News & Events
ಪೆರ್ಲ ಬೃಹತ್ ಕೃಷಿ ಮೇಳದಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ವಿಚಾರ ಗೋಷ್ಠಿ
ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆಯಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿ, ಹಿರಿಯ ವಿಜ್ಞಾನಿ, ವಿಟ್ಲ ಸಿಪಿಸಿಆರ್ ಐ, ಡಾ. ನಾಗರಾಜ್ ಮಾತನಾಡಿ, ಮಣ್ಣಿನ ಪರೀಕ್ಷೆ ನಡೆಸದೇ ಸಿಕ್ಕಬಟ್ಟೆ ಗೊಬ್ಬರವನ್ನು ಸುರಿದು ಯಾವುದೇ ಪ್ರಯೋಜನವಿಲ್ಲ. ಗೊಬ್ಬರದ ಪ್ರಮಾಣ ಕಡಿಮೆಯಾದರೂ ಹೆಚ್ಚಾದರೂ ನಿರೀಕ್ಷಿತ ಫಸಲು ದೊರೆಯದು. ಆದುದರಿಂದ ಮಣ್ಣಿನ ಪರೀಕ್ಷೆ ನಡೆಸಿದ ನಂತರ ಮಾತ್ರವೇ
ವಿದ್ಯಾರ್ಥಿಗಳು ರಾಷ್ಟ್ರವನ್ನು ರೂಪಿಸುವ ಶಕ್ತಿಗಳು
ಪೆರ್ಲ ನಾಲಂದ ಕಾಲೇಜ್ ಯೂನಿಯನ್ ನೇತೃತ್ವದಲ್ಲಿ ನಡೆದ “ಯುವ 2020” ಕಾಲೇಜ್ ಡೇ ಉದ್ಘಾಟಿಸಿ ಗೋಪಾಲ್ ಚೆಟ್ಟಿಯಾರ್ ಭಾರತ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿದ ರಾಷ್ಟ್ರ. ಅದರಲ್ಲೂ ವಿದ್ಯಾರ್ಥಿಗಳು ನಮ್ಮ ರಾಷ್ಟ್ರವನ್ನು ರೂಪಿಸುವ ಶಕ್ತಿಗಳು. ವಿದ್ಯಾರ್ಥಿ ಸಮೂಹ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಿದಾಗ ರಾಷ್ಟ್ರ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುತ್ತದೆ ಎಂದು ನಾಲಂದ ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಗೋಪಾಲ ಚೆಟ್ಟಿಯಾರ್ ಹೇಳಿದರು. ಇತರ ಜೀವಿಗಳಿಂದ ವಿಭಿನ್ನನಾದ ಮಾನವ, ಪ್ರಾಣಿಗಳಿಂದಲೂ ಹೆಚ್ಚು ಜ್ಞಾನವನ್ನು ಹೊಂದಿಕೊಂಡು ಹುಟ್ಟು ಮತ್ತು ಸಾವಿನ
ಉಚಿತ ಆರೋಗ್ಯ ತಪಾಸಣೆ
ಪೆರ್ಲ: ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ನಡೆದ ಜೀವನ ಶೈಲಿ ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಯಿತು.
ಪೆರ್ಲ ನಾಲಂದ ಕಾಲೇಜಿನಲ್ಲಿ ಆರೋಗ್ಯ ಜಾಗೃತಿ ತರಗತಿ
ಪೆರ್ಲ: ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ನಡೆದ ಜೀವನ ಶೈಲಿ ರೋಗ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ನಡೆದ ಸೆಮಿನಾರ್ ನಲ್ಲಿ ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಾರಾಜ್ ಆರೋಗ್ಯ ಜಾಗೃತಿ ಪ್ರತಿಜ್ಞೆ ಬೋಧಿಸಿ, ಜೀವನ ಶೈಲಿ ರೋಗಗಳು ಹಾಗೂ ಅವುಗಳು ಬರದಂತೆ ತಡೆಗಟ್ಟಲ್ಲಿರುವ ಮಾರ್ಗಗಳ ಬಗ್ಗೆ ತರಗತಿ ನಡೆಸಿದರು.
ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ
ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸಕಿ ವಿನೀಷಾ ಇಂದಿನ ಆಧುನಿಕ ಯುಗದಲ್ಲಿ ಕೆಲವೆಡೆಗಳಲ್ಲಿ ಮಹಿಳೆ ಶೋಷಣೆಯ ವಸ್ತುವಾಗಿ ಬಳಸಿಕೊಳ್ಳಲಾಗುತ್ತಿದ್ದು, ದಿನೇ ದಿನೇ ಸ್ತ್ರೀಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸ್ತ್ರೀಯರ ರಕ್ಷಣೆಯ ದೃಷ್ಟಿಯಿಂದ ಇವೆಲ್ಲವೂ ತೀವ್ರ ಆಂತಂಕಕಾರಿ ಬೆಳವಣಿಗೆ. ಆದುದರಿಂದ ಪ್ರತಿಯೊಬ್ಬ ಮಹಿಳೆಯೂ ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕಿದೆ, ಶೋಷಣೆಯ ವಿರುದ್ಧ ಒಗ್ಗೂಡಿ ಧ್ವನಿ ಎತ್ತಬೇಕಿದೆ ಎಂದು ಮಲಯಾಳಂ ಉಪನ್ಯಾಸಕಿ ವಿನೀಷಾ ಹೇಳಿದರು. ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್
’ಮಕ್ಕಳ ವ್ಯಕ್ತಿತ್ವ ರೂಪಿಸುವ, ಅವರಲ್ಲಿ ರಾಷ್ಟ್ರಭಕ್ತಿ ಜಾಗೃತಗೊಳಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದು’
ಪೆರ್ಲ ನಾಲಂದ ಕಾಲೇಜಿನಲ್ಲಿ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಕೊಂಡೆವೂರು ಸ್ವಾಮೀಜಿ ಮೀನುಗಳು ನಿತ್ಯ ನಿರಂತರ ತಟಾಕದಲ್ಲಿ ಸಂಚರಿಸಿ ನೀರಿನ ಕಷ್ಮಲಗಳನ್ನು ನಿವಾರಿಸಿ ತಮ್ಮ ಜೀವನಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವಂತೆ ನಮ್ಮ ಉಳಿವು ಹಾಗೂ ಸುರಕ್ಷಿತ ಬದುಕಿಗೆ ಪೂರಕವಾಗಿ ದೇಶ ಕಟ್ಟುವ ಕಾಯಕದಲ್ಲಿ ಪ್ರತಿಯೊಬ್ಬರೂ ತೊಡಗಬೇಕು ಎಂದು ಕೊಂಡೆವೂರು ಶ್ರೀಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಪೆರ್ಲ ನಾಲಂದ ಕಾಲೇಜಿನಲ್ಲಿ ಶನಿವಾರ ನಡೆದ ’ಶಿಕ್ಷಣ ದೃಷ್ಟಿ ಮತ್ತು ದಿಕ್ಕು’ ಶೈಕ್ಷಣಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ
ಕೃಷಿ ಯಂತ್ರೋಪಕರಣಗಳ ಹೊಸ ಆವಿಷ್ಕಾರ, ನೂತನ ಪ್ರಯತ್ನಗಳು ನಡೆದಲ್ಲಿ ಕೃಷಿಕರ ಬೆಳವಣಿಗೆ
ಪೆರ್ಲ ನಾಲಂದ ಕಾಲೇಜು ಆವರಣದಲ್ಲಿ ನಡೆದ ’ಕೃಷಿ ಮೇಳ’ದ ಸಮಾರೋಪ ಭಾಷಣದಲ್ಲಿ ನಬಾರ್ಡ್ ಎ.ಜಿ.ಎಂ. ಜ್ಯೋತಿಷ್ ಜಗನ್ನಾಥ್ ಕೃಷಿ ಪರಂಪರೆಯಲ್ಲಿ ಹುಟ್ಟಿ ಬೆಳೆದವರಿಗೆ ಕೃಷಿಯ ಆಸಕ್ತಿ ಕಡಿಮೆಯಾಗುತ್ತಿದೆ. ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪೇಟೆ ಪಟ್ಟಣ ಸೇರುತ್ತಿರುವುದು ಕಂಡು ಬರುತ್ತಿದೆ. ಪರಂಪರಾಗತ ಕೃಷಿ ರೀತಿ, ಸಾವಯವ ಕೃಷಿ ನೀತಿಯನ್ನು ಪ್ರೋತ್ಸಾಹಿಸುವ ಕೃಷಿ ಮೇಳಗಳು ಅಲ್ಲಲ್ಲಿ ನಡೆಯಬೇಕು. ಕೃಷಿಕರ ಶ್ರಮವನ್ನು ಸರಳಗೊಳಿಸುವ ಯಂತ್ರೋಪಕರಣಗಳ ಅರಿವು, ಪ್ರಾತ್ಯಕ್ಷಿಕೆ ಗ್ರಾಮೀಣ ಕೃಷಿಕರಿಗೆ ಲಭಿಸಬೇಕು ಎಂದು ನಬಾರ್ಡ್ ಎ.ಜಿ.ಎಂ. ಜ್ಯೋತಿಷ್ ಜಗನ್ನಾಥ್ ಹೇಳಿದರು.
ಪೆರ್ಲದ ಮಣ್ಣಿನಲ್ಲಿ ಚಿಗುರೊಡೆದ ಬೃಹತ್ ಕೃಷಿ ಮೇಳ !
ಕೃಷಿಕರ ಶ್ರಮ ಸರಳಗೊಳಿಸುವ ಯಂತ್ರೋಪಕರಣ ಪ್ರಾತ್ಯಕ್ಷಿಕೆ, ಸಾವಯವ ಕೃಷಿ ಪದ್ಧತಿ ವಿಚಾರಗೋಷ್ಠಿ ಆಧುನಿಕ ಕೃಷಿ ಪದ್ಧತಿಯಲ್ಲಿ ಯಂತ್ರೋಪಕರಣಗಳ ಬಳಕೆ ಮೂಲಕ ಕೃಷಿಕರ ಶ್ರಮ ಸರಳಗೊಳಿಸುವ, ಕಾರ್ಮಿಕರ ಅಭಾವ ನೀಗಿಸುವ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೆರ್ಲದ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ನಡೆದ ಬೃಹತ್ ಕೃಷಿ ಮೇಳ ಹಳ್ಳಿಯ ಕೃಷಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ
ಶಿಕ್ಷಣ, ಕೃಷಿ, ಸಹಕಾರಿ ಕ್ಷೇತ್ರಗಳು ಒಗ್ಗಟ್ಟಾಗಿ ಕೆಲಸ ಮಾಡಿದಲ್ಲಿ ನಾಡಿನ ಅಭಿವೃದ್ಧಿ
ಪೆರ್ಲ ನಾಲಂದ ಕಾಲೇಜಿನಲ್ಲಿ ಕೃಷಿ ಮೇಳ ಸಮಾರಂಭ ಉದ್ಘಾಟಿಸಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಕೃಷಿ ಸಂಸ್ಕೃತಿ, ಋಷಿ ಸಂಸ್ಕೃತಿಗಳು ಒಟ್ಟಾಗಿ ಖುಷಿ ಸಂಸ್ಕೃತಿ ಇರುವುದು ಭಾರತದಲ್ಲಿ ಮಾತ್ರ.ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಕೃಷಿ ಜನರ ಅಸ್ತಿತ್ವವನ್ನು ನಿರ್ಣಯಿಸುವ ಮೂಲ ಎಂದು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್.ಹೇಳಿದರು. ಪೆರ್ಲ ನಾಲಂದ ಕಾಲೇಜು, ಕ್ಯಾಂಪ್ಕೋ ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದಲ್ಲಿ ನಾಲಂದ ಕಾಲೇಜು ಪರಿಸರದಲ್ಲಿ ನಡೆದ ’ಬೃಹತ್ ಕೃಷಿ ಮೇಳ’ವನ್ನು ತೆಂಗಿನ ಹಿಂಗಾರ
ಪೆರ್ಲ ಕೃಷಿ ಮೇಳದಲ್ಲಿ ಸಾವಯವ ಕೃಷಿ ಪದ್ಧತಿ ವಿಚಾರ ಗೋಷ್ಠಿ
ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ’ಸುಭಿಕ್ಷಾ’ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ ಸಂಘ(ನಿ) ತೀರ್ಥಹಳ್ಳಿ ಇದರ ನಿರ್ದೇಶಕಿ ಸವಿತಾ ಬಾಳಿಕೆ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ಪದ್ಧತಿ ಎಂಬ ವಿಷಯದ ಕುರಿತಾದ ವಿಚಾರಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿ ಎ.ಪಿ. ಸದಾಶಿವ ಮರೀಕೆ ಪುತ್ತೂರು ಮಾತನಾಡಿ, ಸಾವಯವ ಕೃಷಿಯು ಇಂದಿನ ಅನಿವಾರ್ಯತೆಯಾಗಿದ್ದು, ಪ್ರತಿಯೊಬ್ಬನ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪ್ರತಿಯೊಬ್ಬ ರೈತರು ಸಾವಯವ ಕಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರದ