×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಶಿಕ್ಷಣ ವ್ಯವಸ್ಥೆಯ ಕುರಿತು ಚಿಂತನೆ ಅನಿವಾರ್ಯ

ನಾಲಂದ ಕಾಲೇಜು ವಿವೇಕಾನಂದ ಜಯಂತಿ ಸಮಾರಂಭದ ಸಭಾಧ್ಯಕ್ಷತೆ ವಹಿಸಿ ಡಾ.ವಿಘ್ನೇಶ್ವರ ವರ್ಮುಡಿ ಅಭಿಮತ ಭವ್ಯ ಭಾರತದ ಕನಸನ್ನು ಕಂಡಿದ್ದ ಸ್ವಾಮಿ ವಿವೇಕಾನಂದರು ಶಿಕ್ಷಣ ಮತ್ತು ಯುವಕರ ಬಗ್ಗೆ ತಮ್ಮದೇ ಆದ ವಿಶಿಷ್ಟ ನಿಲುವು ಹೊಂದಿದ್ದರು. ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣದ ಮೂಲಕ ಚಾರಿತ್ರ್ಯ ನಿರ್ಮಾಣ;ಚಾರಿತ್ರ್ಯ ನಿರ್ಮಾಣದಿಂದ ರಾಷ್ಟ್ರನಿರ್ಮಾಣ’ ಎಂದು ಪ್ರತಿಪಾದಿಸಿ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಅವರು ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದ್ದರು ಎಂದು

Read More

ಭಾರತೀಯ ಚಿಂತನೆಗಳು ಮತ್ತು ರಾಷ್ಟ್ರೀಯತೆ – ವಿಶೇಷ ಉಪನ್ಯಾಸ

ಪ್ರತಿಯೊಂದು ವಸ್ತುವಿನಲ್ಲಿ ದೇವರನ್ನು ಕಾಣುವ ಮತ್ತು ಎಲ್ಲರನ್ನು ಗೌರವಿಸುವುದೇ ಭಾರತೀಯ ಸಂಸ್ಕೃತಿಯ ಜೀವಾಳ ಎಂದು ಸರಕಾರಿ ಪದವಿಪೂರ್ವ ಕಾಲೇಜು ತಿಪಟೂರು ಇಲ್ಲಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ರಾಜೇಶ್ ಪದ್ಮಾರ್ ನುಡಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ’ಭಾರತೀಯ ಚಿಂತನೆಗಳು ಮತ್ತು ರಾಷ್ಟ್ರೀಯತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಾ ಎರಡು ಸಂಸ್ಕ್ರತಿಗಳು ಮುಖಾಮುಖಿಯಾದಾಗ ಒಂದು ಉಳಿಯುವುದು ಮತ್ತೊಂದು ಅಳಿಯುವುದು. ಭಾರತೀಯ ಸಂಸ್ಕ್ರತಿಯ ಮೇಲೆ ಎಷ್ಟೇ ಪ್ರಹಾರಗಳು ನಡೆದಿದ್ದರೂ ಅದನ್ನು ಉಳಿಸಿಕೊಂಡು ಬಂದಿದ್ದಾರೆ ಅದನ್ನು ಬೆಳೆಸುವುದು ನಮ್ಮ

Read More

ವಿಶ್ವ ಪ್ರಾಣಿ ದಿನ

ಮಾನವನಂತೆ ಪ್ರಾಣಿಗಳೂ ಪ್ರಕೃತಿಯ ಒಂದಂಗ ಅವನಿಗಿರುವಷ್ಟೇ ಸ್ವಾತಂತ್ರ್ಯ ಪ್ರಾಣಿಗಳಿಗೂ ಇವೆ ಎಂದು ಕೇರಳ ಪಶು ಸಂಗೋಪನಾ ಇಲಾಖೆಯ ಮಿಥುನ್‌ರವರು ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಎನ್.ಎಸ್.ಎಸ್. ವತಿಯಲ್ಲಿ ನಡೆದ ವಿಶ್ವ ಪ್ರಾಣಿ ದಿನದ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡುತ್ತ ಪ್ರಾಣಿಗಳಲ್ಲೂ ಮಾನವನಂತೆ ಸ್ನೇಹ ಭಾವ ಮತ್ತು ಸ್ವಾಮಿ ನಿಷ್ಠೆಯನ್ನು ಕಾಣಬಹುದು. ಕೇರಳದಲ್ಲಿ ಹಸು, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳ ಪೋಷಣೆ ಕಡಿಮೆಯಾಗುತ್ತಿದೆ. ಅಂತಹ ಪ್ರಾಣಿಗಳನ್ನು ಸಂರಕ್ಷಿಸಿಕೊಂಡು ಬಂದರೆ ಮಾನವನ ಬದುಕಿಗೆ ಸಹಕಾರಿಯಾಗುತ್ತದೆ. ಎಂದು ತಿಳಿಸಿ ಪ್ರಾಣಿ ರಕ್ಷಣೆಯ

Read More

ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಕುರಿತು ಉಪನ್ಯಾಸ

ಶಾಂತಿ, ತ್ಯಾಗ, ಸಹಿಷ್ಣತೆ, ಸ್ವಾವಲಂಬನೆ ಅಹಿಂಸೆ ಮೊದಲಾದ ತತ್ತ್ವಗಳನ್ನು ಜಗತ್ತಿಗೆ ಸಾರಿದವರು ಮಹಾತ್ಮಾಗಾಂಧೀಜಿ ಎಂದು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ಪ್ರಮೋದ್ ಎಂ.ಜಿ. ನುಡಿದರು. ಅವರು ಪೆರ್ಲ ನಾಲಂದ ಕಾಲೇಜಿನ ಎನ್.ಎಸ್.ಎಸ್ ವತಿಯಲ್ಲಿ ನಡೆದ ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಇಂದಿನ ಮಾನವನ ಯಾಂತ್ರಿಕ ಬದುಕಿನಲ್ಲಿ ಗಾಂಧೀಜಿಯ ಚಿಂತನೆಗಳು ಮತ್ತು ಮಾನವೀಯ ಮೌಲ್ಯಗಳು ಅರ್ಥ ಕೆಡುತ್ತಿವೆ. ಈ ಸಂದರ್ಭದಲ್ಲಿ ಅದರ ಜಾಗೃತಿಗಾಗಿ ಗಾಂಧೀಜಿಯವರನ್ನು ಮತ್ತೆ ಮತ್ತೆ

Read More

ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ 125ನೇ ವರ್ಷಾಚರಣೆ

ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದ ಅಂತಃಸತ್ವವನ್ನು ವಿಶ್ವಕ್ಕೆ ತಿಳಿಸಿಕೊಟ್ಟ ಮಹಾತ್ಮರು ವಿವೇಕಾನಂದರು ಎಂದು ಪೆರ್ಲ ನಾಲಂದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಕೆ.ಶಿವಕುಮಾರ್ ರವರು ನುಡಿದರು. ಅವರು ನಾಲಂದ ಕಾಲೇಜಿನಲ್ಲಿ ನಡೆದ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ 125ನೇ ವರ್ಷಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಭಾರತ ದರಿದ್ರರ ದೇಶ, ಭಿಕ್ಷುಕರ ದೇಶ ಎಂದು ತಾತ್ಸಾರ ಮಾಡುತ್ತಿದ್ದ ವಿಶ್ವದ ಇತರ ದೇಶದ ಜನರಿಗೆ ಪ್ರೀತಿಯ, ವಾತ್ಸಾಲ್ಯದ ಬೀಜವನ್ನು ಬಿತ್ತಿ ವಿಶ್ವದ ಅಂತಃಚಕ್ಷುವನ್ನು ತೆರೆಸಿದ ವಿಶ್ವಗುರು ಎಂದರು. ’ಏಳಿ

Read More

ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವವನೇ ಗುರು – ಕಜಂಪಾಡಿ ಸುಬ್ರಹ್ಮಣ್ಯ ಭಟ್

ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುವವನೇ ಗುರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಭೋಧನ್ ಸಂಯೋಜಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನುಡಿದರು. ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಅಧ್ಯಾಪಕರ ದಿನದಂದು ’ಗುರು ನಮನ- ಒಂದು ಚಿಂತನೆ’ ಎಂಬ ವಿಷಯದ ಬಗೆಗೆ ವಿಶೇಷ ಉಪನ್ಯಾಸವನ್ನು ನೀಡುತ್ತ ಅರ್ಪಣಾ ಮನೋಭಾವ ತೋರುವ ತಾಯಿ, ತಂದೆ ಮತ್ತು ಗುರುಗಳನ್ನು ದೇವರಾಗಿ ಕಾಣುವ, ಗೌರವಿಸುವ ಸಂಸ್ಕೃತಿ ಭಾರತೀಯ ಸಂಸ್ಕೃತಿ. ವಿವೇಕಾನಂದರಂತಹಾ ಮಹಾಮಾನವರನ್ನು, ಪರಮಹಂಸರಂತಹ ದೇವಮಾನವರನ್ನು ಪಡೆದ ನಾಡು ಭಾರತ. ನಾವು

Read More

ಅಜಾತ ಶತ್ರು – ಸಂತಾಪ ಸೂಚಕ ಸಭೆ

ರಾಜಕೀಯ ಮುತ್ಸದ್ದಿ, ವಾಗ್ಮಿ, ಅಜಾತ ಶತ್ರು, ಅಟಲ್ ಬಿಹಾರಿ ವಾಜಪೇಯಿಯವರು ನಮ್ಮನ್ನು ಅಗಲಿದ್ದು ದೇಶಕ್ಕೆ ತುಂಬಲಾರದ ನಷ್ಟ. ವಿಶ್ವದಲ್ಲಿ ಭಾರತಕ್ಕೆ ಉನ್ನತ ಸ್ಥಾನವನ್ನು ತಂದು ಕೊಟ್ಟವರು ವಾಜಪೇಯಿಯವರು ಎಂದು ಡಾ| ವಿಘ್ನೇಶ್ವರ ವರ್ಮುಡಿಯವರು ನುಡಿದರು. ಅವರು ಪೆರ್ಲ ನಾಲಂದ ಮಹಾದ್ಯಾಲಯದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡುತ್ತ ವಾಜಪೇಯಿಯವರು ಪರಿಶುದ್ಧ ಮನಸ್ಸಿನವರು, ಯಾರಲ್ಲೂ ದ್ವೇಷವನ್ನು ಇಟ್ಟುಕೊಂಡವರಲ್ಲ. ಭಾರತದ ಬಗ್ಗೆ ಉನ್ನತ ಕನಸನ್ನು ಇಟ್ಟುಕೊಂಡವರು. ಅವರ ಕನಸ್ಸನ್ನು ನಾವು ನನಸು ಮಾಡಬೇಕು. ದೇಶದ ಅಭಿವೃದ್ದಿಯಲ್ಲಿ ವಾಜಪೇಯಿಯವರ ಕೊಡುಗೆ ಅಪಾರ.

Read More

ಸ್ವಾವಲಂಬಿ ಬದುಕಿಗೆ- ಸ್ವ ಉದ್ಯೋಗ

ಮಾನವನು ಸ್ವಾವಲಂಬಿಯಾಗಿ ಬದುಕಬೇಕಾದರೆ ಸ್ವ- ಉದ್ಯೋಗಿಯಾಗಿರಬೇಕು. ಎಂದು ಕೈಗಾರಿಕಾ ವಿಸ್ತರಣಾಧಿಕಾರಿಯಾದ ಅಶೋಕ್ ಎನ್. ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ನಡೆಸುವ ಸ್ವ- ಉದ್ಯೋಗ ಎಂಬ ಸರ್ಟಿಫಿಕೇಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುಡಿಕೈಗಾರಿಕೆಗಳಿಗೆ ಪ್ರಧಾನ ಸ್ಥಾನವಿತ್ತು. ಆ ಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಊರೂರು ಅಲೆಯುತ್ತಿರಲಿಲ್ಲ ಸ್ವಾವಲಂಬಿಗಳಾಗಿದ್ದರು. ಇಂದು ಅದನ್ನು ಮರೆತುದರಿಂದ ದೇಶದಲ್ಲಿ ನಿರುದ್ಯೋಗಿಗಳು ಸೃಷ್ಠಿಯಾಗುತ್ತಿದ್ದಾರೆ. ಇದಕ್ಕೆ ಸ್ವ-ಉದ್ಯೋಗ ಒಂದೇ ಪರಿಹಾರ ಮಾರ್ಗ. ಸ್ವ ಉದ್ಯೋಗಕ್ಕೆ ಸಾಕಷ್ಟು ಅವಕಾಶಗಳು ಮತ್ತು ಸಾಧ್ಯತೆಗಳಿವೆ.

Read More

ಎನ್.ಎಸ್.ಎಸ್ ಘಟಕದ ವತಿಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ

ವಿದ್ಯಾರ್ಥಿಗಳಲ್ಲಿ ವ್ಯಕ್ತಿ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತು ದೇಶ ಪ್ರಜ್ಞೆ ಬೆಳೆಯಲು ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಪ್ರಮುಖವಾದದ್ದು ಎಂದು ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಅರುಣ ಪ್ರಕಾಶ್ ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವತಿಯಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮನುಷ್ಯನಲ್ಲಿ ಮಾನವಿಯತೆಯನ್ನು, ಪರಿಸರ ಪ್ರೇಮವನ್ನು ಬೆಳೆಸುವಂತೆ ಎನ್.ಎಸ್.ಎಸ್ ಮಾಡುತ್ತದೆ. ಎನ್.ಎಸ್.ಎಸ್ ನಲ್ಲಿ ವಿದ್ಯಾರ್ಥಿ ದೆಸೆಯಿಂದ ತೊಡಗಿಸಿಕೊಂಡರೆ ಬೌದ್ಧಿಕ, ದೈಹಿಕ ದೃಢತೆಯೊಂದಿಗೆ ಜನಮನ್ನಣೆಯೂ ದೊರಕುತ್ತದೆ. ಬದುಕಿನಲ್ಲಿ ಎಂತಹ

Read More

ಸಂಶೋಧನೆಯ ಮೂಲ ಪ್ರಕೃತಿ ಹಾಗೂ ಮಗು – ಡಾ| ವರ್ಮುಡಿ

ನಾಲಂದ ಮಹಾವಿದ್ಯಾಲಯ ಪೆರ್ಲ ಇಲ್ಲಿನ ಅರ್ಥಶಾಸ್ತ್ರ ವಿಭಾಗವು ಆರಂಭಿಸಿರುವ ಸರ್ಟಿಫಿಕೇಟ್ ಕೊರ್ಸ್ ಆದ ಸರ್ವೆ ರಿಸರ್ಚ ಇದರ ಉದ್ಘಾಟನಾ ಸಮಾರಂಭವು ದಿನಾಂಕ 27-7-2018 ರಂದು ಕಾಲೇಜಿನ ಸಭಾಭವನದಲ್ಲಿ ಜರಗಿತು. ಕಾರ್‍ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ವಿವೇಕಾನಂದ ಕಾಲೇಜಿನ ರಸಾಯನ ಶಾಸ್ತ್ರ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ| ಕೆ.ವಿ ಕಾರಂತರವರು ಮಾತನಾಡುತ್ತಾ ಸಂಶೋಧನೆಯಿಂದ ದೊರಕಬೇಕಾದ ವಿವಧ ಅವಕಾಶಗಳ ಬಗ್ಗೆ ಮಾಹಿತಿಗಳನ್ನ ತಿಳಿಸಿದರು. ಸಂಶೊಧನೆ ಎಂಬುದು ಯಾಕಾಗಿ ಮತ್ತು ಇದರ ವಿಧಿವಿಧಾನಗಳ ಬಗ್ಗೆ ಅವರು ಮಾಹಿತಿಯನ್ನ ಒದಗಿಸಿದರು.

Read More