ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ನೇತೃತ್ವದಲ್ಲಿ ಗುರುವಾರ ಮಹಾತ್ಮಾ ಗಾಂಧಿ ಹುತಾತ್ಮ ದಿನಾಚರಣೆ ನಡೆಯಿತು.
ಕಾಮರ್ಸ್ ಹಾಗೂ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥೆ ಮಧುರವಾಣಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧೀಜಿಯವರ ತ್ಯಾಗ ಮಹತ್ತರವಾಗಿದ್ದು, ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರು ಮಾಡಿದ ರೀತಿಯ ತ್ಯಾಗ ನಮ್ಮಿಂದ ಅಸಾಧ್ಯವಾದರೂ ದೇಶ ಸೇವೆಗೆ ನಮ್ಮಿಂದಾಗುವ ರೀತಿಯ ಕೊಡುಗೆ ನೀಡಲು ಮುಂದಾಗಬೇಕು ಎಂದರು.
ಯೋಜನಾಧಿಕಾರಿ ಸುರೇಶ್ ಕೆ.ಎಂ. ಮಾತನಾಡಿ, ಗಾಂಧೀಜಿಯವರು ಅಹಿಂಸೆ ಪರಮಧರ್ಮ ಎಂದು ಪ್ರತಿಪಾದಿಸಿದ್ದರು.ಯುವ ಜನಾಂಗ ಮಹಾ ಪುರುಷನ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.
ಕಾರ್ಯದರ್ಶಿ ರೂಪ, ಸುದೀಶ್, ಧನ್ಯ ಉಪಸ್ಥಿತರಿದ್ದರು.ಅಂಜನ ಸ್ವಾಗತಿಸಿ, ಧನಶ್ರೀ ವಂದಿಸಿದರು.ರಾಜಶ್ರೀ ನಿರೂಪಿಸಿದರು.