್ಧಾಮನೋಭಾವ ಬೆಳೆಯಲಿ

ಆಧುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ಮಾನವನು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಹಾಗಿದ್ದರೆ ಮಾತ್ರ ಕಾಲಕ್ಕೆ ತಕ್ಕಂತೆ ಬೆಳೆಯಲು ಸಾಧ್ಯ. ಅಂತಹವನಿಗೆ ಲೋಕದಲ್ಲಿ ಸ್ಥಾನ, ಮಾನ, ಗೌರವಗಳು ಸಿಗುತ್ತವೆ ಎಂದು ಡಾ| ಜಯಗೋವಿಂದ ಉಕ್ಕಿನಡ್ಕ ಅವರು ನುಡಿದರು ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ವಾಣಿಜ್ಯ ವಿಭಾಗವು ಹಮ್ಮಿಕೊಂಡ ಬಿ. ಕ್ವಿಜ್ 2018 ನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲೋಕದ ವಾಣಿಜ್ಯ ಮತ್ತು ಆರ್ಥಿಕ ಕ್ಷೇತ್ರಗಳು ಬದಲಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಇಂತಹ ಸ್ಪರ್ಧೆಗಳು ಅತೀ ಅಗತ್ಯ ಎಂದು ಶುಭಹಾರೈಸಿದರು.

Read More

ಇಂಧನ ಮಹತ್ವ ಅರಿಯಬೇಕು

ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಇಂಧನ ಸಂರಕ್ಷಣೆ’ ಎಂಬ ವಿಷಯದ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಕೇರಳ ವಿದ್ಯುಚ್ಚಕ್ತಿ ಇಲಾಖೆಯ ಇಂಜಿನಿಯರ್ ನಾಗರಾಜ ಭಟ್ಟರವರು ಮಾತನಾಡುತ್ತ ಇಂದಿನ ಯಾಂತ್ರಿಕ ಯುಗದಲ್ಲಿ ಇಂಧನಗಳಿಲ್ಲದೆ ದೈನಂದಿನ ಬದುಕು ನಡೆಯಲಾರದು ಎಂಬ ಪರಿಸ್ಥಿತಿ ಬಂದಿದೆ. ಅದು ತಿಳಿದಿದ್ದರೂ ಜನರು ಇಂಧನವನ್ನು ವ್ಯರ್ಥವಾಗಿ ಹಾಳು ಮಾಡುತ್ತಿದ್ದಾರೆ. ಒಮ್ಮೆ ನಷ್ಟವಾದುದು ಮತ್ತೆ ದೊರಕಲಾರದು. ಆದುದರಿಂದ ಪ್ರತಿಯೊಬ್ಬ ವ್ಯಕ್ತಿ ಇಂಧನದ ಮಹತ್ವವನ್ನು ಅರಿತು ಮಿತವಾಗಿ ಬಳಸಿದರೆ ಕೊರತೆ ಕಂಡುಬರಲಾರದು. ಬೆಳವಣಿಗೆಯ ವೇಗ ಹೆಚ್ಚಿದಂತೆ

Read More

ಪರಿಸರಕ್ಕೆ ಪ್ಲಾಸ್ಟಿಕ್ ಮಾರಕ

ಪ್ಲಾಸ್ಟಿಕ್‌ನ ಉಪಯೋಗದಿಂದ ಪರಿಸರನಾಶವಾಗುವುದರೊಂದಿಗೆ ವಿವಿಧ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ ಎಂದು ಈಶ್ವರ ಶರ್ಮ ನಲ್ಕರವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಿಶೇಷ ಶಿಬಿರದಲ್ಲಿ ’ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳು ಎಂಬ ವಿಷಯz’ ಬಗೆಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ ಪ್ಲಾಸ್ಟಿಕ್ ನಿರೋಧಿಸಿದರೆ ಮಾತ್ರ ಪರಿಣಾಮಕಾರಿಯಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತಾಪಮಾನದ ಏರುವಿಕೆ ಮತ್ತು ಪ್ರಾಕೃತಿಕ ವೈಪರೀತ್ಯಗಳಿಗೆ ಪ್ಲಾಸ್ಟಿಕ್‌ನ ಅತಿಯಾದ ಬಳಕೆಯೇ ಕಾರಣ ಎಂದರು.

Read More

ಎನ್‌ಎಸ್‌ಎಸ್ ಸೇವಾ ಯೋಜನೆಯ ವಿದ್ಯಾರ್ಥಿಗಳು ಶ್ರಮದಾನ ಮೂಲಕ ನಿರ್ಮಿಸಿದ ಬಸ್ ನಿಲ್ದಾಣ ಉದ್ಘಾಟನೆ

ಎನ್‌ಎಸ್‌ಎಸ್ ಸೇವಾ ಯೋಜನೆಯ ಯುವ ಮನಸ್ಸುಗಳಿಂದ ಬಸ್ ನಿಲ್ದಾಣ, ಶ್ರಮದಾನದಂತಹ ಕಾರ್ಯಗಳು ಯಶಸ್ವಿಯಾಗಿ ನಡೆದುದು ಇತರರಿಗೆ ಮಾದರಿ ಕಾರ್ಯ. ಸಂಕೇತಿಕವಾಗಿ ಸಾಕಾರಗೊಂಡ ಎಲ್ಲ ಕಾರ್ಯಗಳು ಕೂಡಾ ನಮ್ಮೂರಿಗೆ ಮಹತ್ತರ ಕೊಡುಗೆಯನ್ನು ನೀಡುತ್ತದೆ ಎಂದು ಬಸ್ ನಿಲ್ದಾಣವನ್ನು ಉದ್ಘಾಟಿಸಿದ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್.ಭಟ್ ನುಡಿದರು. ಅವರು ನಲ್ಕ ಎನ್‌ಎಸ್‌ಎಸ್ ಸೇವಾ ಯೋಜನೆಯ ವಿದ್ಯಾರ್ಥಿಗಳು ಶ್ರಮದಾನ ಮೂಲಕ ನಿರ್ಮಿಸಿದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ

Read More

ಪ್ರತಿಭೆಯನ್ನು ಹೊರಹೊಮ್ಮಿಸಲು ಕಾರ್ಯಪ್ರವೃತ್ತರಾಗೋಣ

ಉನ್ನತ ಮಟ್ಟದ ತಂತ್ರಜ್ಞಾನದ ಬಳಕೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಇನ್ನೂ ಕಲಿಯುವಂತದ್ದು ಸಾಕಷ್ಟಿವೆ. ಅಂತಹಾ ಜ್ಞಾನದ ಅಭಿವೃದ್ದಿಗೆ ಮುಂದಿನ ಪೀಳಿಗೆಯು ಸೂಕ್ತವಾಗಿದೆ. ಗ್ರಾಮೀಣ ಬದುಕಲ್ಲಿ ತಂತ್ರಜ್ಞಾನವನ್ನು ಪಸರಿಸಲು ಇಂದಿನ ವಿದ್ಯಾರ್ಥಿ ಸಮೂಹವು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸುವತ್ತ ಕಾರ್ಯಪ್ರವೃತ್ತರಾಗಬೇಕು. ಅಂತೆಯೇ ವಿದ್ಯಾರ್ಥಿ ಸಮೂಹವು ಬರುವಂತಹ ಅವಕಾಶಗಳ ಸದ್ವಿನಿಯೋಗ ಮಾಡುವತ್ತ ಗಮನಹರಿಸಬೇಕು. ಹಾಗಾದಲ್ಲಿ ಮಾತ್ರವೇ ಕಲಾಂರ ಗ್ರಾಮೀಣ ವಿಕಾಸದ ಕನಸು ನನಸಾಗಲು ಸಾಧ್ಯ ಎಂದು ಇಸ್ರೋ (ಐ.ಎಸ್.ಆರ್.ಒ)ದ ನಿವೃತ್ತ ಖಗೋಳ ವಿಜ್ಞಾನಿ ಪ್ರೊ. ಯಂ. ಕೃಷ್ಣಸ್ವಾಮಿಯವರು ನುಡಿದರು. ಅವರು ಪೆರ್ಲ

Read More

ನಾಲಂದ ಮಹಾವಿದ್ಯಾಲಯ ಆಶ್ರಯದಲ್ಲಿ ವೈದ್ಯಕೀಯ ಶಿಬಿರ

ಪೆರ್ಲ ನಾಲಂದ ಮಹಾವಿದ್ಯಾಲಯದ ಗ್ರಾಮವಿಕಾಸ ಯೋಜನೆಯ ಅಂಗವಾಗಿ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರು ಅಕ್ಟೋಬರ್ 28 ರಂದು ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿಕೊಟ್ಟರು. ಸ್ವರ್ಗ ಶಾಲೆಯ ವ್ಯವಸ್ಥಾಪಕ ಹೃಷಿಕೇಶ ಭಟ್‌ರವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕೆ.ಎಂ.ಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಹರ್ಬಟ್ ವೈದ್ಯಕೀಯ ಶಿಬಿರದಲ್ಲಿ ಮಕ್ಕಳ ಚಿಕಿತ್ಸೆ, ಸ್ತ್ರೀರೋಗ ಚಿಕಿತ್ಸೆ, ಕಣ್ಣಿನ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆಗಳನ್ನು ನಡೆಸಿ ಸೂಕ್ತ ಮಾಹಿತಿಗಳನ್ನು

Read More

ನಾಲಂದದಲ್ಲಿ ರಕ್ತದಾನ ಶಿಬಿರ

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಬ್ಲಡ್ ಬ್ಯಾಂಕ್‌ನ ಸಹಯೋಗದೊಂದಿಗೆ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಕಾಲೇಜ್ ಯೂನಿಯನ್ ರಕ್ತದಾನ ಶಿಬಿರದ ಮೂಲಕ ಎನ್.ಎಸ್.ಎಸ್ ದಿನಾಚರಣೆಯನ್ನು ಆಚರಿಸಿತು. ಕಾಲೇಜು ಪ್ರಾಂಶುಪಾಲ ಪ್ರೊ| ಪಿ. ಶಂಕರನಾರಾಯಣ ಹೊಳ್ಳರು ಉದ್ಘಾಟಿಸಿ ಮಾನವನು ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಂಡು ರಕ್ತದಾನ ಮಾಡಿ ಇತರರಿಗೆ ಜೀವತುಂಬುವ ಮಹತ್ಕಾರ್ಯವನ್ನು ಬದುಕಿನಲ್ಲಿ ಮಾಡಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಕಾಸರಗೋಡು ಸರಕಾರಿ ಆರೋಗ್ಯ ಕೇಂದ್ರದ ಡಾ| ಷರೀನಾರವರು ವಿದ್ಯಾರ್ಥಿಗಳಿಗೆ ರಕ್ತದ ಮಹತ್ವವನ್ನು

Read More

ಪ್ರಜಾಪ್ರಭುತ್ವ ದಿನ ಆಚರಣೆ

ಪೆರ್ಲ : ನಾಲಂದ ಮಹಾವಿದ್ಯಾಲಯದ ಎನ್.ಎನ್.ಎಸ್ ಘಟಕವು ಪ್ರಜಾಪ್ರಭುತ್ವ ದಿನವನ್ನು ಆಚರಿಸಿತು. ಉಪನ್ಯಾಸಕಿ ಮಧುರವಾಣಿಯವರು ಪ್ರಜಾಪ್ರಭುತ್ವದ ಮಹತ್ವವನ್ನು ತಿಳಿಸುತ್ತಾ ಪ್ರಪಂಚ ಯುದ್ಧ ಮುಕ್ತವಾದರೆ ಪ್ರತಿಯೊಬ್ಬನೂ ಶಾಂತಿ, ಸಮಾಧಾನದಿಂದ ಬದುಕಬಹುದು. ಅದರ ಮೂಲಕ ದೇಶದ ಅಭಿವೃದ್ಧಿಯಾಗುತ್ತದೆ. ಹಿಂಸೆಯಿಂದ ಏನನ್ನೂ ಗಳಿಸಲಾರೆವು ಪ್ರೀತಿಯಿಂದ ಎಲ್ಲವನ್ನೂ ಸಾಧಿಸಬಹುದು ಎಂಬುದನ್ನು ನೆನಪಿಸುವುದೇ ಪ್ರಜಾಪ್ರಭುತ್ವ ದಿನದ ಉದ್ದೇಶ. ಪ್ರತಿಯೊಬ್ಬ ಪ್ರಜೆಯೂ ಮತದಾನದ ಮಹತ್ವವನ್ನು ಅರಿತುಕೊಂಡಿರಬೇಕು ಉತ್ತಮ ನಾಯಕನ ಆಯ್ಕೆಯಾಗಬೇಕು. ಆ ಮೂಲಕ ಮಹಿಳಾ ಸಬಲೀಕರಣ ನಡೆಯಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಎನ್.ಎಸ್.ಎಸ್ ಯೋಜನಾಧಿಕಾರಿ ಉಪನ್ಯಾಸಕ

Read More

ವಿಶ್ವ ಸಾಕ್ಷರತಾ ದಿನ

ಪೆರ್ಲ : ನಾಲಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ವಿಶ್ವ ಸಾಕ್ಷರತಾ ದಿನವನ್ನು ಆಚರಿಸಿತು. ಅಂದು ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಹಿಂದಿ ಉಪನ್ಯಾಸಕಿ ಶಾಂಭವಿಯವರು ಮಾತನಾಡುತ್ತ, ಅನಕ್ಷರಸ್ಥರು ಓದು ಬರಹಗಳನ್ನು ಕಲಿತು ತನ್ನ ಪ್ರಗತಿಯ ಜೊತೆಗೆ ದೇಶದ ಪ್ರಗತಿಯನ್ನು ಬಯಸುವುದು ಸಾಕ್ಷರತೆಯ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶಂಕರ ಖಂಡಿಗೆ ಅವರು ಇಂದಿನ ಡಿಜಿಟಲ್ ಯುಗದಲ್ಲಿ ಜೀವಿಸುತ್ತಿರುವ ನಾವು ಅಕ್ಷರಜ್ಞಾನದ ಜೊತೆಗೆ ಕ್ಯಾಶ್‌ಲೆಸ್ ವ್ಯವಹಾರ ಮುಂತಾದ ಹೊಸ

Read More