×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ಭಾರತೀಯ ಚಿಂತನೆಗಳು ಮತ್ತು ರಾಷ್ಟ್ರೀಯತೆ – ವಿಶೇಷ ಉಪನ್ಯಾಸ

ಪ್ರತಿಯೊಂದು ವಸ್ತುವಿನಲ್ಲಿ ದೇವರನ್ನು ಕಾಣುವ ಮತ್ತು ಎಲ್ಲರನ್ನು ಗೌರವಿಸುವುದೇ ಭಾರತೀಯ ಸಂಸ್ಕೃತಿಯ ಜೀವಾಳ ಎಂದು ಸರಕಾರಿ ಪದವಿಪೂರ್ವ ಕಾಲೇಜು ತಿಪಟೂರು ಇಲ್ಲಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಶ್ರೀ ರಾಜೇಶ್ ಪದ್ಮಾರ್ ನುಡಿದರು.

Padmar-at-vvs

ಪೆರ್ಲ ನಾಲಂದ ಕಾಲೇಜಿನಲ್ಲಿ ’ಭಾರತೀಯ ಚಿಂತನೆಗಳು ಮತ್ತು ರಾಷ್ಟ್ರೀಯತೆ’ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡುತ್ತಾ ಎರಡು ಸಂಸ್ಕ್ರತಿಗಳು ಮುಖಾಮುಖಿಯಾದಾಗ ಒಂದು ಉಳಿಯುವುದು ಮತ್ತೊಂದು ಅಳಿಯುವುದು. ಭಾರತೀಯ ಸಂಸ್ಕ್ರತಿಯ ಮೇಲೆ ಎಷ್ಟೇ ಪ್ರಹಾರಗಳು ನಡೆದಿದ್ದರೂ ಅದನ್ನು ಉಳಿಸಿಕೊಂಡು ಬಂದಿದ್ದಾರೆ ಅದನ್ನು ಬೆಳೆಸುವುದು ನಮ್ಮ ಅದ್ಯ ಕರ್ತವ್ಯ. ಭೂಮಿಯನ್ನು ಮಾತೆಯಾಗಿ ಕಾಣುವ ಚರಾಚರಗಳಲ್ಲಿ ದೇವರನ್ನು ಕಾಣುವ, ಮಾನವರನ್ನು ಮತ್ತು ಇತರ ಮತಧರ್ಮಗಳನ್ನು ಸಮಾನವಾಗಿ ಗೌರವಿಸುವ ಏಕಮೇವ ಸಂಸ್ಕೃತಿ ಭಾರತೀಯ ಸಂಸ್ಕೃತಿ ಅದರಲ್ಲೇ ರಾಷ್ಟ್ರೀಯತೆ ಅಡಗಿದೆ.

ಭಾರತೀಯ ಸಂಸ್ಕೃತಿಯು ಋಷಿ ಸಂಸ್ಕೃತಿಯಾದರೂ ಕಾಲಕ್ಕೆ ಹೊಂದುವಂತೆ ಮೂಲ ಸತ್ವವನ್ನು ಉಳಿಸಿಕೊಂಡು ಅದರ ಬಗ್ಗೆ ಹಲವು ಚಿಂತನೆಗಳು ಬೆಳೆದು ಬಂದಿವೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ವಿಘ್ನೇಶ್ವರ ವರ್ಮುಡಿಯವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಇಂದಿನ ವಿದ್ಯಾರ್ಥಿಗಳಲ್ಲಿ ಇತರರನ್ನು ಗೌರವಿಸುವ ಮನೋಭಾವ ಮತ್ತು ರಾಷ್ಟ್ರೀಯತೆಯ ಅರಿವಿನ ಕೊರತೆ ಎದ್ದು ಕಾಣುತ್ತದೆ. ಅದನ್ನು ತುಂಬಲು ಇಂತಹ ಉಪನ್ಯಾಸಗಳು ಅಗತ್ಯ. ಭಾರತೀಯ ಆರ್ಥಿಕ ಚಿಂತನೆಗಳಿಗೆ ಕೌಟಿಲ್ಯನ ಅರ್ಥಶಾಸ್ತ್ರವೇ ಮೂಲ ಎಂದರು. ಕಾಲೇಜಿನ ಕಾರ್ಯ ನಿರ್ವಹಣಾಧಿಕಾರಿ ಕೆ.ಶಿವಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಕೆ.ಕೇಶವ ಶರ್ಮ ವಂದಿಸಿದರು. ಉಪನ್ಯಾಸಕಿ ಶಾಂಭವಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಭವ್ಯಶ್ರೀ ವೈಯಕ್ತಿಕ ಗೀತೆಯನ್ನು ಹಾಡಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.