×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಲ್ಲೀನತೆ, ಪ್ರೇಕ್ಷಕರಲ್ಲಿ ತದಾತ್ಮ್ಯತೆ, ಇಂದ್ರಿಯಾತೀತ ಅನುಭವ

ಪೆರ್ಲ ನಾಲಂದ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ರವೀಶ್ ತಂತ್ರಿ ಕುಂಟಾರು

ನಾವು ನಮ್ಮನ್ನು ಯಾವುದೇ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಕ್ರಿಯೆ ಜಾರಿಯಲ್ಲಿದ್ದು ಮನ ತಟಸ್ಥವಾಗಿರುತ್ತದೆ.ಕ್ರೀಡಾಳುಗಳು ಕ್ರೀಡಾ ಚಟುವಟಿಕೆಗಳಲ್ಲಿ ಏಕಾಗ್ರತೆ ಸಾಸಿದರೆ, ವೀಕ್ಷಕರು ಅದೇ ರೀತಿಯ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ.ಆಟಗಾರನ ತಲ್ಲೀನತೆ ವೀಕ್ಷಕರಲ್ಲಿ ಇಂದ್ರಿಯಾತೀತ ಅನುಭವದ ಕಿಡಿ ಹುಟ್ಟಿಸಬಲ್ಲದು ಎಂದು ರವೀಶ ತಂತ್ರಿ ಕುಂಟಾರು ಹೇಳಿದರು.

ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಶನಿವಾರ ರಾತ್ರಿ ನಡೆದ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, 60 ಕೆ.ಜಿ.ವಿಭಾಗದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

9plNalanda2

9plNalanda

9plNalanda1

ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಇರಿಸಿ ಅವರನ್ನು ಜಾಗೃತಗೊಳಿಸಿ ರಾಷ್ಟ್ರ ನಿರ್ಮಾಣದಲ್ಲಿ ಅಮೂಲ್ಯ ಕೊಡುಗೆ ನೀಡಿದ ಸ್ವಾಮಿ ವಿವೇಕಾನಂದರು, ಬಲಿಷ್ಠ ಮಹಾತೇಜ ಪರಾಕ್ರಮವುಳ್ಳ ಸಿಂಹದ ಮರಿಗಳಂತಹ ಚೈತನ್ಯ ಸ್ವರೂಪವಾದ ನೂರು ಯುವಕರನ್ನು ಕೊಟ್ಟಲ್ಲಿ ನವಭಾರತದ ನಿರ್ಮಾಣ ಮಾಡುತ್ತೇನೆ ಎಂದಿದ್ದರು.

ಛತ್ರಪತಿ ಶಿವಾಜಿಯ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ, ತ್ಯಾಗ, ವೀರತ್ವವನ್ನು ಜಾಗೃತಗೊಳಿಸಿ ಜ್ಞಾನ, ಚಾರಿತ್ರ್ಯ, ಚಾತುರ್ಯ, ಸಂಘಟನೆ ಹಾಗೂ ಪರಾಕ್ರಮ, ಸಾತ್ವಿಕ ಮತ್ತು ರಜೋಗುಣಗಳ ಅಮೃತಪಾನ ನೀಡಿದ್ದ ರಾಜಮಾತೆ ಜೀಜಾಬಾಯಿಯ ಆದರ್ಶ ಸಮಸ್ತ ಮಾತೃವರ್ಗಕ್ಕೆ ಪ್ರೇರಣೆಯಾಗಿದೆ.

ಮಹಾ ಪುರುಷ ಶಿವಾಜಿಯ ಆದರ್ಶವನ್ನು ಪ್ರೇರಣೆಯಾಗಿಸಿದ ಪೆರ್ಲದ ಶಿವಾಜಿ ಫ್ರೆಂಡ್ಸ್ ಕ್ಲಬ್ ಊರಿನ ಎಲ್ಲಾ ಧಾರ್ಮಿಕ, ಸಾಮಾಜಿಕ, ಚಟುವಟಿಕೆಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.ಯುವ ಸಂಘಟಕ ಅಜಯ್ ಪೈ ನೇತೃತ್ವದ ಸಂಘಟನೆ ಕಾಲೇಜು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿ ಅಹೋರಾತ್ರಿ ಶ್ರಮವಹಿಸಿದ ಪರಿಣಾಮ ಕಾಲೇಜು ಕ್ರೀಡಾಂಗಣ ನಿರ್ಮಾಣ ಸಾಕಾರಗೊಂಡಿದೆ. ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ದೇಶ ಪ್ರೇಮ ಮೆರೆದ ಶಿವಾಜಿ ಸಂಘಟನೆ ಯುವ ಸಮೂಹ ಮುಂದೆ ಬಂದರೆ ಸುದೃಢ ರಾಷ್ಟ್ರ ನಿರ್ಮಿಸಬಹುದು ಎಂಬ ಸ್ವಾಮಿ ವಿವೇಕಾನಂದರ ಸಂದೇಶವನ್ನು ಸಾಬೀತು ಪಡಿಸಿದೆ ಎಂದರು.

ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಷ್ಣು ನಾವಡ ಮತ್ತು ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ)ವಿಷ್ಣುಮೂರ್ತಿ ಕ್ಷೇತ್ರದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚತ್ತಾಯ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.

ನಾಲಂದ ಕಾಲೇಜು ಪ್ರಿನ್ಸಿಪಾಲ್ ಡಾ.ವಿಘ್ನೇಶ್ವರ ವರ್ಮುಡಿ ನಾರಿಕೇಳ ಒಡೆಯುವ ಮೂಲಕ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿ, ತಾಳ್ಮೆ, ಸಹನೆ, ಮಾನಸಿಕ, ಶಾರೀರಿಕ ದೃಢತೆ,ಸಾಮಾಜಿಕ ಕಳಕಳಿ ವ್ಯಕ್ತಿಯನ್ನು ಗುರುತಿಸುವಲ್ಲಿ ನಿರ್ಣಾಯಕ.ಕ್ರೀಡೆಗಳಲ್ಲಿ ತೊಡಗಿಸುವ ವ್ಯಕ್ತಿ ಎಲ್ಲಾ ಕ್ಷೇತ್ರಗಳಲ್ಲೂ ಸಫಲನಾಗುವನು. ಕ್ರೀಡಾಂಗಣವನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದು ಜೀವನದ ಮಹತ್ವಪೂರ್ಣ ದಿನಗಳಲ್ಲಿ ಒಂದಾಗಿದೆ ಎಂದ ಅವರು ಕ್ರೀಡಾಂಗಣ ನಿರ್ಮಾಣ ಸಾಕಾರಗೊಳಿಸಿದ ಕಾಲೇಜು ಆಡಳಿತ ಮಂಡಳಿ, ಶಿವಾಜಿ ಸಂಘಟನೆಯ ಪ್ರಯತ್ನವನ್ನು ಶ್ಲಾಘಿಸಿದರು.

ಕಾಲೇಜು ಆಡಳಿತ ಸಮಿತಿ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಶುಭ ಹಾರೈಸಿ ಮಾತನಾಡಿ, ಕಾಲೇಜಿಗೆ ಸಂಬಂಸಿದಂತೆ ಕ್ರೀಡಾಂಗಣ ಮಹತ್ವ ಪೂರ್ಣ ಕೊರತೆಯಾಗಿತ್ತು.ಆಡಳಿತ ಸಮಿತಿ, ಊರವರ ಸತತ ಪರಿಶ್ರಮದ ಫಲವಾಗಿ ಸಾಕಾರಗೊಂಡಿದೆ ಎಂದರು.

ನಿವೃತ್ತ ಸಿಆರ್ ಪಿಎಫ್ ಅಕಾರಿ ಅಪ್ಪಯ್ಯ ಮಣಿಯಾಣಿ ಬಿ., ಬಿಎಸ್ ಎಫ್ ಯೋಧರಾದ ಬಾಲಕೃಷ್ಣ ಬದಿ ಮತ್ತು ರಮೇಶ್ ನಾಯ್ಕ್ ಬಿ., ಅವರನ್ನು ಗೌರವಿಸಲಾಯಿತು.

ಅವನೀಶ್ ಬಿ.ಶೆಟ್ಟಿ ಪ್ರಾರ್ಥಿಸಿದರು.ಸುಮಿತ್ ರಾಜ್ ಪೆರ್ಲ ಸ್ವಾಗತಿಸಿದರು.ಉದಯ ’ ಶುಭಂ’ ಪೆರ್ಲ ವಂದಿಸಿದರು.ದೀಕ್ಷಿತ್ ಶೆಟ್ಟಿ ಬಜಕೂಡ್ಲು ನಿರ್ವಹಿಸಿದರು.