×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಎನ್ನೆಸ್ಸೆಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ

ಅಗಲ್ಪಾಡಿ ಶಾಲೆಯಲ್ಲಿ ನಡೆಯರುವ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರ ಉದ್ಘಾಟಿಸಿ ಕುಂಬ್ದಾಜೆ ಗ್ರಾ. ಪಂ. ಅಧ್ಯಕ್ಷೆ ಫಾತಿಮತ್ ಝುಹರ

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಆತ್ಮವಿಶ್ವಾಸ, ಪರಿಶ್ರಮದ ಜೀವನ, ಜೀವನ ಮೌಲ್ಯಗಳ ಅರಿವು ನೀಡುವ ಎನ್ನೆಸ್ಸೆಸ್ನ ಶಿಬಿರಗಳು ವಿದ್ಯಾರ್ಥಿಗಳ ಸಾರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಕುಂಬ್ದಾಜೆ ಗ್ರಾ. ಪಂ. ಅಧ್ಯಕ್ಷೆ ಫಾತಿಮತ್ ಝುಹರ ಹೇಳಿದರು.

ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿರುವ ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ಸಪ್ತದಿನ ಶಿಬಿರವನ್ನು ಔಪಚಾರಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

Camp Inauguration (2)

Camp Inauguration (4)

Camp Inauguration (1)

Camp Inauguration (3)

ಎನ್ನೆಸ್ಸೆಸ್ ಘಟಕಗಳು ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಪ್ತದಿನ ಶಿಬಿರಗಳನ್ನು ಆಯೋಜಿಸುವ ಮುಖಾಂತರ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವಲ್ಲಿ ಪ್ರೇರಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಮುಖ್ಯ ಅತಿಥಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಮಾತನಾಡಿ, ಎನ್ನೆಸ್ಸೆಸ್ ಘಟಕಗಳು ಅಯೋಜಿಸುತ್ತಿರುವ ಸಾಮಾಜಿಕ ಚಟುವಟಿಕೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದರೊಂದಿಗೆ ವಿದ್ಯಾರ್ಥಿಗಳಲ್ಲಿ ಬದಲಾವಣೆ ತರುವಲ್ಲಿ ಶ್ರಮಿಸುತ್ತಿದ್ದು , ಸಮಾಜದ ಪರಿವರ್ತನೆಯಲ್ಲಿ ಎನ್ನೆಸ್ಸೆಸ್ ಘಟಕಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಕುಂಬ್ದಾಜೆ ಗ್ರಾ.ಪಂ. ಉಪಾಧ್ಯಕ್ಷ ಆನಂದ ಕೆ. ಮವ್ವಾರ್ ಅಧ್ಯಕ್ಷತೆ ವಹಿಸಿದ್ದರು. ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕುಂಬ್ದಾಜೆ ಪಂಚಾಯತಿ ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧ ಎನ್., ವಾರ್ಡು ಸದಸ್ಯೆ, ಶಿಬಿರದ ಸಂಘಟನಾ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್, ವಾರ್ಡು ಸದಸ್ಯ ಎಸ್. ಮೊಹಮ್ಮದ್ ಕುಂಞ, ಶಶಿಧರ ಟಿ., ಕುಂಬ್ಡಾಜೆ ಪಂಚಾಯತಿ ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಕೆ. ಅಗಲ್ಪಾಡಿ ಶಾಲಾ ಮ್ಯಾನೇಜರ್ ನಾರಾಯಣ ಶರ್ಮ, ಪ್ರಾಂಶುಪಾಲ ಸತೀಶ್ ವೈ., ಹೈಸ್ಕೂಲ್ ಮುಖ್ಯ ಶಿಕ್ಷಕ ಗಿರೀಶ ಎಂ., ಶಾಲಾ ಪಿಟಿಎ ಅಧ್ಯಕ್ಷ ರವಿರಾಜ ಶರ್ಮ, ಎಂಪಿಟಿಎ ಅಧ್ಯಕ್ಷೆ ನಯನ, ಉಪ್ಪಂಗಳ ಟ್ರಸ್ಟ್ನ ಕಾರ್ಯದರ್ಶಿ ರಂಗ ಶರ್ಮ, ಅಗಲ್ಪಾಡಿ ಶಾಲಾ ನಿವೃತ್ತ ಶಿಕ್ಷಕ ರಾಮಚಂದ್ರ ಭಟ್, ನಾಲಂದ ಕಾಲೇಜಿನ ಸ್ಟಾಫ್ ಸೆಕ್ರೆಟರಿ ಕೇಶವ ಶರ್ಮ, ಕುಂಬ್ಡಾಜೆ ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ಮೀನಾಕ್ಷಿ, ನಾಲಂದ ಕಾಲೇಜು ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ., ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ರೂಪ ಕೆ., ಸುದೀಶ್, ಭವ್ಯ ಶುಭ ಹಾರೈಸಿ ಮಾತನಾಡಿದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಸ್ವಾಗತಿಸಿದರು. ಎನ್ನೆಸ್ಸೆಸ್ ಕಾರ್ಯದರ್ಶಿ ಜಗತ್ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತ ನಿರೂಪಿಸಿದರು.