×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ವಿದ್ಯಾರ್ಥಿಗಳಲ್ಲಿ ಪ್ರಚಲಿತ ವಿದ್ಯಮಾನಗಳ ಅರಿವು ಅಗತ್ಯ

ಬಿ – ಕ್ವಿಜ್ 2019 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ  ಡಾ.ವಿಘ್ನೇಶ್ವರ ವರ್ಮುಡಿ

ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಇದ್ದರೆ ಏನನ್ನೂ ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ ಜ್ಞಾನದಾಹ ಕಡಿಮೆಯಾಗುತ್ತಿದೆ. ಜೀವನದಲ್ಲಿ ಸಾಧನೆಯ ಗುರಿ, ಛಲ, ಗುರುವಿನ ಆಶೀರ್ವಾದವಿದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ನಾಲಂದ ಮಹಾವಿದ್ಯಾಲಯ ಪ್ರಿನ್ಸಿಪಾಲ್ ಡಾ. ವಿಘ್ನೇಶ್ವರ ವರ್ಮುಡಿ ಹೇಳಿದರು.

ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ನಡೆದ ಬಿ – ಕ್ವಿಜ್ 2019 ರಸಪ್ರಶ್ನೆ ಫೈನಲ್ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

BQuiz2k19 Samaropa (2)

BQuiz2k19 Samaropa (1)

ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ಎಂದಿಗೂ ಮರೆಯಬಾರದು. ಸವಾಲುಗಳನ್ನು ಆತ್ಮ ವಿಶ್ವಾಸದೊಂದಿಗೆ ದಿಟ್ಟವಾಗಿ ಎದುರಿಸಿದಲ್ಲಿ ಗೆಲುವು ಸುನಿಶ್ಚಿತ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಿರಬೇಕು. ದಿನ ಪತ್ರಿಕೆ, ಜ್ಞಾನ ಭಂಡಾರ ತುಂಬುವ ಪುಸ್ತಕಗಳನ್ನು ಓದಬೇಕು. ಜ್ಞಾನದ ಮೌಲ್ಯ ಮಾಪನ ನಡೆಸುವ ರಸಪ್ರಶ್ನೆ, ಇನ್ನಿತರ ಸ್ಪರ್ಧೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಿಕೆ ಜ್ಞಾನ ತುಂಬುವಲ್ಲಿ ಪರಿಣಾಮಕಾರಿ ಹಾಗೂ ಇದರಿಂದ ಸ್ಪರ್ಧಾ ಮನೋಭಾವ ಬೆಳೆಯುವುದು ಎಂದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಅಗಲ್ಪಾಡಿ ಎಸ್.ಎ.ಪಿ.ಎಚ್.ಎಸ್.ಎಸ್ ಶಾಲೆ ಪ್ರಥಮ, ಮುಳ್ಳೇರಿಯಾ ವಿ.ಎಚ್.ಎಸ್.ಇ. ದ್ವಿತೀಯ ಬದಿಯಡ್ಕ ಎನ್.ಎಚ್.ಎಸ್.ಎಸ್. ತೃತೀಯ ಬಹುಮಾನ ಪಡೆಯಿತು.

ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ಮುಖ್ಯಸ್ಥೆ ಮಧುರವಾಣಿ, ಕಾಲೇಜು ಯೂನಿಯನ್ ಅಧ್ಯಕ್ಷೆ ನಯನಶ್ರೀ ಕೆ., ಯೂನಿಯನ್ ಕಾರ್ಯದರ್ಶಿ ವಿಷ್ಣು ಪ್ರಸಾದ್ ಟಿ.ಉಪಸ್ಥಿತರಿದ್ದರು. ಉಪನ್ಯಾಸಕ ಶ್ರೀನಿಧಿ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕ ಸುರೇಶ್ ಕೆ.ಎಂ. ವಂದಿಸಿದರು.