News & Events
ಪ್ರಬಂಧ ರಚನೆ ಸ್ಪರ್ಧೆ : ತೃತೀಯ ಸ್ಥಾನ
ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಅಂಗವಾಗಿ ನೆಹರು ಕಾಲೇಜಿನಲ್ಲಿ ನಡೆದ ಕನ್ನಡ ಪ್ರಬಂಧ ರಚನೆ ಸ್ಪರ್ಧೆಯಲ್ಲಿ ನಾಲಂದ ಕಾಲೇಜಿನ ತೃತೀಯ ವರ್ಷ ಬಿಕಾಂ ವಿದ್ಯಾರ್ಥಿನಿ ವಿನ್ಯಶ್ರೀ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಗಳಿಸಿದರು.
ಹೈಡ್ರೋಫೋಲಿಕ್ ತಂತ್ರಜ್ಞಾನ : ನೀರ್ಚಾಲು ಫಾರ್ಮ್ ಹೌಸ್ ಭೇಟಿ
ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ನೇತೃತ್ವದಲ್ಲಿ ಶನಿವಾರ ಹೈಡ್ರೋಫೋಲಿಕ್ ತಂತ್ರಜ್ಞಾನ ಬಳಸಿ ಕಾರ್ಯಚರಿಸುತ್ತಿರುವ ನೀರ್ಚಾಲು ಫಾರ್ಮ್ ಹೌಸ್ ಅನ್ನು ಸಂದರ್ಶಿಸಲಾಯಿತು. ಘಟಕದ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಹಾಗೂ ಸದಸ್ಯರು ಜೊತೆಗಿದ್ದರು. ಫಾರ್ಮ್ ಹೌಸ್ ನ ಜಯದೇವ ಖಂಡಿಗೆ, ಕಿರಣ ನೀರ್ಚಾಲು ತರಕಾರಿ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು.
ಉಗ್ರರ ಅಟ್ಟಹಾಸ ಭಯೋತ್ಪಾದನೆಯ ಕರಾಳ ಮುಖದ ಅನಾವರಣ : ಕೇಶವ ಶರ್ಮ
ಪೆರ್ಲ: ಕಾಶ್ಮೀರ ಕಣಿವೆಯಲ್ಲಿ ಜೆಇಎಂ ಉಗ್ರರು ಅಟ್ಟಹಾಸ ಮೆರೆದಿರುವುದು ಅತ್ಯಂತ ಹೇಯ ಕೃತ್ಯವಾಗಿದು ಭಯೋತ್ಪಾದನೆಯ ಕರಾಳ ಮುಖವನ್ನು ಭಯೋತ್ಪಾದಕ ಸಂಘಟನೆಗಳು ಮತ್ತೊಮ್ಮೆ ಜಗಜ್ಜಾಹೀರು ಗೊಳಿಸಿದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಎಚ್ಚೆತ್ತು ಜಾತಿ ಮತ, ಪಕ್ಷ ಬೇಧ ಮರೆತು ದೇಶದ ರಕ್ಷಣೆಗೆ ಒಗ್ಗೂಡಲೇ ಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ನಾಲಂದ ಕಾಲೇಜು ಕನ್ನಡ ವಿಭಾಗದ ಉಪನ್ಯಾಸಕ, ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ ಹೇಳಿದರು. ಪೆರ್ಲ ನಾಲಂದ ಕಾಲೇಜು ಯೂನಿಯನ್ ನೇತೃತ್ವದಲ್ಲಿ ಶುಕ್ರವಾರ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ವೀರ ಯೋಧರಿಗೆ
ಫೈನ್ ಆರ್ಟ್ಸ್ ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ
ಪೆರ್ಲ ನಾಲಂದ ಮಹಾವಿದ್ಯಾಲಯ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಾಲಂದ ನಾಲಂದ ಕಾಲೇಜು ಯೂನಿಯನ್ ನೇತೃತ್ವದಲ್ಲಿ ನಡೆದ ಫೈನ್ ಆರ್ಟ್ಸ್ ಫೆಸ್ಟ್, ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ನಾಲಂದ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿ, ಉಕ್ಕಿನಡ್ಕಾಸ್ ಆಯುರ್ವೇದ ಸಂಸ್ಥೆ ನಿರ್ದೇಶಕ ಡಾ. ಜಯಗೋವಿಂದ ಉಕ್ಕಿನಡ್ಕ ಬಹುಮಾನ ವಿತರಿಸಿದರು.
ಸಮಾಜಮುಖಿ ಚಿಂತನೆಯಿಂದ ಪರಮಾನಂದ; ಸ್ವರ್ಗ ಸುಖಾನುಭವ
ಪೆರ್ಲ ನಾಲಂದ ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಗೋಪಾಲ ಚೆಟ್ಟಿಯಾರ್ ಪೆರ್ಲ: ಆತ್ಮ ಸಂತೃಪ್ತಿಗಿಂದ ಮಿಗಿಲಾದ ಸುಖ ಬೇರೊಂದಿಲ್ಲ. ಕಷ್ಟ ಕಾರ್ಪಣ್ಯದಿಂದ ಬಳಲುತ್ತಿರುವ ಜನರ ಸಂಕಷ್ಟ ಬಗೆ ಹರಿಸಿದಾಗ ಸಿಗುವ ಪರಮಾನಂದ ಹಾಗೂ ಆತ್ಮ ಸಂತೃಪ್ತಿ ಸ್ವರ್ಗ ಸುಖಕ್ಕೆ ಸಮನಾದುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು. ಪೆರ್ಲ ನಾಲಂದ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತೀಯ
ಕಣ್ಣೂರು ವಿಶ್ವವಿದ್ಯಾಲಯ ಮಟ್ಟದ ಕಲೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಪೆರ್ಲ ನಾಲಂದ ಮಹಾವಿದ್ಯಾಲಯದ ವಾರ್ಷಿಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಣ್ಣೂರು ವಿಶ್ವ ವಿದ್ಯಾಲಯ ಮಟ್ಟದ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದ ಕಾಲೇಜು ತಂಡ, ಕನ್ನಡ ಪ್ರಬಂಧ ರಚನೆಯಲ್ಲಿ ಎ ಗ್ರೇಡ್ನೊಂದಿಗೆ ತೃತೀಯ ಸ್ಥಾನ ಪಡೆದ ತೃತೀಯಾ ವರ್ಷ ಬಿ ಕಾಂ. ವಿದ್ಯಾರ್ಥಿನಿ ವಿನ್ಯಶ್ರೀ ಅವರಿಗೆ ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ಬಹುಮಾನ ವಿತರಿಸಿದರು.
ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಸಾಮರಸ್ಯ
ಪೆರ್ಲ: ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಧರ್ಮ ನಿರಪೇಕ್ಷತೆ, ಸಾಮಾಜಿಕ ನ್ಯಾಯ, ಸಾರ್ವಭೌಮತ್ವ ಮೊದಲಾದ ಉದಾತ್ತ ಮೌಲ್ಯಗಳು ನಮ್ಮ ಸಂವಿಧಾನದ ಆಶಯಗಳಾಗಿವೆ. ಸಾಮಾಜಿಕ ನ್ಯಾಯ ವ್ಯವಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಾಮರಸ್ಯ ನೆಲೆ ನಿಂತು ನವ ಭಾರತದ ಕನಸು ಈಡೇರುವುದು ಎಂದು ನಾಲಂದಾ ಕಾಲೇಜು ಅರ್ಥಶಾಸ್ತ್ರ ವಿಭಾಗ ಉಪನ್ಯಾಸಕಿ ಗೀತಾ ವಿ.ಭಟ್ ಹೇಳಿದರು. ಪೆರ್ಲ ನಾಲಂದ ಮಹಾ ವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ನಡೆದ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ಕಟ್ಟುಪಾಡು,
ಕಣ್ಣೂರು ವಿಶ್ವವಿದ್ಯಾನಿಲಯದ 2018-19 ರ ಕಲೋತ್ಸವದಲ್ಲಿ ವಿದ್ಯಾರ್ಧಿಗಳಿಗೆ ಬಹುಮಾನ
ಕಣ್ಣೂರು ವಿಶ್ವವಿದ್ಯಾನಿಲಯದ 2018-19 ರ ಕಲೋತ್ಸವವು ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜು ಕಾಞಂಗಾಡ್ ನಲ್ಲಿ ದಿನಾಂಕ 6-2-2019 ರಿಂದ 10-2-2019 ರ ವರೆಗೆ ನಡೆಯಿತು. ಇದರಲ್ಲಿ ಪೆರ್ಲ ನಾಲಂದ ಕಾಲೇಜಿನಿಂದ ಸುಮಾರು 30 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಯಕ್ಷಗಾನ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ’ಎ’ ಗ್ರೇಡ್, ಮಾತ್ರವಲ್ಲದೆ ಕನ್ನಡ ಪ್ರಬಂಧ ರಚನೆಯಲ್ಲಿ ತೃತೀಯ ಸ್ಥಾನದೊಂದಿಗೆ ’ಎ’ ಗ್ರೇಡ್ ಪಡೆದು ವಿದ್ಯಾರ್ಥಿಗಳು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಸ್ತೆ ಸುರಕ್ಷತಾ ನಿಯಮ ಪಾಲನೆ ಅವಶ್ಯ : ಟಿ. ವೈಕುಂಠನ್
ನಾಲಂದ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ತರಗತಿ ದೇಶಾದ್ಯಂತ ರಸ್ತೆ ಸುರಕ್ಷತೆ ಸಪ್ತಾಹ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಅಪಘಾತ ಪ್ರಕರಣಗಳು ದಿನೇ ದಿನೇ ಗಣನೀಯವಾಗಿ ವರ್ಧಿಸುತ್ತಿದೆ. ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿ ವಾಹನ ಚಾಲಾಯಿಸಿದಲ್ಲಿ ಶೇಕಡಾ ೫೦ರಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ಕಾಸರಗೋಡು ಪ್ರಾದೇಶಿಕ ಸಾರಿಗೆ ಇಲಾಖೆ ಸಹಾಯಕ ವಾಹನ ತಪಾಸಣಾಧಿಕಾರಿ ಟಿ. ವೈಕುಂಠನ್ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಮಂಗಳವಾರ ನಡೆದ ರಸ್ತೆ ಸುರಕ್ಷತೆ ತರಗತಿ ನೀಡಿ ಮಾತನಾಡಿದರು.
ನಾಲಂದ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಹುತಾತ್ಮ ದಿನಾಚರಣೆ
ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ಮಹಾತ್ಮಾ ಗಾಂಧಿ ಹುತಾತ್ಮ ದಿನಾಚರಣೆ ನಡೆಯಿತು. ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿಯವರ ತ್ಯಾಗ ಮಹತ್ತರವಾಗಿದ್ದು, ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರು ಮಾಡಿದ ರೀತಿಯ ತ್ಯಾಗ ನಮ್ಮಿಂದ ಅಸಾಧ್ಯವಾದರೂ ದೇಶ ಸೇವೆಗೆ ನಮ್ಮಿಂದಾಗುವ ರೀತಿಯ ಕೊಡುಗೆ ನೀಡಲು ಮುಂದಾಗಬೇಕು ಎಂದರು. ಯೋಜನಾಧಿಕಾರಿ ಸುರೇಶ್ ಕೆ.ಎಂ. ಮಾತನಾಡಿ, ಗಾಂಧೀಜಿಯವರು ಅಹಿಂಸೆ ಪರಮಧರ್ಮ ಎಂದು ಪ್ರತಿಪಾದಿಸಿದ್ದರು.ಯುವ ಜನಾಂಗ ಮಹಾ ಪುರುಷನ ತತ್ವಾದರ್ಶಗಳನ್ನು ಪಾಲಿಸಬೇಕು