News & Events
ಕಣ್ಣೂರು ವಿಶ್ವವಿದ್ಯಾಲಯ ಮಟ್ಟದ ಕಲೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿದ್ಯಾಲಯ ಮಟ್ಟದ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದ ಕಾಲೇಜು ತಂಡ, ಕನ್ನಡ ಪ್ರಬಂಧ ರಚನೆಯಲ್ಲಿ ಎ ಗ್ರೇಡ್ನೊಂದಿಗೆ ತೃತೀಯ ಸ್ಥಾನ ಪಡೆದ ತೃತೀಯಾ ವರ್ಷ ಬಿ ಕಾಂ. ವಿದ್ಯಾರ್ಥಿನಿ ವಿನ್ಯಶ್ರೀ ಅವರಿಗೆ ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಬಹುಮಾನ ವಿತರಿಸಿದರು.
ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಸಾಮರಸ್ಯ
ಪೆರ್ಲ: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಸಾರ್ವಭೌಮತ್ವ ಮೊದಲಾದ ಉದಾತ್ತ ಮೌಲ್ಯಗಳು ನಮ್ಮ ಸಂವಿಧಾನದ ಆಶಯಗಳಾಗಿವೆ. ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಾಮರಸ್ಯ ನೆಲೆ ನಿಂತು ನವ ಭಾರತದ ಕನಸು ಈಡೇರುವುದು ಎಂದು ನಾಲಂದಾ ಕಾಲೇಜು ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕಿ ಗೀತಾ ವಿ.ಭಟ್ ಹೇಳಿದರು. ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ಕಟ್ಟುಪಾಡು,
ಕಣ್ಣೂರು ವಿಶ್ವವಿದ್ಯಾನಿಲಯದ 2018-19 ರ ಕಲೋತ್ಸವದಲ್ಲಿ ವಿದ್ಯಾರ್ಧಿಗಳಿಗೆ ಬಹುಮಾನ
ಕಣ್ಣೂರು ವಿಶ್ವವಿದ್ಯಾನಿಲಯದ 2018-19 ರ ಕಲೋತ್ಸವವು ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜು ಕಾಞಂಗಾಡ್ ನಲ್ಲಿ ದಿನಾಂಕ 6-2-2019 ರಿಂದ 10-2-2019 ರ ವರೆಗೆ ನಡೆಯಿತು. ಇದರಲ್ಲಿ ಪೆರ್ಲ ನಾಲಂದ ಕಾಲೇಜಿನಿಂದ ಸುಮಾರು 30 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಯಕ್ಷಗಾನ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ’ಎ’ ಗ್ರೇಡ್, ಮಾತ್ರವಲ್ಲದೆ ಕನ್ನಡ ಪ್ರಬಂಧ ರಚನೆಯಲ್ಲಿ ತೃತೀಯ ಸ್ಥಾನದೊಂದಿಗೆ ’ಎ’ ಗ್ರೇಡ್ ಪಡೆದು ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಸ್ತೆ ಸುರಕ್ಷತಾ ನಿಯಮ ಪಾಲನೆ ಅವಶ್ಯ : ಟಿ. ವೈಕುಂಠನ್
ನಾಲಂದ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ತರಗತಿ ದೇಶಾದ್ಯಂತ ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅಪಘಾತ ಪ್ರಕರಣಗಳು ದಿನೇ ದಿನೇ ಗಣನೀಯವಾಗಿ ವರ್ಧಿಸುತ್ತಿದೆ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ವಾಹನ ಚಾಲಾಯಿಸಿದಲ್ಲಿ ಶೇಕಡಾ ೫೦ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆ ಸಹಾಯಕ ವಾಹನ ತಪಾಸಣಾಧಿಕಾರಿ ಟಿ. ವೈಕುಂಠನ್ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತೆ ತರಗತಿ ನೀಡಿ ಮಾತನಾಡಿದರು.
ನಾಲಂದ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನಾಚರಣೆ
ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ಮಹಾತ್ಮಾ ಗಾಂಧಿ ಹುತಾತ್ಮ ದಿನಾಚರಣೆ ನಡೆಯಿತು. ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿಯವರ ತ್ಯಾಗ ಮಹತ್ತರವಾಗಿದ್ದು, ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರು ಮಾಡಿದ ರೀತಿಯ ತ್ಯಾಗ ನಮ್ಮಿಂದ ಅಸಾಧ್ಯವಾದರೂ ದೇಶ ಸೇವೆಗೆ ನಮ್ಮಿಂದಾಗುವ ರೀತಿಯ ಕೊಡುಗೆ ನೀಡಲು ಮುಂದಾಗಬೇಕು ಎಂದರು. ಯೋಜನಾಧಿಕಾರಿ ಸುರೇಶ್ ಕೆ.ಎಂ. ಮಾತನಾಡಿ, ಗಾಂಧೀಜಿಯವರು ಅಹಿಂಸೆ ಪರಮಧರ್ಮ ಎಂದು ಪ್ರತಿಪಾದಿಸಿದ್ದರು.ಯುವ ಜನಾಂಗ ಮಹಾ ಪುರುಷನ ತತ್ವಾದರ್ಶಗಳನ್ನು ಪಾಲಿಸಬೇಕು
ಗ್ರಂಥಾಲಯದ ನೂತನ ಪರಾಮರ್ಶನ ವಿಭಾಗ ಉದ್ಘಾಟನೆ
ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು ಅದನ್ನು ಸಾಧ್ಯವಿದ್ದಷ್ಟು ಗಳಿಸಬೇಕು ಮತ್ತು ಬಳಸಬೇಕು ಎಂದು ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ, ನಾಲಂದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಕೆ.ವಿ ಪ್ರಭಾವತಿಯವರು ತಿಳಿಸಿದರು. ಅವರು ಪೆರ್ಲ ನಾಲಂದ ಕಾಲೇಜಿನ ಗ್ರಂಥಾಲಯದ ನೂತನ ಪರಾಮರ್ಶನ ವಿಭಾಗವನ್ನು ಉದ್ಘಾಟಿಸಿ ಮಾತನಾಡುತ್ತ ಇಂದಿನ ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಹೊಸ ಸಂಶೋಧನಾ ಪ್ರಕ್ರಿಯೆಗಳು ನಡೆಸಬೇಕಾದರೆ ಕಾಲೇಜುಗಳಲ್ಲಿ ಪರಾಮರ್ಶನ ವಿಭಾಗ ಅತೀ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕ್ಯಾಂಪ್ಕೋ ನಿರ್ದೇಶಕರು, ಕಾಲೇಜಿನ ಆಡಳಿತ ಮಂಡಳಿಯ
ಕಂಪ್ಯೂಟರ್ ಜ್ಞಾನ ಇಂದಿನ ಅಗತ್ಯ
ಇಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಸವಲತ್ತುಗಳಿವೆ ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಸಂಸ್ಥೆಗೂ, ನಾಡಿಗೂ ಕೀರ್ತಿಯನ್ನು ತರುವಂತಾಗಲಿ ಎಂದು ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಆದ ವಾಮನ ಪೈ ಯವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ನೂತನ ಕಂಪ್ಯೂಟರ್ ಲ್ಯಾಬ್‌ನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎಲ್ಲವನ್ನು ಅರಿತುಕೊಂಡು ಪ್ರತಿಯೊಂದು ಸಮಸ್ಯೆಯನ್ನು ಎದುರಿಸ ಬದುಕಬೇಕಾದರೆ ಕಂಪ್ಯೂಟರ್ ಜ್ಞಾನ ಅತೀ ಅಗತ್ಯ. ಮಾತ್ರವಲ್ಲದೆ ಜೀವನಾವಶ್ಯಕವಾಗಿದೆ. ಅದನ್ನು ಅರಿಯದವನು ಬದುಕಿ ಪ್ರಯೋಜನವಿಲ್ಲ ಎಂಬಂತಾಗಿದೆ.
ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ : ಶಾಂಭವಿ
ಪೆರ್ಲ : ಕೊರೆಯುವ ಚಳಿ, ಸುಡುವ ಬಿಸಿಲು, ಮಳೆ ಗಾಳಿಯನ್ನು ಲೆಕ್ಕಿಸದೆ ಮರುಭೂಮಿ, ಕಡಿದಾದ ಪರ್ವತ, ಹಳ್ಳ, ನದಿ, ಸಮುದ್ರವೆನ್ನದೆ ನಮ್ಮ ದೇಶದ ಗಡಿಯನ್ನು ಕಾಯುವ ಹಾಗೂ ದೇಶದ ರಕ್ಷಣೆ ಮಾಡುವ ಸೈನಿಕರ ತ್ಯಾಗ ಚಿರ ಸ್ಮರಣೀಯ.ಅವರನ್ನು ಗೌರವಾದರದಿಂದ ಕಾಣುವುದು ನಮ್ಮ ಕರ್ತವ್ಯವೂ ಹೌದು ಎಂದು ಪೆರ್ಲ ನಾಲಂದಾ ಕಾಲೇಜು ಉಪನ್ಯಾಸಕಿ ಶಾಂಭವಿ ಹೇಳಿದರು. ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಭಾರತೀಯ ಸೇನಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಯಾವುದೇ
ಸ್ವಾಮಿ ವಿವೇಕಾನಂದರಿಂದ ಸ್ವತಂತ್ರ, ನವ ಭಾರತ ನಿರ್ಮಾಣದ ಭದ್ರ ಬುನಾದಿ: ಅಮೃತ
ಪೆರ್ಲ: ಶ್ರೇಷ್ಟ ವ್ಯಕ್ತಿತ್ವ, ಅಪೂರ್ವ ವಾಗ್ಮೀಯತೆ ಹಾಗೂ ಪ್ರಚೋದನಾತ್ಮಕ ಬರವಣಿಗೆಗಳಿಂದ ರಾಷ್ಟ್ರ ಚೇತನವನ್ನು ಜಾಗೃತಗೊಳಿಸಿದ ವಿಶ್ವ ಚೇತನ ಸ್ವಾಮಿ ವಿವೇಕಾನಂದರು, ಯುವಕರಲ್ಲಿ ನವೋತ್ಸಾಹವನ್ನು ಕೆರಳಿಸಿ, ನಮ್ಮ ಸಂಸ್ಕೃತಿಯ ಬಗ್ಗೆ ಅರಿವು, ಹೆಮ್ಮೆ ಮೂಡಿಸಿ ಸ್ವತಂತ್ರ, ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ನಾಲಂದ ಕಾಲೇಜು ಉಪನ್ಯಾಸಕಿ ಅಮೃತ ಹೇಳಿದರು. ನಾಲಂದ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದಿಂದ ಸೋಮವಾರ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವಿಶ್ವದಾದ್ಯಂತ ಪರ್ಯಟನೆ ನಡೆಸಿ ತಮ್ಮ ವಿಚಾರ ಧಾರೆಗಳನ್ನು ಧಾರೆ
ಆರೋಗ್ಯವಂತ ಸ್ಪರ್ಧೆಗಳು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕ:ಶಶಿಭೂಷಣ ಶಾಸ್ತ್ರಿ
ಪೆರ್ಲ: ವಿದ್ಯಾರ್ಥಿ ದಿಶೆಯಲ್ಲಿಯೇ ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಳ್ಳಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸದೆ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಜೀವನದ ಮುಂದಿನ ಹಾದಿ ಸುಗಮವಾಗುವುದು ಎಂದು ಪೆರ್ಲ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ್ ಶಾಸ್ತ್ರಿ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಬಿ – ಕ್ವಿಜ್ 2019 ರಸಪ್ರಶ್ನೆಯ ಫೈನಲ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಸೋತರಷ್ಟೇ ಇನ್ನೊಬ್ಬ ಗೆಲ್ಲಲು ಸಾಧ್ಯ.ಸ್ಪರ್ಧೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ.ಸೋಲು, ಸವಾಲುಗಳು, ಸಮಸ್ಯೆಗಳಿಂದ ನಿಷ್ಕ್ರಿಯರಾಗದೆ ತಾರ್ಕಿಕ ಜ್ಞಾನವನ್ನು ಬಳಸಿ ಸೋಲಿನ ಕಾರಣಗಳನ್ನು ತಿಳಿದುಕೊಳ್ಳಬೇಕು.ಜೀವನದಲ್ಲಿ ಬೆಳೆಯಲು