ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಇವರ ಅಧ್ಯಕ್ಷತೆಯಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಕಾಟುಕುಕ್ಕೆಯ ಬಾಲಪ್ರಭಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಖಂಡೇರಿ ಇವರು ಗುರುಗಳನ್ನು ಪೂಜಿಸೋ ಭಾರತೀಯ ಸಂಸ್ಕೃತಿ ಇವತ್ತು ನಿನ್ನೆಯದಲ್ಲ. ಗುರುಕುಲ ಪದ್ಧತಿಯಿಂದಲೇ ಇತ್ತು. ವೇದವ್ಯಾಸರು ಮಹರ್ಷಿಗಳೂ ಗುರುವಾಗಿದ್ದರು. ಆಷಾಢ ಮಾಸದ ಈ ಹುಣ್ಣಿಮೆ ಅವರ ಜನ್ಮದಿನವಾಗಿದ್ದು ದೇಶದಾದ್ಯಂತ ಇಂದು ಅವರನ್ನು ಸ್ಮರಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಬಾಲ್ಯದಲ್ಲಿಎಂಥ ಸಂಸ್ಕಾರ ನಮಿಗೆ ಲಭಿಸುವುದೋ ಆ ರೀತಿಯಲ್ಲಿಯೇ ನಾವೂ ಬೆಳೆಯುತ್ತೇವೆ. ಕುರಿಮಂದೆಯಲ್ಲಿ ಬೆಳೆದ ಹುಲಿಮರಿ ಕುರಿಗಳಂತೆ ಸಸ್ಯಾಹಾರಿಯಾಯಿತು. ಹಾಗೆಯೇ ಈ ಮಕ್ಕಳು ಉತ್ತಮರ ಸಹವಾಸ ಸಿಕ್ಕಿದ್ದಲ್ಲಿ ಉತ್ತಮ ವ್ಯಕ್ತಿತ್ವ ಉಳ್ಳವರಾಗುತ್ತಾರೆ ಎಂದರು.
ನಾಲಂದ ಮಹಾವಿದ್ಯಾಲಯದ ನಿರ್ದೇಶಕಿ ಕೆ.ವಿ.ಪ್ರಭಾವತಿ ಶುಭಾಶಂಸನೆ ಮಾಡಿದರು ಶಿಶುಮಂದಿರದ ಮಾತಾಜಿ ಜ್ಯೋತಿ ಸ್ವಾಗತಿಸಿ, ಭಗಿನಿ ಲಾವಣ್ಯ ವಂದಿಸಿದರು. ಶಿಶುಮಂದಿರದ ಮಕ್ಕಳು ಪ್ರಾರ್ಥಿಸಿದರು. ಶಿಶುಮಂದಿರ ಸಮಿತಿಯ ಕಾರ್ತಿಕ್ ಶಾಸ್ತ್ರಿ, ಶ್ರೀಹರಿ ಭರಣಿಕರ್, ಜಯಶ್ರೀ ಪೆರ್ಲ, ರೇಖಾ, ಮಾತೃ ಮಂಡಳಿ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.