×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ನಾಲಂದ ಕಾಲೇಜಿನಲ್ಲಿ ವಿಶ್ವ ಓಝೋನ್ ದಿನಾಚರಣೆ‌

ಸೂರ್ಯನ ಕಿರಣಗಳು ಬೆಳಕು, ಶಾಖದ ಜತೆಗೆ
ವಿಕಿರಣವನ್ನೂ ಒಳಗೊಂಡಿರುತ್ತವೆ.ಅತಿ ನೇರಳೆ
ಕಿರಣವು ಚರ್ಮದ ಕ್ಯಾನ್ಸರ್, ಕಣ್ಣಿನ ಪೊರೆಗೆ ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಕೊಡೆ ನಮ್ಮನ್ನು ಮಳೆಯಿಂದ ರಕ್ಷಿಸುವ
ಹಾಗೆ, ಓಝೋನ್ ಪದರವು ಅಗೋಚರ ಗುರಾಣಿಯಾಗಿ ಕಾರ್ಯನಿರ್ವಹಿಸಿ, ಸೂರ್ಯನಿಂದ ಬರುವ ಅತಿನೇರಳೆ ಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಪೆರ್ಲ ನಾಲಂದ ಕಾಲೆೇಜು ಭೂವಿಜ್ಞಾನ ಉಪನ್ಯಾಸಕಿ ಸುಚಿತ್ರ ತಿಳಿಸಿದರು.ಕಾಲೆೇಜು ಎನ್ನೆಸ್ಸೆಸ್ ನೇತೃತ್ವದಲ್ಲಿ ನಡೆದ ಓಝೇನ್ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು.

ಸೂರ್ಯನಿಂದ ನೇರವಾಗಿ ಬರುವ ಅತಿ ನೇರಳೆ ಕಿರಣವು ಚರ್ಮವಿರುವ ಜೀವಿಗಳ ರಕ್ಷಣಾತ್ಮಕ ಪದರಗಳನ್ನು ಭೇದಿಸಬಲ್ಲದು.ಸಸ್ಯಗಳು ಮತ್ತು ಪ್ರಾಣಿಗಳಲ್ಲಿನ ಡಿಎನ್ಎ ಕಣಗಳನ್ನೂ ಹಾನಿಗೊಳಿಸಬಲ್ಲುದು. ಓಝೋನ್ ಪದರವು ಸೂರ್ಯನಿಂದ ಬರುವ ಶೇ.97ರಿಂದ 98ರಷ್ಟು ಅತಿ ನೇರಳೆ ಕಿರಣಗಳನ್ನು ಹೀರಿಕೊಂಡು ಬೆಳಕಿನ ಕಿರಣಗಳನ್ನು ಮಾತ್ರ ಭೂಮಿ ಮೇಲೆ ಬೀಳುವಂತೆ ಮಾಡುವ ಮೂಲಕ ನಮಗೆ ರಕ್ಷಣೆ ನೀಡುತ್ತದೆ.

ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಜಿತ್, ಕಾರ್ಯದರ್ಶಿ ನವೀನ್ ರಾಜ್, ವಿನಾಯಕ, ಶರಣ್ಯ ಉಪಸ್ಥಿತರಿದ್ದರು. ಅಮೃತ ಸ್ವಾಗತಿಸಿದರು.ಯಜ್ಞೇಶ್ ವಂದಿಸಿದರು.‌ ಐಶ್ವರ್ಯ ನಿರೂಪಿಸಿದರು.