News & Events
ಪೆರ್ಲ ಬೃಹತ್ ಕೃಷಿ ಮೇಳದಲ್ಲಿ ಅಧ್ಯಕ್ಷತೆಯಲ್ಲಿ ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ ವಿಚಾರ ಗೋಷ್ಠಿ
ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ಲೇಖಕಿ ಕೃಷ್ಣವೇಣಿ ಕಿದೂರು ಅಧ್ಯಕ್ಷತೆಯಲ್ಲಿ ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಖ್ಯಾತ ಲೇಖಕಿ ಸವಿತಾ ಭಟ್ ಅಡ್ವಾಯಿ ಮಾತನಾಡಿ, ಭಾರತ ಕೃಷಿ ಫ್ರಧಾನ ರಾಷ್ಟ್ರವಾಗಿದ್ದು ಕೃಷಿಯ ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಗಣನೀಯವಾಗಿದೆ. ಮಹಿಳೆಯರು ಕೃಷಿಯಲ್ಲಿ ತನ್ನನ್ನು ತಾನು ತೊಡಗಿಕೊಂಡು ಏಕಬೆಳೆ, ಅಂತರಬೆಳೆ, ಮಿಶ್ರಬೆಳೆ, ಏಕದಳ, ದ್ವಿದಳ ಬೆಳೆಗಳನ್ನು ಬೆಳೆದರೆ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಹಾಗೂ
ಯುವ ಜನಾಂಗವನ್ನು ಸರಿ ದಾರಿಗೆ ತರುವಲ್ಲಿ ವಿವೇಕಾನಂದರ ಆದರ್ಶಗಳು ಪ್ರೇರಕ
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಉಪನ್ಯಾಸಕಿ ಅಮೃತ ದೇಶದ ಬೆನ್ನೆಲುಬಾಗಿ ಇರಬೇಕಾದ ಯುವ ಜನಾಂಗ ಸಾಮಾಜಿಕ ಜಾಲತಾಣಗಳ ಬಳಕೆ, ಮಾದಕ ವಸ್ತುಗಳ ಸೇವನೆ, ದುರ್ಜನರ ಸಹವಾಸ ಮುಂತಾದ ಹಲವಾರು ಕಾರಣಗಳಿಂದಾಗಿ ಯುವಜನಾಂಗ ದಾರಿ ತಪ್ಪುತ್ತಿದ್ದು, ಯುವಕರನ್ನು ಸರಿ ದಾರಿಗೆ ತರುವಲ್ಲಿ ವಿವೇಕಾನಂದರ ಆದರ್ಶಗಳು ಪ್ರೇರಕ ಎಂದು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಅಮೃತ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಅವರು
ಕ್ರಿಯೇಟಿವ್ ಕಾಲೇಜಿನಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ| ನಾಲಂದ ಕಾಲೇಜು ಪ್ರಥಮ
ಪೆರ್ಲ: ಬದಿಯಡ್ಕ ಕ್ರಿಯೇಟಿವ್ ಆರ್ಟ್ಸ್, ಕಾಮರ್ಸ್ ಎಂಡ್ ಸಯನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಹಾಗೂ ಕಾಲೇಜು ಯುನಿಯನ್ ಶನಿವಾರ ಏರ್ಪಡಿಸಿದ್ದ ಹುಡುಗಿಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜಿನ ಹಗ್ಗ ಜಗ್ಗಾಟ ತಂಡ ಪ್ರಥಮ ಬಹುಮಾನ ತನ್ನದಾಗಿಸಿಕೊಂಡಿದೆ. ನಾಲಂದ ಕಾಲೇಜು ವಿದ್ಯಾರ್ಥಿಗಳಾದ ಚೈತ್ರ, ಕವಿತಾ, ಶ್ರದ್ಧಾ, ಮಹಿಮಾ, ಉಷಾಲಕ್ಷ್ಮೀ, ರಶ್ಮಿ, ಸ್ವಾತಿ ಹಗ್ಗ ಜಗ್ಗಾಟದಲ್ಲಿ ಭಾಗವಹಿಸಿದ್ದರು.
ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ| ನಾಲಂದ ಕಾಲೇಜು ವಿದ್ಯಾರ್ಥಿನಿ ಸುಮನನಿಗೆ ಕನ್ನಡ ಕವಿತಾ ರಚನೆಯಲ್ಲಿ ಪ್ರಥಮ
ಪೆರ್ಲ: ಪಯ್ಯನ್ನೂರಿನಲ್ಲಿ ನಡೆಯುತ್ತಿರುವ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಕನ್ನಡ ಕವಿತಾ ರಚನೆ ಸ್ಪರ್ಧೆಯಲ್ಲಿ ನಾಲಂದ ಕಾಲೇಜು ಪ್ರಥಮ ವರ್ಷ ಬಿಕಾಂ ವಿದ್ಯಾರ್ಥಿನಿ ಸುಮನಾ ‘ಎ’ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಏತಡ್ಕ ಸಮೀಪದ ಕುದಿಂಗಿಲದ ವಿಷ್ಣುಮೂರ್ತಿ ಹಾಗೂ ಗೀತಾ ದಂಪತಿಗಳ ಪುತ್ರಿ.
ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಆರ್ಟ್ಸ್ ಡೇ ಸಹಕಾರಿ
ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಆರ್ಟ್ಸ್ ಡೇ ಉದ್ಘಾಟಿಸಿ ಡಾ. ವಿಘ್ನೇಶ್ವರ ವರ್ಮುಡಿ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆಗಳು ಅಡಕವಾಗಿರುತ್ತದೆ. ಆದರೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹದ ಕೊರತೆಯಿಂದಲೋ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗಳ ಅರಿವು ಅವರಿಗೆ ಇರುವುದಿಲ್ಲ. ವಿದ್ಯಾರ್ಥಿಗಳಲ್ಲಿನ ಅಂತಹ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಆರ್ಟ್ಸ್ ಡೇ ಸಹಕಾರಿ ಎಂದು ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಆರ್ಟ್ಸ್ ಡೇ ಉದ್ಘಾಟಿಸಿ ಅವರು ಮಾತನಾಡಿದರು. ಎಳೆ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು
ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಇಂದಿನ ಶಕ್ತಿಗಳು
ಪೆರ್ಲ ನಾಲಂದ ಕಾಲೇಜು ಯೂನಿಯನ್ ಹಾಗೂ ಫೈನ್ ಆರ್ಟ್ಸ್ ಉದ್ಘಾಟನಾ ಸಮಾರಂಭ “ಉದ್ಭವ್ ೨ಕೆ೨೦” ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಮಹತ್ವದ ಜವಾಬ್ದಾರಿ ಹೊತ್ತ ಇಂದಿನ ಶಕ್ತಿಗಳು. ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಗೈಯುತ್ತಿರುವ ಭಾರತವನ್ನು ಜಗತ್ತೇ ಎದುರು ನೋಡುತ್ತಿದ್ದು, ರಾಷ್ಟ್ರವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸಲು ವಿದ್ಯಾರ್ಥಿಗಳು ಇಂದೇ ಕಾರ್ಯಪ್ರವೃತ್ತರಾಗಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು. ಪೆರ್ಲ ನಾಲಂದ ಕಾಲೇಜು ಯೂನಿಯನ್ ಹಾಗೂ ಫೈನ್ ಆರ್ಟ್ಸ್
ನಾಲಂದ ಕಾಲೇಜು ಯಕ್ಷಗಾನ ತಂಡದ ತರಬೇತುದಾರರಿಗೆ ಸನ್ಮಾನ
ಪೆರ್ಲ: ಪೆರ್ಲ ನಾಲಂದ ಕಾಲೇಜು ಯುನಿಯನ್ ಹಾಗೂ ಫೈನ್ ಆರ್ಟ್ಸ್ ಉದ್ಘಾಟನಾ ಸಮಾರಂಭ ’ಉದ್ಭವ್ 2ಕೆ20’ ಕಾರ್ಯಕ್ರಮದಲ್ಲಿ 2018-19 ನೇ ಸಾಲಿನ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದಲ್ಲಿ ಪ್ರಥಮ ಪ್ರಶಸ್ತಿ ವಿಜೇತ ನಾಲಂದ ಕಾಲೇಜು ಯಕ್ಷಗಾನ ತಂಡದ ತರಬೇತುದಾರ ಬಾಲಕೃಷ್ಣ ಉಡ್ಡಂಗಳ ಅವರನ್ನು ಕಾಲೇಜು ಯೂನಿಯನ್ನ ವತಿಯಿಂದ ಸನ್ಮಾನಿಸಲಾಯಿತು.
ವಾರ್ಷಿಕ ಕ್ರೀಡಾಕೂಟದಲ್ಲಿ ನಿವೃತ್ತ ದೈಹಿಕ ಶಿಕ್ಷಕರಿಗೆ ಸನ್ಮಾನ
ಪೆರ್ಲ: ಪೆರ್ಲ ನಾಲಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಕಾಲೇಜು ಮಟ್ಟದ ವಾರ್ಷಿಕ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಣಾಜೆ ಸುಭೋಧ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಪುರಂದರ ಎಂ. ಜಿ. ಯವರನ್ನು ಸನ್ಮಾನಿಸಲಾಯಿತು. ಪ್ರೊ ಕಬ್ಬಡಿ ತರಬೇತುದಾರ ಜಗದೀಶ್ ಕುಂಬಳೆ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಮತ್ತಿತರರು ಉಪಸ್ಥಿತರಿದ್ದರು.
ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವ| ನಾಲಂದ ಕಾಲೇಜು ಯಕ್ಷಗಾನ ತಂಡಕ್ಕೆ ತೃತೀಯ
ಪಯ್ಯನ್ನೂರು ಕಾಲೇಜಿನಲ್ಲಿ ನಡೆದ 2019-20 ನೇ ಸಾಲಿನ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜು ತಂಡ ‘ಎ’ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಗಳಿಸಿದೆ. ಕಾಲೇಜು ತೃತೀಯ ಬಿಕಾಂ ವಿದ್ಯಾರ್ಥಿನಿಗಳಾದ ರೂಪ, ನಿಶಾ, ಅಕ್ಷತಾ, ಬಿ ಎ ವಿದ್ಯಾರ್ಥಿನಿ ಭವ್ಯ, ದ್ವಿತೀಯ ವರ್ಷ ಬಿಕಾಂ ವಿದ್ಯಾರ್ಥಿಗಳಾದ ಅಕ್ಷಯ್, ದೀಕ್ಷಿತ್, ಬಿ ಎ ವಿದ್ಯಾರ್ಥಿನಿ ಅಶ್ವಿನಿ, ಪ್ರಥಮ ವರ್ಷ ಬಿ ಎ ವಿದ್ಯಾರ್ಥಿ ಮನೋಹರ ಪ್ರಸಾದ್, ಬಿ ಎಸ್ ಸಿ ವಿದ್ಯಾರ್ಥಿನಿ ಭವಿಷ್ಯ ಯಕ್ಷಗಾನ
ಟೆಲೆಂಟ್ಸ್ ಹಂಟ್ 2ಕೆ20
ಸೋತರೆ ಕುಗ್ಗಬೇಡಿ, ಗೆದ್ದರೆ ಹಿಗ್ಗಬೇಡಿ ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ’ಟೆಲೆಂಟ್ಸ್ ಹಂಟ್ 2ಕೆ20’ ಸಮಾರೋಪ ಕಾರ್ಯಕ್ರಮದಲ್ಲಿ ಶಶಿಭೂಷಣ ಶಾಸ್ತ್ರಿ ಸೋತವರು ಕುಗ್ಗಬಾರದು, ಗೆದ್ದವರು ಹಿಗ್ಗಬಾರದು. ಸೋತವರು ಮುಂದಿನ ಸ್ಪರ್ಧೆಗಳಿಗೆ ಬೇಕಾದ ತಯಾರಿಯಲ್ಲಿ ತೊಡಗಬೇಕು. ಗೆದ್ದವರು ತಾವು ಬಂದ ದಾರಿಯನ್ನು ಮೆಲುಕು ಹಾಕುತ್ತಾ, ಸೋತವರನ್ನು ಹೀಯಾಳಿಸದೇ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ನಾಲಂದ ಕಾಲೇಜು ಆಡಳಿತ ಮಂಡಳಿಯ ಸದಸ್ಯ ಶಶಿಭೂಷಣ ಶಾಸ್ತ್ರಿ ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ಹೈಯರ್ ಸೆಕೆಂಡರಿ ಹಾಗೂ ಕಾಲೇಜು