×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಪೆರ್ಲ ಬೃಹತ್ ಕೃಷಿ ಮೇಳದಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ವಿಚಾರ ಗೋಷ್ಠಿ

ಪೆರ್ಲ ನಾಲಂದ ಕಾಲೇಜಿನಲ್ಲಿ ನಡೆದ ಬೃಹತ್ ಕೃಷಿ ಮೇಳದ ಅಂಗವಾಗಿ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇದರ ನಿರ್ದೇಶಕ ಸತೀಶ್ಚಂದ್ರ ಭಂಡಾರಿ ಅಧ್ಯಕ್ಷತೆಯಲ್ಲಿ ಅಡಿಕೆ ಕೃಷಿಯಲ್ಲಿ ಆಧುನಿಕತೆ ಎಂಬ ವಿಷಯದ ಕುರಿತಾಗಿ ವಿಚಾರಗೋಷ್ಠಿ ನಡೆಯಿತು.

Adike (2)

Adike (1)

ಸಂಪನ್ಮೂಲ ವ್ಯಕ್ತಿ, ಹಿರಿಯ ವಿಜ್ಞಾನಿ, ವಿಟ್ಲ ಸಿಪಿಸಿಆರ್ ಐ, ಡಾ. ನಾಗರಾಜ್ ಮಾತನಾಡಿ, ಮಣ್ಣಿನ ಪರೀಕ್ಷೆ ನಡೆಸದೇ ಸಿಕ್ಕಬಟ್ಟೆ ಗೊಬ್ಬರವನ್ನು ಸುರಿದು ಯಾವುದೇ ಪ್ರಯೋಜನವಿಲ್ಲ. ಗೊಬ್ಬರದ ಪ್ರಮಾಣ ಕಡಿಮೆಯಾದರೂ ಹೆಚ್ಚಾದರೂ ನಿರೀಕ್ಷಿತ ಫಸಲು ದೊರೆಯದು. ಆದುದರಿಂದ ಮಣ್ಣಿನ ಪರೀಕ್ಷೆ ನಡೆಸಿದ ನಂತರ ಮಾತ್ರವೇ ಬೆಳೆಗಳಿಗೆ ಆವಶ್ಯಕವಾದಂತಹ ಗೊಬ್ಬರವನ್ನು ಕಂಡುಕೊಳ್ಳಬೇಕು. ಗೊಬ್ಬರವನ್ನು ಒಮ್ಮೆಲೇ ನೀಡದೇ, ಎರಡು ವಿಭಾಗವಾಗಿ ಮಾಡಿ ನೀಡುದರಿಂದ ಹೆಚ್ಚು ಫಸಲು ಗಳಿಸಬಹುದು ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ರಾಜಕುಮಾರ್ ಮಾತನಾಡಿ, ಹವಾಮಾನ ವೈಪರೀತ್ಯದಿಂದಾಗಿ ಅಡಿಕೆ ಮುಂತಾದ ಕೃಷಿಗಳಿಗೆ ಕೀಟಗಳ ಹಾವಳಿ ವೃದ್ಧಿಯಾಗುತ್ತದೆ. ದೊರೆಯಬೇಕಿದ್ದ ಉತ್ತಮ ಫಸಲನ್ನು ನಾಶ ಮಾಡುವ ಈ ಕೀಟಗಳಿಗೆ ಎದುರಾಗಿ ಉಪಕಾರಿ ಹುಳಗಳನ್ನು, ಕೀಟಗಳನ್ನು ವೈಜ್ಞಾನಿಕವಾಗಿ ವೃದ್ಧಿಸಿದಲ್ಲಿ ಉತ್ತಮ ಫಸಲು ಗಳಿಸಲು ಸಾಧ್ಯ ಎಂದರು.

ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ (ಲಿ), ನೀರ್ಚಾಲು ಇದರ ಅಧ್ಯಕ್ಷ ಜಯದೇವ ಖಂಡಿಗೆ ಹಾಗೂ ರಾಧಾಕೃಷ್ಣ ಭಂಡಾರದಮನೆ- ಖಂಡೇರಿ ಉಪಸ್ಥಿತರಿದ್ದರು.

ಅಶ್ವಿನಿ ಕ್ರಾಸ್ತ ಸ್ವಾಗತಿಸಿದರು. ರೂಪ ವಂದಿಸಿದರು. ಸವಿತಾ ಡಿ. ನಿರೂಪಿಸಿದರು.