News & Events
ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಲಿ
ಅಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಶಾಂತ ಎಸ್. ಭಟ್ ವಿದ್ಯಾರ್ಥಿಗಳು ಪುಸ್ತಕ ಜ್ಞಾನಕ್ಕೆ ಸೀಮಿತಗೊಳ್ಳದೆ, ಸುತ್ತು ಮುತ್ತಲಿನ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಾರ್ಡು ಸದಸ್ಯೆ, ಶಿಬಿರದ ಸಂಯೋಜಕ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್ ಹೇಳಿದರು. ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸ್ವಚ್ಛತೆಯ ಕಾರ್ಯ ಹಮ್ಮಿಕೊಳ್ಳುವ ಮುಖಾಂತರ ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವವನ್ನು ಸಾರಿ ಹೇಳಿದ್ದಾರೆ. ಇದೇ ರೀತಿ ಸ್ವಚ್ಛ ಮಾಡುತ್ತಿರಲು ಬೇರೆ ಯಾರಾದರೂ ಬರಬೇಕೆಂದಿಲ್ಲ,
ಎನ್ನೆಸ್ಸೆಸ್ ಶಿಬಿರಗಳಿಂದ ಜೀವನದ ನೈಜ ಪಾಠ
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಜಿಲ್ಲಾ ಪಂ. ಸದಸ್ಯ ಅಡ್ವ. ಕೆ. ಶ್ರೀಕಾಂತ್ ಇದ್ದುದರಲ್ಲಿ ತೃಪ್ತಿ ಪಡುತ್ತಾ, ಇದ್ದುದನ್ನು ಹಂಚಿ ತಿನ್ನುವ, ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಪರಿಶ್ರಮದ ಜೀವನದ ಮಹತ್ವ ತಿಳಿಯಪಡಿಸುವ, ಹೊಸ ಹೊಸ ಅರಿವನ್ನು ಪಡೆಯುತ್ತಾ, ಸೇವಾ ಮನೋಭಾವ ಬೆಳೆಸುತ್ತಾ, ಜಾತಿ ಮತ ಭೇಧವಿಲ್ಲದೆ ಒಂದೇ ಕುಟುಂಬದ ಸದಸ್ಯರಂತೆ ಬಾಳಿ ಬದುಕಲು ಕಲಿಸುವ ಎನ್ನೆಸ್ಸೆಸ್ ಶಿಬಿರಗಳಿಂದ ಜೀವನದ ನೈಜ ಪಾಠ ಲಭ್ಯವಾಗುತ್ತದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ
ಪ್ರಕೃತಿ ಶೋಷಣೆ ಮುಂದುವರಿದಲ್ಲಿ ಮಾನವನ ಅಸ್ತಿತ್ವ ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ
ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ನಡೆದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆಯ ಅಗತ್ಯತೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಜರಗಿತು. ಸಂಪನ್ಮೂಲ ವ್ಯಕ್ತಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ ಮೊಹಮ್ಮದ್ ಅಲಿ ಮಾತನಾಡಿ, ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದ್ದರೂ, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ ನಮ್ಮ ನಾಡನ್ನು ತತ್ತರಿಸುತ್ತಿದ್ದರೂ, ಉಸಿರಾಡುವ ಶುದ್ಧ ವಾಯುವಿಗೆ ಹಣ ತೆರಬೇಕಾದ ಪರಿಸ್ಥಿತಿ ಎದುರಾದರೂ, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೆ ಅಲೆದಾಡಿದರೂ,
ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವತಿಯಿಂದ ಎನ್ನೆಸ್ಸೆಸ್ ಯೋಜನಾಧಿಕಾರಿಗೆ ಸನ್ಮಾನ
ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಪ್ತ ದಿನ ಶಿಬಿರದ ಯಶಸ್ಸಿಗೆ ಹಗಳಿರುಲ್ಲೆನ್ನದೆ ಶ್ರಮಿಸಿದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಯೋಜನಾಧಿಕಾರಿ ಸುರೇಶ್ ಕೆ. ಎಂ. ಅವರನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಾರಂಪಾಡಿ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ನಾರಂಪಾಡಿ ಘಟಕದ ಕಾರ್ಯದರ್ಶಿ ಶ್ರೀಧರ್ ಪದ್ಮಾರ್ ಶಾಲು ಹೊದಿಸಿ ಅಭಿನಂದಿಸಿದರು. ಕೆವಿವಿಇಎಸ್ ನ ಜತೆ ಕಾರ್ಯದರ್ಶಿ ಗೋಪಾಲ ಕೃಷ್ಣ ಉಪ್ಪಂಗಳ ಹಣ್ಣು ಹಂಪಲು ನೀಡಿ
ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ
ಅಗಲ್ಪಾಡಿ ಶಾಲೆಯಲ್ಲಿ ನಡೆಯರುವ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರ ಉದ್ಘಾಟಿಸಿ ಕುಂಬ್ದಾಜೆ ಗ್ರಾ. ಪಂ. ಅಧ್ಯಕ್ಷೆ ಫಾತಿಮತ್ ಝುಹರ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ, ಪರಿಶ್ರಮದ ಜೀವನ, ಜೀವನ ಮೌಲ್ಯಗಳ ಅರಿವು ನೀಡುವ ಎನ್ನೆಸ್ಸೆಸ್ನ ಶಿಬಿರಗಳು ವಿದ್ಯಾರ್ಥಿಗಳ ಸಾರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಕುಂಬ್ದಾಜೆ ಗ್ರಾ. ಪಂ. ಅಧ್ಯಕ್ಷೆ ಫಾತಿಮತ್ ಝುಹರ ಹೇಳಿದರು. ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರವನ್ನು ಔಪಚಾರಿಕವಾಗಿ ಉದ್ಘಾಟಿಸಿ
ಕರ್ತವ್ಯಗಳನ್ನು ಪಾಲಿಸಿ, ಹಕ್ಕುಗಳನ್ನು ಕೇಳಿ ಪಡೆಯಿರಿ
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಮಾನವ ಹಕ್ಕು ದಿನಾಚರಣೆಯಲ್ಲಿ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹಕ್ಕು ಹಾಗೂ ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ವಾತಂತ್ರ್ಯ ಲಭಿಸಿದೆಯೆಂದು ಬೇಕಾಬಿಟ್ಟಿಯಾಗಿ ಏನಾದರೂ ಮಾಡಿಕೊಂಡು ಹೋದಲ್ಲಿ ನಮಗೆ ನಮ್ಮ ಹಕ್ಕುಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಕರ್ತವ್ಯಗಳನ್ನು ಪಾಲಿಸಿದರೆ ಹಕ್ಕುಗಳನ್ನು ಕೇಳಿ ಪಡೆಯುವ ಅಧಿಕಾರ ಪ್ರತಿಯೊಬ್ಬನಿಗೂ ಇರುತ್ತದೆ ಎಂದು ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಮಾನವ
ಎನ್ನೆಸ್ಸೆಸ್ ಶಿಬಿರದ ಯಶಸ್ಸಿನ ಹಿಂದಿರುವ ಯೋಜನಾಧಿಕಾರಿಗೆ ಶಿಬಿರಾರ್ಥಿಗಳಿಂದ ಸನ್ಮಾನ
ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಎನ್ನೆಸ್ಸೆಸ್ ಶಿಬಿರದ ಯಶಸ್ಸಿನ ಹಿಂದಿರುವ ವ್ಯಕ್ತಿ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಅವರನ್ನು ಶಿಬಿರಾರ್ಥಿಗಳ ವತಿಯಿಂದ ಸನ್ಮಾನಿಸಲಾಯಿತು. ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಶಾಲು ಹೊದಿಸಿ, ಕಾರ್ಯಕ್ರಮದ ಉದ್ಘಾಟಕ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಅಡ್ವ. ಕೆ. ಶ್ರೀಕಾಂತ್ ಸ್ಮರಣಿಕೆ ನೀಡಿ, ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಹಣ್ಣುಹಂಪಲು
ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸೂರ್ಯಗ್ರಹಣ ವೀಕ್ಷಣೆ
ಬದಿಯಡ್ಕ: ಅಗಲ್ಪಾಡಿ ಶಾಲೆಯಲ್ಲಿ ನಡೆಯುತ್ತಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರದಲ್ಲಿ ಸಂತ ಫಿಲೋಮಿನಾ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಒದಗಿಸಿದ ಹಾಗೂ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ಗ್ರಹಣ ವೀಕ್ಷಕ ಉಪಕರಣಗಳನ್ನು ಬಳಸಿಕೊಂಡು ಶಿಬಿರಾರ್ಥಿಗಳು ಸೂರ್ಯ ಗ್ರಹಣ ವೀಕ್ಷಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಅಗಲ್ಪಾಡಿ ಶಾಲಾ ಅಧ್ಯಾಪಕ ರಾಜಶೇಖರ್, ಕಾಲೇಜಿನ ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ, ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ
ಯೋಧರಿಗೆ ಗೌರವಾರ್ಪಣೆ
ಪೆರ್ಲ: ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದಲ್ಲಿ ನಿವೃತ್ತ ಸಿಆರ್ ಪಿಎಫ್ ಅಕಾರಿ ಅಪ್ಪಯ್ಯ ಮಣಿಯಾಣಿ ಬಿ., ಬಿಎಸ್ ಎಫ್ ಯೋಧರಾದ ಬಾಲಕೃಷ್ಣ ಬದಿ ಮತ್ತು ರಮೇಶ್ ನಾಯ್ಕ್ ಬಿ.ಅವರನ್ನು ಸನ್ಮಾನಿಸಲಾಯಿತು. ರವೀಶ್ ತಂತ್ರಿ ಕುಂಟಾರು ಶಾಲು ಹೊದಿಸಿ ಗೌರವಿಸಿದರು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವಿಷ್ಣು ನಾವಡ, ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ಕ್ಷೇತ್ರದ
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಲ್ಲೀನತೆ, ಪ್ರೇಕ್ಷಕರಲ್ಲಿ ತದಾತ್ಮ್ಯತೆ, ಇಂದ್ರಿಯಾತೀತ ಅನುಭವ
ಪೆರ್ಲ ನಾಲಂದ ಕಾಲೇಜು ಕ್ರೀಡಾಂಗಣ ಉದ್ಘಾಟನೆ, ಯೋಧರಿಗೆ ಗೌರವಾರ್ಪಣೆ, ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ರವೀಶ್ ತಂತ್ರಿ ಕುಂಟಾರು ನಾವು ನಮ್ಮನ್ನು ಯಾವುದೇ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಕ್ರಿಯೆ ಜಾರಿಯಲ್ಲಿದ್ದು ಮನ ತಟಸ್ಥವಾಗಿರುತ್ತದೆ.ಕ್ರೀಡಾಳುಗಳು ಕ್ರೀಡಾ ಚಟುವಟಿಕೆಗಳಲ್ಲಿ ಏಕಾಗ್ರತೆ ಸಾಸಿದರೆ, ವೀಕ್ಷಕರು ಅದೇ ರೀತಿಯ ತಾದಾತ್ಮ್ಯತೆಯನ್ನು ಅನುಭವಿಸುತ್ತಿರುತ್ತಾರೆ.ಆಟಗಾರನ ತಲ್ಲೀನತೆ ವೀಕ್ಷಕರಲ್ಲಿ ಇಂದ್ರಿಯಾತೀತ ಅನುಭವದ ಕಿಡಿ ಹುಟ್ಟಿಸಬಲ್ಲದು ಎಂದು ರವೀಶ ತಂತ್ರಿ ಕುಂಟಾರು ಹೇಳಿದರು. ಪೆರ್ಲ ನಾಲಂದ ಕಾಲೇಜು ಮತ್ತು ಶಿವಾಜಿ ಫ್ರೆಂಡ್ಸ್ ಪೆರ್ಲ ನೇತೃತ್ವದಲ್ಲಿ