News & Events
ಕರ್ತವ್ಯಗಳನ್ನು ಪಾಲಿಸಿ, ಹಕ್ಕುಗಳನ್ನು ಕೇಳಿ ಪಡೆಯಿರಿ
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಮಾನವ ಹಕ್ಕು ದಿನಾಚರಣೆಯಲ್ಲಿ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹಕ್ಕು ಹಾಗೂ ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಾತಂತ್ರ್ಯ ಲಭಿಸಿದೆಯೆಂದು ಬೇಕಾಬಿಟ್ಟಿಯಾಗಿ ಏನಾದರೂ ಮಾಡಿಕೊಂಡು ಹೋದಲ್ಲಿ ನಮಗೆ ನಮ್ಮ ಹಕ್ಕುಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಕರ್ತವ್ಯಗಳನ್ನು ಪಾಲಿಸಿದರೆ ಹಕ್ಕುಗಳನ್ನು ಕೇಳಿ ಪಡೆಯುವ ಅಧಿಕಾರ ಪ್ರತಿಯೊಬ್ಬನಿಗೂ ಇರುತ್ತದೆ ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಮಾನವ
ಎನ್ನೆಸ್ಸೆಸ್ ಶಿಬಿರದ ಯಶಸ್ಸಿನ ಹಿಂದಿರುವ ಯೋಜನಾಧಿಕಾರಿಗೆ ಶಿಬಿರಾರ್ಥಿಗಳಿಂದ ಸನ್ಮಾನ
ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಎನ್ನೆಸ್ಸೆಸ್ ಶಿಬಿರದ ಯಶಸ್ಸಿನ ಹಿಂದಿರುವ ವ್ಯಕ್ತಿ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಅವರನ್ನು ಶಿಬಿರಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಶಾಲು ಹೊದಿಸಿ, ಕಾರ್ಯಕ್ರಮದ ಉದ್ಘಾಟಕ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಅಡ್ವ. ಕೆ. ಶ್ರೀಕಾಂತ್ ಸ್ಮರಣಿಕೆ ನೀಡಿ, ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಹಣ್ಣುಹಂಪಲು
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸೂರ್ಯಗ್ರಹಣ ವೀಕ್ಷಣೆ
ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸಂತ ಫಿಲೋಮಿನಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಒದಗಿಸಿದ ಹಾಗೂ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಗ್ರಹಣ ವೀಕ್ಷಕ ಉಪಕರಣಗಳನ್ನು ಬಳಸಿಕೊಂಡು ಶಿಬಿರಾರ್ಥಿಗಳು ಸೂರ್ಯ ಗ್ರಹಣ ವೀಕ್ಷಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಅಗಲ್ಪಾಡಿ ಶಾಲಾ ಅಧ್ಯಾಪಕ ರಾಜಶೇಖರ್, ಕಾಲೇಜಿನ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ
ಯೋಧರಿಗೆ ಗೌರವಾರ್ಪಣೆ
ಪೆರ್ಲ: ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದಲ್ಲಿ ನಿವೃತ್ತ ಸಿಆರ್ ಪಿಎಫ್ ಅಕಾರಿ ಅಪ್ಪಯ್ಯ ಮಣಿಯಾಣಿ ಬಿ., ಬಿಎಸ್ ಎಫ್ ಯೋಧರಾದ ಬಾಲಕೃಷ್ಣ ಬದಿ ಮತ್ತು ರಮೇಶ್ ನಾಯ್ಕ್ ಬಿ.ಅವರನ್ನು ಸನ್ಮಾನಿಸಲಾಯಿತು. ರವೀಶ್ ತಂತ್ರಿ ಕುಂಟಾರು ಶಾಲು ಹೊದಿಸಿ ಗೌರವಿಸಿದರು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಷ್ಣು ನಾವಡ, ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಲ್ಲೀನತೆ, ಪ್ರೇಕ್ಷಕರಲ್ಲಿ ತದಾತ್ಮ್ಯತೆ, ಇಂದ್ರಿಯಾತೀತ ಅನುಭವ
ಪೆರ್ಲ ನಾಲಂದ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ರವೀಶ್ ತಂತ್ರಿ ಕುಂಟಾರು ನಾವು ನಮ್ಮನ್ನು ಯಾವುದೇ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಕ್ರಿಯೆ ಜಾರಿಯಲ್ಲಿದ್ದು ಮನ ತಟಸ್ಥವಾಗಿರುತ್ತದೆ.ಕ್ರೀಡಾಳುಗಳು ಕ್ರೀಡಾ ಚಟುವಟಿಕೆಗಳಲ್ಲಿ ಏಕಾಗ್ರತೆ ಸಾಸಿದರೆ, ವೀಕ್ಷಕರು ಅದೇ ರೀತಿಯ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ.ಆಟಗಾರನ ತಲ್ಲೀನತೆ ವೀಕ್ಷಕರಲ್ಲಿ ಇಂದ್ರಿಯಾತೀತ ಅನುಭವದ ಕಿಡಿ ಹುಟ್ಟಿಸಬಲ್ಲದು ಎಂದು ರವೀಶ ತಂತ್ರಿ ಕುಂಟಾರು ಹೇಳಿದರು. ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ
ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಯುವಜನಾಂಗ ಶ್ರಮಿಸಿ
ಪೆರ್ಲ ನಾಲಂದ ಕಾಲೇಜು ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರತಿಜ್ಞೆ ಭೋಧಿಸಿ ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬನಲ್ಲೂ ಇರಬೇಕಾದ ದೇಶ ಪ್ರೇಮ, ಮಾನವೀಯತೆ, ಏಕತೆಯ ಮೌಲ್ಯಗಳು ನಶಿಸಿ ಹೋಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತವನ್ನು ಏಕೀಕರಿಸುವ ನಿಟ್ಟಿನಲ್ಲಿ ಪಟೇಲ್ ರವರು ಕೈಗೊಂಡ ನಿಸ್ವಾರ್ಥ ಸೇವೆಯನ್ನು ಮನಗಂಡು, ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ಯುವಜನಾಂಗ ಶ್ರಮಿಸಬೇಕು ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹೇಳಿದರು. ಪೆರ್ಲ ನಾಲಂದ
ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಪೆರ್ಲ ಸ್ವರ್ಗ ರಸ್ತೆಯಲ್ಲಿ ಅಪಾಯ ಆಹ್ವಾನಿಸುತ್ತಿದ್ದ ತೋಟಗಾರಿಕೆ ನಿಗಮದ ಕಳೆ ನಾಶಕ ಬಳ್ಳಿ ತೆರವು
ಕಾಸರಗೋಡು ಪುತ್ತೂರು ಅಂತಾರಾಜ್ಯ ಸಂಪರ್ಕಿಸುವ ಪೆರ್ಲ ಸ್ವರ್ಗ ಪಾಣಾಜೆ ರಸ್ತೆಯ ಕೋಟೆ, ಸೈಪಂಗಲ್ಲು, ಅರಳಿಕಟ್ಟೆ, ಗಾಳಿಗೋಪುರ ನಡುವೆ ದಟ್ಟವಾಗಿ ಬೆಳೆದು ನಿಂತಿದ್ದ ತೋಟಗಾರಿಕಾ ನಿಗಮದ ರಬ್ಬರ್ ತೋಟದ ಕಳೆ ನಾಶಕ ಬಳ್ಳಿಗಳನ್ನು ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಭಾನುವಾರ ತೆರವು ಗೊಳಿಸಿದರು. ಅಗಲ ತೀರಾ ಕಿರಿದಾದ ಈ ರಸ್ತೆಯಲ್ಲಿ ಅಂಗನವಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ಥಳೀಯರು ನಡೆದಾಡುತ್ತಿದ್ದು ಕೋಟೆಯಿಂದ ಗಾಳಿಗೋಪುರ ನಡುವಿನ ಸುಮಾರು ೨ ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದು ನಿಂತ ಹಸಿರು ಬಳ್ಳಿಗಳು ವಿದ್ಯುತ್ ಕಂಬಗಳನ್ನು
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದ ಪೂರ್ವಭಾವಿ ಸಭೆ
ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿಸೆಂಬರ್ 21 ರಿಂದ 27 ರ ವರೆಗೆ ನಡೆಯಲಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತ ದಿನ ಶಿಬಿರದ ಪೂರ್ವಭಾವಿ ಸಭೆಯು ಶನಿವಾರ ಜರಗಿತು. ಅಗಲ್ಪಾಡಿ ಶಾಲಾ ಪ್ರಾಂಶುಪಾಲ ಸತೀಶ್ ವೈ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಪ್ತದಿನ ಶಿಬಿರದ ಯಶಸ್ಸಿಗಾಗಿ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಅಗಲ್ಪಾಡಿ ಶಾಲಾ ಮುಖ್ಯ ಶಿಕ್ಷಕ ಗಿರೀಶ್ ಭಟ್, ವಾರ್ಡ್ ಸದಸ್ಯೆ ಶಾಂತ ಎಸ್.
ಜನ ಪರ ಕಾಳಜಿಯ ಶ್ರಮದಾನದಿಂದ ಜನರಲ್ಲಿ ಜಾಗೃತಿ
ಪೆರ್ಲ: ವಿದ್ಯಾರ್ಥಿಯನ್ನು ಪರಿವರ್ತನೆಯ ದಾರಿಯಲ್ಲಿ ಕೊಂಡೊಯ್ಯುವ ಸೇವಾ ಯೋಜನೆ ಶಿಬಿರಗಳು ಅವರ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರವಹಿಸುವುದು. ಸಮಾಜದಲ್ಲಿ ಗೌರವಯುತ ಸ್ಥಾನ ದೊರೆಯುವಂತೆ ಹಾಗೂ ಉತ್ತಮ ಬಾಳ್ವೆ ನಡೆಸಲು ಸಹಕಾರಿ ಎಂದು ಸಿಬಿಐ ಬೆಂಗಳೂರು ಪಬ್ಲಿಕ್ ಪ್ರಾಸಿಕ್ಯೂಟರ್ ಶಿವಾನಂದ ಪೆರ್ಲ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ, ಗ್ರಾಮ ವಿಕಾಸ ಸಮಿತಿ ಸೇವಾ ಯೋಜನೆ ಭಾಗವಾಗಿ ನಾಲಂದ ಚಾರಿಟೇಬಲ್ ಟ್ರಸ್ಟಿ, ವಿವೇಕಾನಂದ ಶಿಶುಮಂದಿರ ಸಮಿತಿ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ
ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸದಸ್ಯರು ಪೆರ್ಲ ವಿವೇಕಾನಂದ ಶಿಶುಮಂದಿರದ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ ಆಚರಿಸಿದರು. ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಕಾರ್ಯದರ್ಶಿಗಳಾದ ಜಗತ್, ಅಭಿಲಾಶ್, ಅಜಿತ್, ಅಂಜನಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.