ಅಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಶಾಂತ ಎಸ್. ಭಟ್
ವಿದ್ಯಾರ್ಥಿಗಳು ಪುಸ್ತಕ ಜ್ಞಾನಕ್ಕೆ ಸೀಮಿತಗೊಳ್ಳದೆ, ಸುತ್ತು ಮುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಾರ್ಡು ಸದಸ್ಯೆ, ಶಿಬಿರದ ಸಂಯೋಜಕ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್ ಹೇಳಿದರು.
ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸ್ವಚ್ಛತೆಯ ಕಾರ್ಯ ಹಮ್ಮಿಕೊಳ್ಳುವ ಮುಖಾಂತರ ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಇದೇ ರೀತಿ ಸ್ವಚ್ಛ ಮಾಡುತ್ತಿರಲು ಬೇರೆ ಯಾರಾದರೂ ಬರಬೇಕೆಂದಿಲ್ಲ, ಸ್ವಚ್ಛವಾಗಿಯೇ ಉಳಿಸುವ ಕಾರ್ಯ ಸ್ಥಳೀಯರದ್ದು ಹಾಗೂ ಸಾರ್ವಜನಿಕರದ್ದು ಎಂದರು.
ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ರಸ್ತೆ ಬದಿಯ ಕಾಡುಪೊದೆಗಳನ್ನು ಕಡಿಯುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿ ಇರಿಸುವುದು ಪ್ರತಿಯೊಬ್ಬನ ಕರ್ತವ್ಯ. ತ್ಯಾಜ್ಯ ಎಸೆಯಲಾರೆ, ಪರಿಸರ ಮಲಿನ ಮಾಡಲಾರೆ ಎಂಬ ದೃಢ ತೀರ್ಮಾನ ಪ್ರತಿಯೊಬ್ಬನೂ ಸ್ವೀಕರಿದರೆ ಶುಚೀಕರಣ ಹಮ್ಮಿಕೊಳ್ಳಬೇಕಾದ ಆವಶ್ಯಕತೆಯೇ ಇಲ್ಲ ಎಂದರು.
ಅಗಲ್ಪಾಡಿ ಶಾಲೆಯಿಂದ ಮಾರ್ಪನಡ್ಕ ಪೇಟೆಯ ವರೆಗೆ ರಸ್ತೆ ಬದಿ ಶುಚೀಕರಣ ಹಾಗೂ ಚರಂಡಿ ನಿರ್ಮಾಣ ನಡೆಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಅಜಿತ್ ಎಸ್., ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಜಿತ್, ಅಭಿಲಾಶ್ ಮಾರ್ಗದರ್ಶನ ನೀಡಿದರು.