×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಪೆರ್ಲ ಬೃಹತ್ ಕೃಷಿ ಮೇಳ: ಉತ್ತಮ ಅಡಿಕೆ ಸುಲಿಯುವ ಯಂತ್ರಕ್ಕೆ ಕ್ಯಾಂಪ್ಕೋ ವತಿಯಿಂದ ನಗದು ಬಹುಮಾನ ವಿತರಣೆ

ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಉತ್ತಮ ಅಡಿಕೆ ಸುಲಿಯುವ ಯಂತ್ರವನ್ನು ನಿರ್ಮಿಸಿದವರಿಗೆ ಕ್ಯಾಂಪ್ಕೋ ಲಿಮಿಟೆಡ್. ಮಂಗಳೂರು ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.

Yantra (2)

Yantra (4)

Yantra (1)

Yantra (3)

ಪುತ್ತೂರು ಪರ್ಲಡ್ಕದ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ನ ನಾರಾಯಣ ನೆಲ್ಲಿತ್ತಾಯ ೧ಲಕ್ಷ ಮೊತ್ತವನ್ನು ಒಳಗೊಂಡ ಪ್ರಥಮ ಬಹುಮಾನ, ಸುಳ್ಯದ ಅಪರ್ಣಾ ಇಂಜಿನಿಯರಿಂಗ್ ವರ್ಕ್ಸ್ನ ರಾಮಚಂದ್ರ ಭಟ್ 50 ಸಾವಿರ ಮೊತ್ತವನ್ನು ಒಳಗೊಂಡ ದ್ವಿತೀಯ ಬಹುಮಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಕ್ಷಯ್ ಹಾಗೂ ಬಳಗಕ್ಕೆ 10 ಸಾವಿರ ಮೊತ್ತವನ್ನು ಒಳಗೊಂಡ ಪ್ರೋತ್ಸಾಹಕ ಬಹುಮಾನವನ್ನು ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ಉಪಾಧ್ಯಕ್ಷ ಶಂ. ನಾ. ಖಂಡಿಗೆ ವಿತರಿಸಲಾಯಿತು.

ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ನಬಾರ್ಡ್ ಎ. ಜಿ. ಎಂ. ಜ್ಯೋತಿಷ್ ಜಗನ್ನಾಥ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್, ಪ್ರಗತಿಪರ ಕೃಷಿಕ ಡಾ. ಚಂದ್ರಶೇಖರ ಚೌಟ ಉಪಸ್ಥಿತರಿದ್ದರು.