ಕಣ್ಣೂರು ವಿಶ್ವ ವಿದ್ಯಾನಿಲಯ ಮಟ್ಟದ ಚೆಸ್ ಕಾಂಪಿಟೀಶನ್ನಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿ ಡಿಸಂಬರ್ 17 ರಂದು ನಡೆಯಲಿರುವ ಸೌತ್ ಝೊನಲ್ ಲೆವೆಲ್ ಚೆಸ್ ಕಾಂಪಿಟೀಶನ್ಗೆ ಪ್ರಥಮ ಬಿ. ಎಸ್ಸಿ ವಿದ್ಯಾರ್ಥಿನಿ ಕು. ಗಾನ ಸಮೃದ್ಧಿ ಇವರನ್ನು ಕಾಲೇಜು ಪ್ರಾಂಶುಪಾಲರು ಡಾ. ಕಿಶೋರ್ ಕುಮಾರ್ ರೈ ಶೇಣಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಸ್ಟಾಫ್ ಸೆಕ್ರಟರಿ ಶ್ರೀ ಶಂಕರ ಸ್ವಾಗತಿಸಿದರು. ಸ್ಟುಡೆಂಟ್ ವೆಲ್ಫೇರ್ ಆಫೀಸರ್ ಶ್ರೀ ಕೇಶವ ಶರ್ಮ ಧನ್ಯವಾದ ಸಮರ್ಪಿಸಿದರು. ಕಾಮರ್ಸ್ ವಿಭಾಗದ ಮುಖ್ಯಸ್ಥ ಶ್ರೀನಿಧಿ ನಿರೂಪಿಸಿದರು.