News & Events
ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನ
ದಿ.ಗೌರು ಮಾಧವ ಭಟ್ ಸ್ಮಾರಕ ವಿವೇಕಾನಂದ ಶಿಶುಮಂದಿರ ಪೆರ್ಲ ಇದರ ಲೋಕಾರ್ಪಣೆ ನೆರವೇರಿಸಿ ವಿವಿಕ್ತಾನಂದ ಸ್ವಾಮೀಜಿ ಶಿಕ್ಷಣ ಮತ್ತು ಭೌತಿಕ ಸಂಪತ್ತುಗಳನ್ನು ಪಡೆಯುವುದರ ಜತೆಯಲ್ಲಿ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ಅರಿತು ಜೀವನದಲ್ಲಿ ರೂಢಿಸಲು ಪ್ರಯತ್ನಿಸಿದಲ್ಲಿ ಜೀವನ ಪರಮ ಪಾವನವಾಗುವುದು ಎಂದು ಕೇರಳ ರಾಜ್ಯ ಚಿನ್ಮಯ ಮಿಷನ್ ಕ್ಷೇತ್ರೀಯ ಮಖ್ಯಸ್ಥ ಶ್ರೀ ವಿವಿಕ್ತಾನಂದ ಸ್ವಾಮೀಜಿ ಹೇಳಿದರು. ದಿ.ಗೌರು ಮಾಧವ ಭಟ್ ಸ್ಮಾರಕ ವಿವೇಕಾನಂದ ಶಿಶುಮಂದಿರ ಪೆರ್ಲ ಇದರ ಲೋಕಾರ್ಪಣೆ ನೆರವೇರಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಪೋಷಕರು ತಮ್ಮ
’ಬಲಿಷ್ಠ ಹಾಗೂ ಸುಂದರ ಹಲ್ಲುಗಳಿಂದ ಆತ್ಮವಿಶ್ವಾಸ ವೃದ್ಧಿ’
ಸ್ವರ್ಗದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಡೆಂಟಲ್ ಅಸೋಸಿಯೇಷನ್ ಅಧ್ಯಕ್ಷ ಡಾ.ಶ್ರೀಕೃಷ್ಣ ಭಟ್ ಅಂದವಾದ ವದನಕ್ಕೆ ಸುಂದರ ನಗು ಮೌಲ್ಯ ಹಾಗೂ ಮೆರುಗು ನೀಡುವುದು.ಬಲಿಷ್ಟ ಹಾಗೂ ಸುಂದರ ಹಲ್ಲುಗಳಿಂದ ಮಾನವನ ವ್ಯಕ್ತಿತ್ವ ಹಾಗೂ ಆತ್ಮವಿಶ್ವಾಸ ವೃದ್ಧಿಸಿ ಸರ್ವತೋಮುಖ ಯಶಸ್ಸಿಗೆ ಕಾರಣವಾಗುವುದು ಎಂದು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು ಶಾಖಾಧ್ಯಕ್ಷ ಡಾ. ಶ್ರೀಕೃಷ್ಣ ಭಟ್ ಹೇಳಿದರು. ಕುಂಡಾಪು ಜಲಾನಯನ ಅಭಿವೃದ್ಧಿ ಸಮಿತಿ ವಾಣೀನಗರ-ಪಡ್ರೆ, ನಬಾರ್ಡ್ ಎಸ್ ಡಿಪಿ-ಸಿಆರ್ ಡಿ ನೀಲೇಶ್ವರ, ಪೆರ್ಲ ನಾಲಂದ ಕಾಲೇಜು ಗ್ರಾಮ ವಿಕಾಸ
ಪ್ರಾಕೃತಿಕ ಸಂಪನ್ಮೂಲಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ಪ್ರತಿಯೊಬ್ಬನ ಕರ್ತವ್ಯ
ನಾಲಂದ ಕಾಲೇಜಿನಲ್ಲಿ ನಡೆದ ವಿಶ್ವ ಜಲ ದಿನಾಚರಣೆಯಲ್ಲಿ ಉಪನ್ಯಾಸಕಿ ಶಿಲ್ಪಾ ಎಸ್ ಹೆಗ್ಡೆ ಭೂಮಿಗೆ ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಸಂಪನ್ಮೂಲಗಳನ್ನು ಉಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಲಂದ ಕಾಲೇಜು ಸ್ಟೇಟಿಸ್ಟಿಕ್ಸ್ ವಿಭಾಗ ಉಪನ್ಯಾಸಕಿ ಶಿಲ್ಪಾ ಎಸ್.ಹೆಗ್ಡೆ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಜರಗಿದ ವಿಶ್ವ ಜಲ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು. ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನಸಂಖ್ಯಾ ಹೆಚ್ಚಳ, ನೀರಿನ ದುರ್ಬಳಕೆ, ಜಲ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ
ಪರಿಸರ ಸಂರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ
ನಾಲಂದ ಕಾಲೇಜಿನಲ್ಲಿ ನಡೆದ ವಿಶ್ವ ಅರಣ್ಯ ದಿನಾಚರಣೆ ಸಮಾರಂಭದಲ್ಲಿ ಉಪನ್ಯಾಸಕ ಕೇಶವ ಶರ್ಮ ಸುಡು ಬಿಸಿಲಿನಲ್ಲಿ ನೆರಳಾಗಿ ತಂಪನ್ನೀಯುವ ಮರಗಳು ಉದುರುವ ಎಲೆ, ಬೇರುಗಳಿಂದ ನೀರಿನ ಹರಿವನ್ನು ತಡೆಗಟ್ಟಿ ಇಳೆಗೆ ನೀರುಣಿಸುವುದಲ್ಲದೆ ಜೀವ ಸಂಕುಲಕ್ಕೆ ಬೇಡವಾದ ಅಂಗಾರಾಮ್ಲ ಸ್ವೀಕರಿಸಿ, ಜೀವಿಗಳ ಉಳಿವಿಗೆ ಬೇಕಾದ ಶುದ್ಧ ಆಮ್ಲಜನಕ ಒದಗಿಸಿ ಪ್ರಕೃತಿ ಸಮತೋಲನಕ್ಕೆ ಕಾರಣವಾಗಿದೆ.ಇಂತಹ ನಿಸ್ವಾರ್ಥಿ ಮರಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಕರ್ತವ್ಯ ಎಂದು ನಾಲಂದ ಕಾಲೇಜು ಕನ್ನಡ ವಿಭಾಗ ಉಪನ್ಯಾಸಕ, ಸ್ಟಾಫ್ ಸೆಕ್ರೆಟರಿ ಕೇಶವ ಶರ್ಮ ಹೇಳಿದರು. ಕಾಲೇಜು
ಪೆರ್ಲ ’ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರ – ಅರ್ಜಿ ಸಲ್ಲಿಕೆಗೆ ಮಾರ್ಚ್ 30 ಕೊನೆಯ ದಿನ
ಪೆರ್ಲ: ಪೆರ್ಲ ಸೇವಾ ಸಹಕಾರಿ ಬ್ಯಾಂಕ್, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್, ಕಾಸರಗೋಡು ಅಗ್ರಿಕಲ್ಚರಿಸ್ಟ್ ಕೋ-ಓಪರೇಟಿವ್ ಮಾರ್ಕೆಟಿಂಗ್ ಸೊಸೈಟಿ-ನೀರ್ಚಾಲು, ಪೆರ್ಲ ಶ್ರೀ ಶಂಕರ ಸೇವಾ ಸಮಿತಿ, ಕ್ಯಾಂಪ್ಕೊ ಇನ್ ಸೇವಾ, ನಾಲಂದ ಮಹಾವಿದ್ಯಾಲಯ, ನಾಲಂದ ಚಾರಿಟೇಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಎ.8 ರಿಂದ 12 ರ ತನಕ ಬೆಳಗ್ಗೆ 8.30 ರಿಂದ ಸಂಜೆ 5 ರ ತನಕ ಪೆರ್ಲ ಶಂಕರಸದನ ಪರಿಸರದಲ್ಲಿ ಒಟ್ಟು 5 ದಿನಗಳ ’ಅಡಿಕೆ ಕೌಶಲ್ಯ ಪಡೆ’ ತರಬೇತಿ ಶಿಬಿರ ನಡೆಯಲಿದ್ದು ಮಾರ್ಚ್ 30
ನಾಲಂದ ಕಾಲೇಜಿನಲ್ಲಿ ಎ. 1 ರಿಂದ ಉಚಿತ ಬಿಡ್ಜ್ ಕೋರ್ಸ್
ಪೆರ್ಲ: ಕಣ್ಣೂರು ವಿಶ್ವ ವಿದ್ಯಾಲಯ ಅಂಗೀಕೃತ ಪೆರ್ಲ ನಾಲಂದ ಮಹಾವಿದ್ಯಾಲಯದ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಬ್ರಿಡ್ಜ್ ಕೋರ್ಸ್ ನಡೆಯಲಿದೆ. ಏಪ್ರಿಲ್ 1 ರಿಂದ ತರಬೇತಿ ಆರಂಭವಾಗಲಿದ್ದು, ಮಾರ್ಚ್ 2019 ರಲ್ಲಿ ಪ್ಲಸ್ ಟು ಪರೀಕ್ಷೆ ಬರೆದ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪದವಿ ಶಿಕ್ಷಣ ಪಡೆಯ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕೌಂಟೆನ್ಸಿ, ಬ್ಯುಸಿನೆಸ್ ಸ್ಟೇಟಿಸ್ಟಿಕ್ಸ್, ಮಾರ್ಕೆಟಿಂಗ್ ವಿತ್ ಸೋಫ್ಟ್ ಸ್ಕಿಲ್ ಡೆವೆಲಪ್ಮೆಂಟ್, ಸ್ಪೋಕನ್ ಇಂಗ್ಲೀಷ್ ವಿಷಯಗಳಲ್ಲಿ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಆಸಕ್ತ ವಿದ್ಯಾರ್ಥಿಗಳು
ತುರ್ತಿ ದ್ವೀಪದಲ್ಲಿ ಸ್ವಚ್ಛತಾ ಕಾರ್ಯಕ್ರಮ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಶನಿವಾರ ಎಸ್. ಜೆ. ಪ್ರಸಾದ್ ರವರ ಮಾಲಕತ್ವದ ಕಾಸರಗೋಡಿನ ತುರ್ತಿ ದ್ವೀಪವನ್ನು ಸಂದರ್ಶಿಸಲಾಯಿತು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶಂಕರ ನಾರಾಯಣ ಭಟ್, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ., ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ ಹಾಗೂ ಎನ್ನೆಸ್ಸೆಸ್ ಕಾರ್ಯದರ್ಶಿ ರೂಪ, ಧನ್ಯ, ನಿಶ್ಚಿತ, ಸುದೀಶ್, ಭವ್ಯ ಉಪಸ್ಥಿತರಿದ್ದರು.
’ವ್ಯಸನ ಮುಕ್ತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಧ್ಯೇಯವಾಗಲಿ’
ನಾಲಂದ ಕಾಲೇಜಿನಲ್ಲಿ ಮಾದಕವಸ್ತು ಉಪಯೋಗ ವಿರುದ್ಧ ತರಗತಿ ನೀಡಿ ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಯಾತ್ರೆ ಸಂಚಾಲಕ ಮೋಹನನ್ ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ.ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ ಎಂದು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ತಿಳುವಳಿಕಾ ಸಂದೇಶ ಯಾತ್ರೆಯ ಸಂಚಾಲಕ ಮೋಹನನ್ ಹೇಳಿದರು. ರಾಜ್ಯ ಜನಮೈತ್ರಿ ಪೊಲೀಸ್ ಮತ್ತು ಕೋಝಿಕ್ಕೋಡು ಸಾಂತ್ವನಂ ಟ್ರಸ್ಟ್ ನೇತೃತ್ವ, ಪೆರ್ಲ ನಾಲಂದ ಕಾಲೇಜು
’ಮಹಿಳೆಯರು ಧೈರ್ಯದಿಂದ ಸವಾಲು ಎದುರಿಸಿ’
ಭಾರತೀಯ ಸ್ತ್ರೀಯರು ಔದ್ಯೋಗಿಕ, ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಪುರುಷರಷ್ಟೇ ಸಾಧನೆ ಮಾಡಿದ್ದಾರೆ ಎಂದು ನಾಲಂದ ಕಾಲೇಜು ಜಿಯೋಗ್ರಾಫಿ ವಿಭಾಗ ಉಪನ್ಯಾಸಕಿ ವಿದ್ಯಾ. ಕೆ.ಎಂ. ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತೀಯ ಧರ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜನೀಯ ಸ್ಥಾನವಿದ್ದು ಸ್ತ್ರೀಯರನ್ನು ಎಲ್ಲಿ ಗೌರವ ಭಾವದಿಂದ ಕಾಣಲಾಗುವುದೋ ಅಲ್ಲಿ ದೇವರಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ತಾಯಿ, ಸಹೋದರಿ, ಮಡದಿ
ಯಕ್ಷಗಾನ ಸ್ಪರ್ಧೆಯಲ್ಲಿ ನಾಲಂದ ಕಾಲೇಜು ತಂಡ ಪ್ರಥಮ
ಕಾಸರಗೋಡು : ಕಾಞಂಗಾಡು ನೆಹರು ಕಾಲೇಜಿನಲ್ಲಿ ನಡೆದ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜು ತಂಡ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. ಕಾಲೇಜು ವಿದ್ಯಾರ್ಥಿಗಳಾದ ನಿರಂಜನ್ ಬಲ್ಲುಳ್ಳಾಯ, ನಿತಿನ್ ಕುಮಾರ್, ಅಶ್ವಿನಿ, ದೀಕ್ಷಿತ್, ಅಕ್ಷಯ್, ರೂಪ, ನಿಶ, ಅಕ್ಷತ ಹಾಗೂ ಭವ್ಯಶ್ರೀ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನಾಟ್ಯ ಗುರು ಬಾಲಕೃಷ್ಣ ಉಡ್ಡಂಗಳ ನಿರ್ದೇಶನ ಹಾಗೂ ದಾಮೋದರ ಬೆಟ್ಟಂಪಾಡಿ ಭಾಗವತಿಕೆ, ರಾಜೇಂದ್ರ ಪುಂಡಿಕೈ ಚೆಂಡೆ, ವರ್ಷಿತ್ ಕೆಜೆಕ್ಕಾರ್ ಮದ್ದಳೆಯಲ್ಲಿ ಸಹಕರಿಸಿದ್ದರು. ಉಪನ್ಯಾಸಕರುಗಳಾದ ಶಂಕರ