ಗ್ರಾಮವಿಕಾಸ ಯೋಜನೆ’ ನಾಲಂದಾ ಮಹಾವಿದ್ಯಾಲಯ, ಪೆರ್ಲ ಇದರ ಆಶ್ರಯದಲ್ಲಿ ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ನಡೆದ ಎರಡು ದಿನಗಳ ‘ಫ್ಯಾಶನ್ ಡಿಸೈನಿಂಗ್’ ಶಿಬಿರವು ನಡೆಯಿತು. ಸಮಾರಂಭದಲ್ಲಿ ಸಭಾಧ್ಯಕ್ಷ ನಾಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶೇಣಿ ಮಾತನಾಡಿ ಗ್ರಾಮವಿಕಾಸ ಯೋಜನೆಯ ಮುಖಾಂತರ ಗ್ರಾಮಸ್ಥರಿಗೆ ಸಹಕಾರಿಯಾಗುವ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದೆ. ಗ್ರಾಮಸ್ಥರು ಆಸಕ್ತರಾದಲ್ಲಿ ಇಂತಹಾ ಶಿಬಿರಗಳನ್ನು ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ. ಎಲ್ಲರೂ ಈ ರೀತಿಯ ಶಿಬಿರಗಳ ಸದುಪಯೋಗವನ್ನು ಪಡೆಯಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಪ್ರಭಾವತಿ ಅವರು ಮಾತನಾಡಿ ಓರ್ವ ಮಹಿಳೆ ವಿದ್ಯೆಯನ್ನು ಪಡೆಯುವುದರಿಂದ ಒಂದು ಕುಟುಂಬವನ್ನು ಬೆಳಗಬಹುದಾಗಿದೆ. ಮಹಿಳೆಯರು ಇಂತಹ ಶಿಬಿರಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದರು. ಗ್ರಾಮವಿಕಾಸ ಯೋಜನೆಯ ಸಂಚಾಲಕ ಶ್ರೀಯುತ ವೇಣುಗೋಪಾಲ ಸಾಲೆತ್ತಡ್ಕ ಅವರು ಮಾತನಾಡಿ, ಜೀವನದಲ್ಲಿ ಹೊಸತನವನ್ನು ಅಳವಡಿಸಿಕೊಳ್ಳುತ್ತಿರುವಂತಹ ಈ ಕಾಲಘಟ್ಟದಲ್ಲಿ ಇಂತಹ ಕೌಶಲ್ಯಕ್ಕೆ ಸಾಕಷ್ಟು ಬೇಡಿಕೆಯಿದೆ. ನಮ್ಮ ಯೋಜನೆಯಂತೆ ಈ ಶಿಬಿರವು ಯಶಸ್ವಿಯಾಗಿರುವುದು ಸಂತೋಷ ತಂದಿದೆ ಎಂದರು. ಶಿಬಿರದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ವಿದ್ಯಾ ಎಡಮಲೆ ಅವರು ಇಂತಹ ಶಿಬಿರದ ಮೂಲಕ ತಮಗೆ ತಿಳಿದಿರುವ ವಿದ್ಯೆಯನ್ನು ಇತರರಿಗೆ ಹೇಳಿಕೊಡುವುದರಿಂದಾಗಿ ತುಂಬಾ ಸಂತೋಷವಾಗಿದೆ ಎಂದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಗ್ರಾಮವಿಕಾಸ ಸಮಿತಿಯ ಪಾಲಕ್ ಶ್ರೀಮತಿ ಶ್ಯಾಮಲಾ ಪತ್ತಡ್ಕ ಪ್ರಾರ್ಥಿಸಿದರು. ಮಾಹಿಳಾ ಕಾರ್ಯ ಪ್ರಮುಖ್ ಶ್ರೀಮತಿ ನಳಿನಿ ಸೈಪಂಗಲ್ಲು ಸ್ವಾಗತಿಸಿ ನಿರೂಪಿಸಿದರು. ಕೋಮರ್ಸ್ ವಿಭಾಗದ ಮುಖ್ಯಸ್ಥ ಶ್ರೀನಿಧಿ ಕೊಲ್ಲೆಂಕಾನ ವಂದಿಸಿದರು