News & Events
ಯುಗಾದಿ ಆಚರಣೆ
ಪ್ರಕೃತಿಯಲ್ಲಿ ಚೈತನ್ಯ ತುಂಬಿ ತುಳುಕುವ ಕಾಲ ವಸಂತ ಋತು. ಅದರ ಆರಂಭದ ದಿನವನ್ನು ಹಿಂದುಗಳು ಯುಗಾದಿ ಹಬ್ಬವಾಗಿ ಆಚರಿಸುತ್ತಾರೆ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್‌ರವರು ನುಡಿದರು. ಕಾಲೇಜಿನ ಯುಗಾದಿ ಹಬ್ಬದ ಆಚರಣೆಯಲ್ಲಿ ಶುಭವನ್ನು ಹಾರೈಸುತ್ತಾ ಗಣಿತ ಶಾಸ್ತ್ರವನ್ನು ಅವಲಂಬಿಸಿಕೊಂಡು ಜೋತಿಷ್ಯ ಶಾಸ್ತ್ರ ನಿಂತಿದೆ. ಅದನ್ನು ಹೊಂದಿಕೊಂಡು ಹಿಂದುಗಳ ಆಚರಣೆಗಳು ನಡೆಯುತ್ತವೆ. ಚೈತ್ರ ಮಾಸದ ಬಗೆಗೆ ಹಾಡದ ಕವಿಗಳಿಲ್ಲ. ಪ್ರಕೃತಿಯಲ್ಲಿ ಕೊರಡೂ ಕೊನರುತ್ತದೆ. ಮರಗಿಡಗಳು ಸಂಪದ್ಭರಿತವಾಗುತ್ತದೆ. ಪ್ರಕೃತಿಯ ಒಂದಂಗವಾದ ಮಾನವನಿಗೂ ಸುಖದ ಸಂಪತ್ತಿನ ಕಾಲ ಇದಾಗಿದೆ.
ನಾಲಂದದ ವಾರ್ಷಿಕೋತ್ಸವ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸುದೃಡರು ಎಂದು ನಿವೃತ್ತ ಐ.ಎ.ಎಸ್ ಅಧಿಕಾರಿ ಶಶಿಧರನ್ ಕೂಡ್ಲು ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ವಾರ್ಷಿಕೋತ್ಸವನ್ನು ಉದ್ಘಾಟಿಸಿ ನುಡಿದರು. ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಪ್ರತಿಭಾವಂತರು, ಯಾವುದೇ ಸಂದರ್ಭದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು. ಜೀವನ ಮಾಡು, ದುಡಿಯುವ ಸಾಮರ್ಥ್ಯವನ್ನು ಹೊಂದಿದವರು. ವಿದ್ಯಾರ್ಥಿ ಜೀವನವನ್ನು ಮುಗಿಸಿ ಸಾಮಾಜಿಕ ಬದುಕಿಗೆ ಕಾಲಿರಿಸುವಾಗ ತುಂಬ ಜವಾಬ್ದಾರಿಗಳಿರುತ್ತವೆ. ನನಗೆ ಕಾಲೇಜಿನ ಪರಿಸರ ಮತ್ತು ವಿದ್ಯಾರ್ಥಿಗಳ ಸ್ವಭಾವ ಸಂತೋಷವನ್ನು ತಂದಿದೆ ಎಂದು ಶುಭಹಾರೈಸಿ ಕಾಲೇಜಿನಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ
ಕು| ಅರ್ಪಿತಾಗೆ ಅಭಿನಂದನೆ
ಕಣ್ಣೂರು ವಿಶ್ವವಿದ್ಯಾನಿಲಯದ 2016-17 ನೇ ಶೈಕ್ಷಣಿಕ ವರ್ಷದ ಬಿ.ಎಸ್ಸಿ ಜಿಯೋಗ್ರಫಿ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದು ಕೀರ್ತಿ ತಂದ ಶ್ರೀಮತಿ.ಲಕ್ಷ್ಮೀ ಮತ್ತು ಶ್ರೀ ಕುಟ್ಟಿಯಾಪು ದಂಪತಿಗಳ ಸುಪುತ್ರಿ ಕುಮಾರಿ ಅರ್ಪಿತಾ ಕೆ. ಅವರಿಗೆ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಉಪನ್ಯಾಸಕ ಬಳಗ, ನೌಕರವೃಂದ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರ ಪರವಾಗಿ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಶಾಲು ಹೊದಿಸಿ ನೆನಪಿನಕಾಣಿಕೆ ಮತ್ತು ನಗದು ಬಹುಮಾನವನ್ನು ಕೊಟ್ಟು ಅಭಿನಂದಿಸಿ ಶುಭಹಾರೈಸಿದರು.
ವಿಶ್ವ ಮಹಿಳಾದಿನಾಚರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ವಿಶ್ವ ಮಹಿಳಾದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಣ್ಮಕಜೆ ಗ್ರಾಮಪಂಚಾಯತ್ತಿನ ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್. ಭಟ್‌ರವರು ಮಾತನಾಡುತ್ತ ಹಿಂದೆ ಸ್ತ್ರೀಯರು ನಾಲ್ಕು ಗೋಡೆಗಳ ಮಧ್ಯೆ ಅಂತರ್ಮುಖಿಗಳಾಗಿ ಬಾಳುವ ಕಾಲ ಬಂದಿತ್ತು, ಇಂದು ಹಾಗಲ್ಲ ಇದ್ದ ಸ್ವಾತಂತ್ರ್ಯವನ್ನು ಬಳಸಿಕೊಂಡು ತಾನೇನು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡಬೇಕು. ನಾಲ್ಕು ಗೋಡೆಯೊಳಗಿದ್ದು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಸ್ತ್ರೀಯರನ್ನು ಜರೆಯುವ, ಟೀಕಿಸುವ ಜನರಿದ್ದಾರೆಂದು ಅಂಜುತ್ತ ಕೂರದೆ ಬಂದುದನ್ನು ಮೆಟ್ಟಿನಿಂತು ಛಲದಿಂದ ಕಾರ್ಯಸಾಧನೆಯನ್ನು ಮಾಡಬೇಕು. ಸ್ತ್ರೀ ಶಕ್ತಿ
ಜೀವನದ ಮಹೋನ್ನತಿಗೆ ಶಿಕ್ಷಣ
ಮಾನವನು ಜೀವನದಲ್ಲಿ ಗುರಿಯನ್ನು ಸಾಧಿಸಿ ಮಹೋನ್ನತಿಯನ್ನು ಪಡೆಯಬೇಕಾದರೆ ಶಿಕ್ಷಣ ಅತೀ ಅಗತ್ಯ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ವಿಜಯ ಸರಸ್ವತಿಯವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ವೃತ್ತಿ ಮಾರ್ಗದರ್ಶನದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಪ್ರಸ್ತುತ ಸಮಾಜದಲ್ಲಿ ಉತ್ತಮ ಸ್ಥಾನ, ಮಾನ, ಗೌರವಗಳು ಲಭಿಸಬೇಕಾದರೆ ಸ್ನಾತಕೋತ್ತರ ಶಿಕ್ಷಣಗಳನ್ನು ಹೊಂದಿರಬೇಕು. ಇಂದಿನ ಸ್ಷರ್ಧಾತ್ಮಕ ಬದುಕಿನಲ್ಲಿ ಪ್ರತಿಕ್ಷಣವೂ ಹೊಸತನ್ನು ಕಲಿಯುತ್ತ ಕಾಲಕ್ಕೆ ತಕ್ಕಂತೆ ಬೌದ್ಧಿಕತೆಯನ್ನು ಬೆಳೆಸುತ್ತ ಹೋಗಬೇಕು. ನಾವು ನಿಂತ ನೀರಿನಂತಿರದೆ
ಯಕ್ಷಗಾನದಲ್ಲಿ ನಾಲಂದಕ್ಕೆ ’ಎ’ ಗ್ರೇಡ್
ಕಣ್ಣೂರು ವಿಶ್ವವಿದ್ಯಾನಿಲಯದ 2017-18 ರ ಕಲೋತ್ಸವವು ಎಸ್.ಎನ್ ಕಾಲೇಜ್ ತೋಟಡದಲ್ಲಿ ನಡೆಯಿತು. ಯಕ್ಷಗಾನ ಸ್ಪರ್ಧೆಯಲ್ಲಿ ’ಸುದರ್ಶನ ವಿಜಯ’ ಎಂಬ ಕಥಾ ಪ್ರಸಂಗವನ್ನು ಪ್ರದರ್ಶಿಸಿ ಪೆರ್ಲ ನಾಲಂದ ಮಹಾವಿದ್ಯಾಲಯವು ’ಎ’ ಗ್ರೇಡಿನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಸಾಗರ್, ನಿರಂಜನ್ ಬಳ್ಳುಳ್ಳಾಯ, ವಿಕಾಸ್, ಅಭಿಲಾಷ್, ಅರ್ಪಿತ್, ಅಕ್ಷತಾ, ಪ್ರಜ್ಞಾ, ನಿಶಾ, ಶರ್ಮಿತಾ ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಉಪನ್ಯಾಸಕ, ಉಪನ್ಯಾಸಕಿಯರು ಅಭಿನಂದಿಸಿದರು. ಯಕ್ಷಗಾನ ತಂಡದ ತರಬೇತುದಾರರಾಗಿ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಸಹಕರಿಸಿದರು. ಉಪನ್ಯಾಸಕ ಶಂಕರ
ತಾಳ್ಮೆ, ಏಕಾಗ್ರತೆಗಳೇ ನೆನಪಿಗೆ ಶಕ್ತಿ
ವಿದ್ಯಾರ್ಥಿಗಳಲ್ಲಿ ತಾಳ್ಮೆ, ಏಕಾಗ್ರತೆಗಳಿದ್ದಾಗ ಮಾತ್ರ ನೆನಪಿನ ಶಕ್ತಿ ಹೆಚ್ಚುವುದು ಎಂದು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕೌನ್ಸಿಲರ್ ಗಿರೀಶ್‌ರವರು ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಪ್ಲೇಸ್‌ಮೆಂಟ್‌ಸೆಲ್‌ನ ವತಿಯಲ್ಲಿ ’ಪರೀಕ್ಷಾ ತಯಾರಿ ಮತ್ತು ನೆನಪಿನ ಶಕ್ತಿ’ ಎಂಬ ವಿಷಯದ ಬಗೆಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಿಕೊಟ್ಟರು. ನಮ್ಮಲ್ಲಿ ಅದ್ಭುತ ಶಕ್ತಿ ಅಡಗಿರುತ್ತದೆ, ಅದನ್ನು ನಾವು ಅರಿತಿರುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಸದಾ ಧನಾತ್ಮಕ ಚಿಂತನೆಯನ್ನು ಮಾಡುತ್ತ ಸಾಗಿದರೆ ಎಲ್ಲ ಕಡೆಗಳಲ್ಲಿ ಗೆಲ್ಲುತ್ತೇವೆ, ನಮ್ಮಲ್ಲಿ ಋಣಾತ್ಮಕ ಚಿಂತನೆಗಳು ಬಂದಾಗ ಸೋಲುತ್ತೇವೆ
ವಿದ್ಯಾರ್ಥಿಗಳ ಸಾಧನೆ
ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ’ವಾಣಿಜ್ಯ ಮತ್ತು ನಿರ್ವಹಣಾ’ ವಿಭಾಗದ ’ದ್ಯುತಿ ೨ಏ೧೮’ ಕ್ವಿಜ್ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಕಾಸ್, ರೂಪಲಕ್ಷ್ಮಿ, ಧನ್ಯ ಕೆ. ಪಿ, ಶೀತಲ್, ಆಯಿಶತ್ ಶಂಸೀರ, ಅಶ್ವಿನಿ ಕ್ರಾಸ್ತ, ಪ್ರದೀಪ್ ಇವರು ಭಾಗವಹಿಸಿದರು. ವಿದ್ಯಾರ್ಥಿಗಳ ಸಾಧನೆಗಾಗಿ ನಾಲಂದದ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿ ಮತ್ತು ಆಡಳಿತಾಧಿಕಾರಿ ಕೆ. ಶಿವಕುಮಾರ್ ಅಭಿನಂದನೆ ಹೇಳಿದರು.
ಸಮಷ್ಠಿಯ ಚಿಂತನೆ ಮೂಡಿಬರಬೇಕು
ಸಂಸ್ಥೆಯಲ್ಲಿ ಕೆಲಸಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ವ್ಯಷ್ಠಿ ಮರೆತು ಸಮಷ್ಠಿಯ ಚಿಂತನೆಯನ್ನು ಮಾಡುತ್ತ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದರೆ ಸಂಸ್ಥೆ ಉಜ್ವಲವಾಗಿ ಬೆಳೆಯುತ್ತದೆ. ಎಂದು ಕಜಂಪಾಡಿ ಸುಬ್ರಹ್ಮಣ್ಯ ಭಟ್‌ರವರು ಪೆರ್ಲ ನಾಲಂದ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ| ಶಂಕರನಾರಾಯಣ ಹೊಳ್ಳರ ಬೀಳ್ಕೊಡುಗೆ ಸಮಾರಂಭದಲ್ಲಿ ನುಡಿದರು. ನಾವು ಹಾಕುವ ತಳಪಾಯದಲ್ಲಿರುತ್ತದೆ ಅದರ ಭವಿಷ್ಯ. ಅಂತಹ ಕೆಲಸವನ್ನು ಹಿಂದಿನ ಪ್ರಾಂಶುಪಾಲರು ಮಾಡಿದ್ದಾರೆ. ಸಂಸ್ಥೆ ಭವಿಷ್ಯತ್ತಿನಲ್ಲಿ ನಾಲಂದ ವಿಶ್ವವಿದ್ಯಾನಿಲಯದಂತಾಗಲಿ ಎಂದು ಹಾರೈಸಿ, ಶಂಕರನಾರಾಯಣ ಹೊಳ್ಳ ದಂಪತಿಗಳಿಗೆ ಶುಭವಾಗಲೆಂದು ಹಾರೈಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ
ಮಾನವೀಯ ಸಂಬಂಧ ಮತ್ತು ನಾಯಕತ್ವ ಗುಣ
ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ’ಮಾನವೀಯ ಸಂಬಂಧಗಳು ಮತ್ತು ನಾಯಕತ್ವ ಗುಣ’ ಎಂಬ ವಿಷಯದ ಬಗೆಗೆ ಕಾಲೇಜಿನಲ್ಲಿ ಒಂದು ದಿನದ ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ವಿಟ್ಲ ಜೆ.ಸಿ.ಐ. ಟ್ರೈನರ್ ಹಸನ್ ವಿಟ್ಲ ಭಾಗವಹಿಸಿದ್ದರು. ಮಾನವ ಹುಟ್ಟುವಾಗ ಮನುಷ್ಯ ರೂಪದ ಪ್ರಾಣಿಯಾಗಿರುತ್ತಾನೆ. ಬೆಳೆಯುತ್ತ ಸಂಸ್ಕಾರಗೊಂಡ ಮಾನವನಾಗುತ್ತಾನೆ. ನಮ್ಮಲ್ಲಿರುವ ಕೆಟ್ಟದನ್ನು ಕಳೆದು ಒಳ್ಳೆಯದನ್ನು ಇತರರಿಗಾಗಿ ಸವೆಸಿ ಉತ್ತಮ ಮಾನವರಾಗೋಣ. ನಾವು ಇತರರನ್ನು ತಿದ್ದುವುದಕ್ಕಿಂತ ಮೊದಲು ನಾವು ನಮ್ಮನ್ನು ಸರಿಮಾಡೋಣ ಎಂದು ಅವರು ನುಡಿದರು. ಭಾರತೀಯ ಸಂಸ್ಕೃತಿಯಲ್ಲಿ