ಪಯ್ಯನ್ನೂರು ಕಾಲೇಜಿನಲ್ಲಿ ನಡೆದ 2019-20 ನೇ ಸಾಲಿನ ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಪೆರ್ಲ ನಾಲಂದ ಕಾಲೇಜು ತಂಡ ‘ಎ’ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಗಳಿಸಿದೆ.
ಕಾಲೇಜು ತೃತೀಯ ಬಿಕಾಂ ವಿದ್ಯಾರ್ಥಿನಿಗಳಾದ ರೂಪ, ನಿಶಾ, ಅಕ್ಷತಾ, ಬಿ ಎ ವಿದ್ಯಾರ್ಥಿನಿ ಭವ್ಯ, ದ್ವಿತೀಯ ವರ್ಷ ಬಿಕಾಂ ವಿದ್ಯಾರ್ಥಿಗಳಾದ ಅಕ್ಷಯ್, ದೀಕ್ಷಿತ್, ಬಿ ಎ ವಿದ್ಯಾರ್ಥಿನಿ ಅಶ್ವಿನಿ, ಪ್ರಥಮ ವರ್ಷ ಬಿ ಎ ವಿದ್ಯಾರ್ಥಿ ಮನೋಹರ ಪ್ರಸಾದ್, ಬಿ ಎಸ್ ಸಿ ವಿದ್ಯಾರ್ಥಿನಿ ಭವಿಷ್ಯ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಯಕ್ಷಗಾನ ಗುರುಗಳಾದ ಬಾಲಕೃಷ್ಣ ಉಡ್ಡಂಗಳ ನಿರ್ದೇಶನ ಹಾಗೂ ದಾಮೋದರ ಬೆಟ್ಟಂಪಾಡಿ ಭಾಗವತಿಕೆ, ರಾಜೇಂದ್ರ ಪುಂಡಿಕೈ ಚೆಂಡೆ, ರಾಘವ ಮದ್ದಳೆಯಲ್ಲಿ ಸಹಕರಿಸಿದ್ದರು.
ಕಾಲೇಜು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ, ಹಿಂದಿ ಉಪನ್ಯಾಸಕಿ ಶಾಂಭವಿ, ಮಲಯಾಳಂ ಉಪನ್ಯಾಸಕಿ ವಿನೀಷಾ, ಜಿಯೋಗ್ರಫಿ ವಿಭಾಗದ ಉಪನ್ಯಾಸಕ ಪ್ರಜಿತ್, ಸ್ಟಾಫ್ ಮಂಜುನಾಥ ಶೆಟ್ಟಿ ತಂಡದ ಉಸ್ತುವಾರಿ ವಹಿಸಿದ್ದರು.