News & Events
ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ
ವಿದ್ಯಾರ್ಥಿಗಳು ತಮ್ಮ ಕನಸ್ಸನ್ನು ನನಸಾಗಿಸಲು ಪ್ರಯತ್ನಿಸುವಾಗ ಹಲವಾರು ಸವಾಲುಗಳನ್ನು ಎದುರಿಸಬೇಕಾದೀತು, ಅವುಗಳನ್ನೆಲ್ಲ ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ಎದುರಿಸಿ, ಕನಸ್ಸನ್ನು ನನಸಾಗಿಸಲು ಪ್ರಯತ್ನಿಸಬೇಕು ಎಂದು ಕಣ್ಣೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ, ಕಾಸರಗೋಡು ಸರಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ| ವಿಜಯನ್ ಕೆ. ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಗುರುವಾರ ಜರಗಿದ ಧತ್ತಿ ನಿಧಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕನಸು ಕಾಣಲು ಸಿದ್ಧರಾಗಿ ಇರದಿದ್ದಲ್ಲಿ ಅವನ ವೈಯಕ್ತಿಕ
ಪ್ರತಿ ಮನೆ ಮನೆಯಲ್ಲೂ ಒಬ್ಬ ಸೈನಿಕ ಹುಟ್ಟಲಿ
ಪೆರ್ಲ: ರಾಷ್ಟ್ರ ಸುರಕ್ಷಿತವಾಗಿದ್ದಲ್ಲಿ ಮಾತ್ರ ನಾವು ನಿರ್ಭಯವಾಗಿ ಜೀವಿಸಲು ಸಾಧ್ಯ. ರಾಷ್ಟ್ರದ ರಕ್ಷಣೆಗಾಗಿ ಪ್ರತಿ ಮನೆ ಮನೆಯಲ್ಲಿ ಒಬ್ಬ ಸೈನಿಕ ಹುಟ್ಟಲಿ, ತನ್ನ ಜೀವನವನ್ನು ರಾಷ್ಟ್ರ ಸೇವೆಗೆ ಮೀಸಲಿಡುವಂತಾಗಲಿ ಎಂದು ಕಾಲೇಜಿನ ಅಂಗ್ಲಬಾಷಾ ಉಪನ್ಯಾಸಕಿ ಸವಿತಾ ಡಿ. ಶೆಟ್ಟಿ ಹೇಳಿದರು. ೨೦ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಕಾರ್ಗಿಲ್ ವಿಜಯ ದಿವಸ ಒಂದು ದಿನಕ್ಕೆ ಮಾತ್ರ
ಅಧ್ಯಯನ ಶೀಲ ಸೂತ್ರ ಅಳವಡಿಸಿದಲ್ಲಿ ಉತ್ತಮ ಅಂಕ
ವಿಷಯಗಳನ್ನು ಸರಿಯಾಗಿ ಮನನ ಮಾಡಿ ಅರ್ಥೆಸಿ ಓದಿದಲ್ಲಿ ಪರೀಕ್ಷೆಯಲ್ಲಿ ಎದುರಾಗುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಬರೆಯಲು ಸಾಧ್ಯ ಎಂದು ಮನಶಾಸ್ತ್ರಜ್ಞ, ಪುನರ್ನವ ಟ್ರಸ್ಟ್ ನ ಟ್ರಸ್ಟಿ ನವೀನ್ ಎಲ್ಲಂಗಳ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ನಡೆದ ’ಸ್ಟಡಿ ಸ್ಕಿಲ್ಸ್ ಹಾಗೂ ಗೋಲ್ ಸೆಟ್ಟಿಂಗ್’ ತರಬೇತಿ ನೀಡಿ ಮಾತನಾಡಿದರು. ಪರೀಕ್ಷಾ ಸಮಯದಲ್ಲಿ ಮಾತ್ರ ಸಿದ್ಧತೆ ನಡೆಸುವುದು ಸೂಕ್ತವಲ್ಲ.ಶೆಕ್ಷಣಿಕ ವರ್ಷದ ಪ್ರಾರಂಭದಲ್ಲೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ವಿಷಯ ಮನದಟ್ಟಾಗಿ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಗಳು ಬಂದರೂ ಸಮರ್ಪಕ
ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ಗುರು ಪೂರ್ಣಿಮಾ ಆಚರಣೆ
ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಇವರ ಅಧ್ಯಕ್ಷತೆಯಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಕಾಟುಕುಕ್ಕೆಯ ಬಾಲಪ್ರಭಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಖಂಡೇರಿ ಇವರು ಗುರುಗಳನ್ನು ಪೂಜಿಸೋ ಭಾರತೀಯ ಸಂಸ್ಕೃತಿ ಇವತ್ತು ನಿನ್ನೆಯದಲ್ಲ. ಗುರುಕುಲ ಪದ್ಧತಿಯಿಂದಲೇ ಇತ್ತು. ವೇದವ್ಯಾಸರು ಮಹರ್ಷಿಗಳೂ ಗುರುವಾಗಿದ್ದರು. ಆಷಾಢ ಮಾಸದ ಈ ಹುಣ್ಣಿಮೆ ಅವರ ಜನ್ಮದಿನವಾಗಿದ್ದು ದೇಶದಾದ್ಯಂತ ಇಂದು ಅವರನ್ನು ಸ್ಮರಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಬಾಲ್ಯದಲ್ಲಿಎಂಥ ಸಂಸ್ಕಾರ ನಮಿಗೆ ಲಭಿಸುವುದೋ ಆ ರೀತಿಯಲ್ಲಿಯೇ
ಅಂತಾರಾಷ್ಟ್ರೀಯ ನ್ಯಾಯ ದಿನಾಚರಣೆ
ಪೆರ್ಲ: ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಬೆಳೆದಂತೆ ಜಾಗತಿಕ ಸಮಸ್ಯೆಗಳನ್ನು ಸೌಹಾರ್ದ ಹಾಗೂ ಕಾನೂನು ಬದ್ಧವಾಗಿ ಬಗೆ ಹರಿಸಲು ಅಂತಾರಾಷ್ಟೀಯ ನ್ಯಾಯಾಲಯ ಸ್ಥಾಪಿತವಾಗಿದೆ ಎಂದು ನಾಲಂದ ಕಾಲೇಜು ಜಿಯೋಗ್ರಾಫಿ ವಿಭಾಗದ ಉಪನ್ಯಾಸಕಿ ಸುಮಾ ಹೇಳಿದರು. ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಬುಧವಾರ ನಡೆದ ಅಂತಾರಾಷ್ಟ್ರೀಯ ನ್ಯಾಯ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಕ್ತಿ ಶೋಷಣೆ, ತೊಂದರೆಗೊಳಗಾದಾಗ ಆ ಪರಿಸ್ಥಿತಿಯಿಂದ ರಕ್ಷಣೆ ಪಡೆಯುವ ಹಕ್ಕು ಅವನಿಗಿದೆ. ಸಮಸ್ಯೆಗಳ ನಿವಾರಣೆಗೆ ನೀತಿ ನಿಯಮ, ಕಾನೂನಿನ ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ
ಜನಸಂಖ್ಯೆ ದೇಶದ ಸಂಪತ್ತಾಗಿ ಬದಲಾದಲ್ಲಿ ರಾಷ್ಟ್ರದ ಅಭಿವೃದ್ಧಿ
ಜನಸಂಖ್ಯಾ ಹೆಚ್ಚಳ ಶಾಪವಲ್ಲ. ಜನಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ದೇಶದ ಸಂಪತ್ತಾಗಿ ಮಾರ್ಪಡುತ್ತದೆ ಎಂದು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ಅರ್ಥಶಾಸ್ತ್ರ ವಿಭಾಗದ ಸಹಯೋಗದಲ್ಲಿ ನಡೆದ ಜನಸಂಖ್ಯಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಭಾರತದ ಒಟ್ಟು ಜನಸಂಖ್ಯೆ 130 ಕೋಟಿ ಮೀರಿದ್ದು, ಚೈನಾವನ್ನು ಮೀರಿಸಿ ಮೊದಲನೇ ಸ್ಥಾನಕ್ಕೆ ಬರಲು ಸಣ್ಣ ಅಂತರವೇ ಬಾಕಿಯಿದೆಯಷ್ಟೇ. ನಾವು ಜನಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಬರುವುದು ಮುಖ್ಯವಲ್ಲ. ಆ ಜನಸಂಖ್ಯೆಯನ್ನು ಸಂಪತ್ತಾಗಿ
ವೈದ್ಯ ಹಾಗೂ ರೋಗಿಗಳ ಸಂಬಂಧ ಗಟ್ಟಿಗೊಳ್ಳಲಿ
ಮಾನವೀಯ ಸಂಬಂಧಗಳು ನಶಿಸಿಹೋಗುತ್ತಿರುವ ಈ ಕಾಲಘಟ್ಟದಲ್ಲಿ ವೈದ್ಯ ಹಾಗೂ ರೋಗಿಗಳ ನಡುವಿನ ಸಂಬಂಧವೂ ಶಿಥಿಲಗೊಳ್ಳುತ್ತಿದ್ದು, ವೈದ್ಯ ಹಾಗೂ ರೋಗಿಯ ಸಂಬಂಧ ಗಟ್ಟಿಗೊಳ್ಳಬೇಕಿದೆ ಎಂದು ಉಕ್ಕಿನಡ್ಕಸ್ ಆಯುರ್ವೇದಿಕ್ಸ್ ನ ಮಾಲಕ ಹಗು ನಾಲಂದ ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಜಯಗೋವಿಂದ ಉಕ್ಕಿನಡ್ಕ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಸಮಸ್ಯೆಗಳೊಂದಿಗೆ, ಹಲವು ರಾತ್ರಿ ಕೆಲಸ ಮಾಡುವ ವೈದ್ಯರ ಕುರಿತು ಸಂಶಯ ಪಡುವುದು ಸರಿಯಲ್ಲ.
ವ್ಯಾಸನಗಳಿಗೆ ಬಲಿಯಾಗುವ ಮುನ್ನ ಹೆತ್ತವರನ್ನು ನೆನಪಿಸಿ’
ರಾಷ್ಟ್ರದ ಭವಿಷ್ಯ ರೂಪಿಸಬೇಕಾಗಿರುವ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜು ಮಸ್ತಿಗಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಎಂದು ಕಾಸರಗೋಡು ಬಿ.ಸಿ.ಟ್ರಸ್ಟ್ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಸರಗೋಡು, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲೆ ಮತ್ತು ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಹಾಗೂ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ವ್ಯಸನಗಳಿಗೆ
ನಾಲಂದ ಕಾಲೇಜಿನಲ್ಲಿ ಯೋಗ ದಿನ 2019 : ವಿದ್ಯಾರ್ಥಿಗಳಿಗೆ ಯೋಗ ತರಬೇತಿ
ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ನೇತೃತ್ವದಲ್ಲಿ ಜರಗಿದ ಯೋಗದಿನ -2019 ವಿಶೇಷ ಕಾರ್ಯಕ್ರಮದಲ್ಲಿ ಪುತ್ತೂರು, ಮಂಗಳೂರು ಯೋಗಾರೋಗ್ಯ ಮತ್ತು ಯೋಗವಸಿಷ್ಟ ಯೋಗ ತೆರಪಿ ನಿರ್ದೇಶಕ ಡಾ. ಮಹಾಬಲ ಭಟ್ ನಾಲಂದ ಕಾಲೇಜು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು.
ಯೋಗದಿಂದ ಅಂತರಂಗ – ಬಹಿರಂಗ ಶುದ್ಧಿ
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ’ಯೋಗ ದಿನ – 2019’ ವಿಶೇಷ ಕಾರ್ಯಕ್ರಮದಲ್ಲಿ ಡಾ.ಮಹಾಬಲ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪಂಚೇಂದ್ರಿಯಗಳ ನಿಗ್ರಹ, ಅಂತರಂಗ- ಬಹಿರಂಗ ಶುದ್ಧಿಗೊಳಿಸುವ, ದೇಹ ಮತ್ತು ಮನಸ್ಸಿಗೆ ಚೈತನ್ಯ ನೀಡುವ ಯೋಗವನ್ನು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖಾಂತರ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ಪುತ್ತೂರು, ಮಂಗಳೂರು ಯೋಗಾರೋಗ್ಯ ಮತ್ತು ಯೋಗವಸಿಷ್ಟ ಯೋಗ ತೆರಪಿ ನಿರ್ದೇಶಕ ಡಾ.ಮಹಾಬಲ ಭಟ್ ಹೇಳಿದರು. ಯೋಗ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ