News & Events
ಯುವ ಜನಾಂಗದಿಂದ ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಸಾಧ್ಯ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ ನಬಾರ್ಡ್ನ ಜಂಟಿ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಜ್ಯೋತಿಶ್ ಜಗನ್ನಾಥ್ ವಿಶ್ವದಲ್ಲಿಯೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ವಿಶ್ವದ ಏಕೈಕ ದೇಶ ನಮ್ಮದಾಗಿದ್ದು, ಯುವಕರು ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಒತ್ತು ನೀಡಿದಲ್ಲಿ, ಖಂಡಿತವಾಗಿಯೂ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣವಾಗುತ್ತದೆ. ಆದುದರಿಂದ ಯುವ ಸಮೂಹ ಭ್ರಷ್ಟಾಚಾರ ಬಹಿಷ್ಕರಿಸುವ ಸಂಕಲ್ಪ ತೊಡಬೇಕು ಎಂದು ನಬಾರ್ಡ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜ್ಯೋತಿಶ್ ಜಗನ್ನಾಥ್ ಹೇಳಿದರು. ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಹಾಗೂ
ಜ್ಞಾನದಾಹಿಗಳಿಗೆ ಎಂದೆಂದಿಗೂ ಗೆಲುವು
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಕಾರ್ಯಕ್ರಮದಲ್ಲಿ ಡಾ. ವಿಘ್ನೇಶ್ವರ ವರ್ಮುಡಿ ಜ್ಞಾನದಾಹಿಗಳಿಗೆ ಎಂದೆಂದಿಗೂ ಗೆಲುವಾಗುತ್ತದೆ. ಆದುದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು. ಗಾಂಧಿ ಜಯಂತಿಯ ಪ್ರಯುಕ್ತ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ರಸಪ್ರಶ್ನೆ ಸ್ಪರ್ಧೆಯ ಸಮಾರೋಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪತ್ರಿಕೆಗಳನ್ನು, ಮಾಧ್ಯಮಗಳನ್ನು ವೀಕ್ಷಿಸಿ, ದೈನಂದಿನ ವಿದ್ಯಮಾನಗಳ ಕುರಿತು ತಿಳಿದುಕೊಳ್ಳುವ
ಗಾಂಧಿ ಜಯಂತಿಯ ಪ್ರಯುಕ್ತ ಎನ್ನೆಸ್ಸೆಸ್ ಘಟಕದ ವತಿಯಿಂದ ಸ್ವಚ್ಛತೆ
ಪೆರ್ಲ : ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಕಾಲೇಜಿನಿಂದ ಪೆರ್ಲ ಪೇಟೆಯ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ., ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಶ್ರೀನಿಧಿ ಹಾಗೂ ಅಜಿತ್ ಎಸ್., ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಭಿಲಾಶ್, ಅಜಿತ್ ಮತ್ತು ಸದಸ್ಯರು ಸಹಕರಿಸಿದರು.
ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಯುವಜನಾಂಗ ಶ್ರಮಿಸಿ
ಪೆರ್ಲ ನಾಲಂದ ಕಾಲೇಜು ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರತಿಜ್ಞೆ ಭೋಧಿಸಿ ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬನಲ್ಲೂ ಇರಬೇಕಾದ ದೇಶ ಪ್ರೇಮ, ಮಾನವೀಯತೆ, ಏಕತೆಯ ಮೌಲ್ಯಗಳು ನಶಿಸಿ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತವನ್ನು ಏಕೀಕರಿಸುವ ನಿಟ್ಟಿನಲ್ಲಿ ಪಟೇಲ್ ರವರು ಕೈಗೊಂಡ ನಿಸ್ವಾರ್ಥ ಸೇವೆಯನ್ನು ಮನಗಂಡು, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಯುವಜನಾಂಗ ಶ್ರಮಿಸಬೇಕು ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹೇಳಿದರು. ಪೆರ್ಲ ನಾಲಂದ
ಏಕತೆಯ ಸಂದೇಶ ಸಾರಲು ಪ್ರಯತ್ನಿಸಿ
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಏಕೀಕರಣ ದಿನಾಚರಣೆಯಲ್ಲಿ ಶಂಕರ್ ಖಂಡಿಗೆ ವಿವಿಧ ಜಾತಿಗಳಲ್ಲಿ, ಪಂಗಡದಲ್ಲಿ, ವಿಭಾಗದಲ್ಲಿ ನಾವು ಜನಿಸಿರಬಹುದು, ಬಡವನಾಗಿರಬಹುದು, ಶ್ರೀಮಂತನಾಗಿರಬಹುದು ಆದರೆ ನಮ್ಮಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ. ಆದುದರಿಂದ ಯುವಜನಾಂಗ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡು ಏಕತೆಯ ಸಂದೇಶ ಸಾರಲು ಪ್ರಯತ್ನಿಸಬೇಕು ಎಂದು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಏಕೀಕರಣ ದಿನಾಚರಣೆಯಲ್ಲಿ ಅವರು ಮಾತನಾಡಿದರು. ವಿವಿಧತೆಗಳಿಂದ
ಮಾನಸಿಕ ಆರೋಗ್ಯವೇ ಯಶಸ್ಸಿನ ಗುಟ್ಟು
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ವತಿಯಿಂದ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಉಪನ್ಯಾಸಕ ಶ್ರೀನಿಧಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ಸುದೃಢ ಮನಸ್ಸು ಅಗತ್ಯ. ಸುದೃಢ ಮನಸ್ಸು ರೂಪುಗೊಳ್ಳಲು ಮಾನಸಿಕ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಮಾನಸಿಕ ಆರೋಗ್ಯವೇ ಯಶಸ್ಸಿನ ಗುಟ್ಟು ಎಂದು ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಉಪನ್ಯಾಸಕ ಶ್ರೀನಿಧಿ ಹೇಳಿದರು. ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ
ವಿದ್ಯಾರ್ಥಿಗಳಲ್ಲಿ ಪ್ರಚಲಿತ ವಿದ್ಯಮಾನಗಳ ಅರಿವು ಅಗತ್ಯ
ಬಿ – ಕ್ವಿಜ್ 2019 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಡಾ. ವಿಘ್ನೇಶ್ವರ ವರ್ಮುಡಿ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಇದ್ದರೆ ಏನನ್ನೂ ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ ಜ್ಞಾನದಾಹ ಕಡಿಮೆಯಾಗುತ್ತಿದೆ. ಜೀವನದಲ್ಲಿ ಸಾಧನೆಯ ಗುರಿ, ಛಲ, ಗುರುವಿನ ಆಶೀರ್ವಾದವಿದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ನಾಲಂದ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು. ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ಬಿ – ಕ್ವಿಜ್ 2019 ರಸಪ್ರಶ್ನೆ ಫೈನಲ್ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ
ಮಾನವಂತೆ ಇತರ ಜೀವಿಗಳಿಗೂ ಭೂಮಿಯಲ್ಲಿ ಬದುಕುವ ಹಕ್ಕಿದೆ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ವಿಶ್ವ ಪ್ರಾಣಿ ಸಂರಕ್ಷಣಾ ದಿನಾಚರಣೆಯಲ್ಲಿ ಉಪನ್ಯಾಸಕಿ ವಿನೀಷಾ ಮಾನವ ಭೂಮಿಯ ಮೇಲಿನ ಇತರ ಜೀವಿಗಳ ಬದುಕುವ ಹಕ್ಕನ್ನು ಕಸಿಯುತ್ತಿದ್ದು, ಮಾನವಂತೆ ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಎಂದು ಮಲಯಾಳಂ ವಿಭಾಗದ ಉಪನ್ಯಾಸಕಿ ವಿನೀಷಾ ಹೇಳಿದರು. ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಜರಗಿದ ವಿಶ್ವ ಪ್ರಾಣಿ ಸಂರಕ್ಷಣಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಇತ್ತೀಚೆಗೆ ಹಲವು ಪ್ರಾಣಿ, ಪಕ್ಷಿಗಳು ವಂಶ ನಾಶ ಭೀತಿಯನ್ನು
ಪಡ್ರೆಯ ಜಲಯೋಧರಿಗೆ ನಾಲಂದ ಕಾಲೇಜು ಎನ್ನೆಸ್ಸೆಸ್ ಸಾಥ್
ನೀರ ನೆಮ್ಮದಿಯತ್ತ ಪಡ್ರೆ| ಪಡ್ರೆಯ ಜಲಯೋಧರಿಗೆ ನಾಲಂದ ಕಾಲೇಜು ಎನ್ನೆಸ್ಸೆಸ್ ಸಾಥ್ ; ಪಡ್ಪು ಗುಡ್ಡದ ತಳಭಾಗದಲ್ಲಿ ಮದಕ ರೀತಿಯ ರಚನೆ; ಗುಡ್ಡದಲ್ಲಿ ಗಿಡ ನೇಡುವ ಚಟುವಟಿಕೆ; ಕಳೆದ ಬೇಸಗೆಯಲ್ಲಿ ಅಭೂತಪೂರ್ವ ಎಂಬಂತೆ ಬತ್ತಿ ಬರಡಾಗಿದ್ದ ಸ್ವರ್ಗ ತೋಡಿನ ಪುನರುದ್ಧಾರ; ತೋಡಿನಲ್ಲಿ ವರ್ಷಪೂರ್ತಿ ನೀರು ಹರಿಸುವ ಕನಸಿನೊಂದಿಗೆ ಬೃಹತ್ ಜಲ ಅಭಿಯಾನಕ್ಕೆ ನಾಂದಿಯಾದ ’ನೀರ ನೆಮ್ಮದಿಯತ್ತ ಪಡ್ರೆ’ ಜಲಯೋಧರ ಜಲ ಚಟುವಟಿಕೆಗಳಿಗೆ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್, ಗ್ರಾಮ ವಿಕಾಸ ಯೋಜನೆ, ಭೂಮಿತ್ರ ಸೇನೆ, ಪಡ್ಪು ಕಾಲೊನಿ
ವಿದ್ಯಾರ್ಥಿಗಳನ್ನು ತಿದ್ದಲು ಶಿಕ್ಷೆಯೊಂದೇ ಮಾರ್ಗವಲ್ಲ
ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ನಾರಾಯಣ ಭಟ್ ಬನಾರಿ ವಿದ್ಯಾರ್ಥಿಗಳು ತಿದ್ದಿ ಸರಿ ದಾರಿಗೆ ತರಲು ಶಿಕ್ಷೆಯೊಂದೇ ಮಾರ್ಗವಲ್ಲ. ಅಧ್ಯಾಪಕ ತನ್ನ ವಿದ್ಯಾರ್ಥಿಗಳನ್ನು ತನ್ನ ಮಕ್ಕಳಿಂದಲೂ ಹೆಚ್ಚು ಪ್ರೀತಿಸಬೇಕು. ತಾನು ಮಾಡುವ ಪುಣ್ಯ ಕಾರ್ಯದಲ್ಲಿ ಸಂಪೂರ್ಣ ತೃಪ್ತಿ, ಪ್ರೀತಿ, ತಾಳ್ಮೆ ಇರಬೇಕು ಎಂದು ನಿವೃತ್ತ ಶಿಕ್ಷಕ ನಾರಾಯಣ ಭಟ್ ಬನಾರಿ ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನು