×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಕಂಪ್ಯೂಟರ್ ಜ್ಞಾನ ಇಂದಿನ ಅಗತ್ಯ

ಇಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಸವಲತ್ತುಗಳಿವೆ ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಸಂಸ್ಥೆಗೂ, ನಾಡಿಗೂ ಕೀರ್ತಿಯನ್ನು ತರುವಂತಾಗಲಿ ಎಂದು ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಆದ ವಾಮನ ಪೈ ಯವರು ನುಡಿದರು. ಅವರು ಪೆರ್ಲ ನಾಲಂದ ಮಹಾವಿದ್ಯಾಲಯದ ನೂತನ ಕಂಪ್ಯೂಟರ್ ಲ್ಯಾಬ್‌ನ್ನು ಉದ್ಘಾಟಿಸಿ ಮಾತನಾಡುತ್ತಾ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎಲ್ಲವನ್ನು ಅರಿತುಕೊಂಡು ಪ್ರತಿಯೊಂದು ಸಮಸ್ಯೆಯನ್ನು ಎದುರಿಸ ಬದುಕಬೇಕಾದರೆ ಕಂಪ್ಯೂಟರ್ ಜ್ಞಾನ ಅತೀ ಅಗತ್ಯ. ಮಾತ್ರವಲ್ಲದೆ ಜೀವನಾವಶ್ಯಕವಾಗಿದೆ. ಅದನ್ನು ಅರಿಯದವನು ಬದುಕಿ ಪ್ರಯೋಜನವಿಲ್ಲ ಎಂಬಂತಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಅದರ ಬಳಕೆ ಹೆಚ್ಚುತ್ತಿರುವಾಗ ಕಾಲೇಜುಗಳಲ್ಲಿ ಅತ್ಯಾಧುನಿಕವಾದ ಕಂಪ್ಯೂಟರ್‌ಗಳು ಅಗತ್ಯ. ನಾವು ಓದುವ ಕಾಲದಲ್ಲಿ ಕಂಪ್ಯೂಟರ್ ಇರಲಿಲ್ಲ, ಇಂದು ವ್ಯವಹರಿಸ ಬೇಕಾದರೆ ಅದನ್ನು ಅರಿತಿರಬೇಕು ಎಂದರು.

computer lab

ನಾವು ಕಲಿಕೆಯಲ್ಲಿ ಮುಂದಿದ್ದರೆ ಏನನ್ನೂ ಸಾಧಿಸಲಾಗದು ಅದರ ಜೊತೆಗೆ ಆತ್ಮ ಸ್ಥೈರ್ಯವೂ ಬೇಕು ಎಂದು ಕ್ಯಾಂಪ್ಕೋದ ನಿರ್ದೇಶಕರೂ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರೂ ಆದ ಕೋಳಾರು ಸತೀಶ್ಚಂದ್ರ ಭಂಡಾರಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ನುಡಿದರು. ಇಂದಿನ ವಿದ್ಯಾರ್ಥಿಗಳು ತೀಕ್ಷ್ಣಮತಿಗಳು ಅವರಿಗೆ ಉತ್ತಮ ಸಂಸ್ಕಾರ ದೊರೆತರೆ ಭಾರತವು ಜಗತ್ತಿನಲ್ಲಿ ಪ್ರಥಮ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ . ಅಂತಹ ಪರಿಸರ ಈ ನಾಲಂದ ಕಾಲೇಜಿನಲ್ಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾಲೇಜಿನ ಆಡಳಿತ ಮಂಡಳಿಯ ಖಜಾಂಜಿ ಗೋಪಾಲ ಚೆಟ್ಟಿಯಾರ್ ಅವರು ಶುಭ ಹಾರೈಸಿ ಕಂಪ್ಯೂಟರ್‍ಗಳನ್ನು ಕೊಡುಗೆಯಾಗಿ ಕೊಟ್ಟ ಪುತ್ತೂರು ರೋಟರಿ ಕ್ಲಬ್‌ನ ಅಧ್ಯಕ್ಷರು ಉದ್ಘಾಟಕರೂ ಆದ ಪುತ್ತೂರು ವಾಮನ ಪೈ, ಸತ್ಯನಾರಾಯಣ ಹೈಸ್ಕೂಲಿನ ನಿವೃತ್ತ ಅದ್ಯಾಪಿಕೆಯರೂ ನಾಲಂದ ಆಡಳಿತ ಮಂಡಳಿಯ ಸದಸ್ಯರೂ ಆದ ಶ್ರೀಮತಿ ಪ್ರಭಾವತಿ ಮತ್ತು ಶ್ರೀಮತಿ ನಳಿನಿ ವೈ ಕೆ ಯವರನ್ನು ನೆನಪಿನ ಕಾಣಿಕೆಗಳನ್ನು ಕೊಟ್ಟು ಗೌರವಿಸಿದರು. ಉಪನ್ಯಾಸಕ ಶ್ರೀನಿಧಿ ಸ್ವಾಗತಿಸಿ, ಉಪನ್ಯಾಸಕಿ ಗೀತಾ ಭಟ್ ವಂದಿಸಿದರು. ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.