News & Events
ಅನ್ವೇಷಣೆ-2015
ಪೆರ್ಲ ನಾಲಂದ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ‘ಅನ್ವೇಷಣೆ-2015’ ಎಂಬ ಹೆಸರಿನಲ್ಲಿ ಕಾಸರಗೋಡಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಜಯಗೋವಿಂದ ಉಕ್ಕಿನಡ್ಕ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉಧ್ಘಾಟಿಸಿ, ನಮ್ಮ ಇಂದಿನ ಸ್ಪರ್ಧಾತ್ಮಕ ಬದುಕಿನಲ್ಲಿ ಇಂತಹ ಸ್ಪರ್ಧೆಗಳು ಅನಿವಾರ್ಯ, ಇದರ ಲಾಭವನ್ನು ಮಕ್ಕಳು ಪಡೆದುಕೊಂಡು ಬದುಕಿನಲ್ಲಿ ಮುಂದೆ ಬರಬೇಕು ಎಂದರು. ಆಡಳಿತ ಮಂಡಳಿಯ ಖಜಾಂಜಿ ಶ್ರೀ ಗೋಪಾಲ ಚೆಟ್ಟಿಯಾರ್‌ರವರು ಅಧ್ಯಕ್ಷತೆಯನ್ನು ವಹಿಸಿ ಇಂದಿನ ವಿದ್ಯಾರ್ಥಿಗಳೇ ಮುಂದಿನ ಜನಾಂಗ, ನೀವು
ಏಡ್ಸ್ ತಿಳುವಳಿಕಾ ಜಾಥಾ
ಪೆರ್ಲ: ನಾಲಂದ ಮಹಾವಿದ್ಯಾಲಯದ ವತಿಯಿಂದ ಡಿಸೆಂಬರ್ ಒಂದರಂದು ಜಾಗತಿಕ ಏಡ್ಸ್ ದಿನಾಚರಣೆಯ ಅಂಗವಾಗಿ ಏಡ್ಸ್ ತಿಳುವಳಿಕಾ ರ್‍ಯಾಲಿ ನಡೆಯಿತು. ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಭಾರತೀಯರು ಅನುಸರಿಸುವುದರಿಂದ ಈ ರೀತಿಯ ಮಾಹಾಮಾರಿ ನಮ್ಮ ದೇಶಕ್ಕೆ ಬಂದಿದೆ. ಇದರ ವಿರುದ್ಧ ಯುವಜನತೆ ಎಚ್ಚರವಹಿಸಬೇಕು ಎಂದು ಮಹಾವಿದ್ಯಾಲಯದ ಆಡಳಿತಾಧಿಕಾರಿ ಕೆ. ಶಿವಕುಮಾರ್ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸ್ಟಾಫ್ ಕಾರ್ಯದರ್ಶಿ ಆನೀಶ್ ಕುಮಾರ್ ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ೨೦೦ ವರ್ಷಗಳ ಹಿಂದೆ ಆಫ್ರಿಕಾ ದೇಶದ ಮಂಗಗಳ ಮೂಲಕ ಮನುಷ್ಯರಿಗೆ
PPT presentation programme
As a part of the 119th Birthday of Salim Ali, National service Scheme unit No -49 of Nalanda College of Arts & Science, Perla has organised a PPT presentation programme on Thursday at college. Maxim Rodrigus NSS Volunteer has presented the show. He explained about the different types of indian birds and other birds and their scientific
ಸಾಹಿತ್ಯ ಸಂಘ ಉದ್ಘಾಟನೆ
ಪೆರ್ಲ : ಪುಸ್ತಕ ಮನಸ್ಸಿಗಿರುವ ಔಷಧವಾಗಿದೆ. ಮಕ್ಕಳಲ್ಲಿ ವೈಚಾರಿಕತೆ ಬೆಳೆಯಬೇಕಾದರೆ ಓದು ಅತೀ ಮುಖ್ಯ, ಈ ಸಂಘ ಉತ್ತಮ ಸಾಹಿತಿಗಳನ್ನು ಬೆಳೆಸಲಿ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಮಲಯಾಳ ವಿಭಾಗದ ಮುಖ್ಯಸ್ಥರಾದ ಡಾ| ಸುಷ್ಮಕುಮಾರಿ ಹೇಳಿದರು. ಅವರು ಇಲ್ಲಿನ ನಾಲಂದ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾಹಿತ್ಯ ಸಂಘವನ್ನು ಉಧ್ಘಾಟಿಸಿ ಶುಭಹಾರೈಸಿದರು. ಕುಮಾರವ್ಯಾಸ ಭಾರತದಂತಹಾ ಮಹಾಕಾವ್ಯಗಳಲ್ಲಿ ವ್ಯಕ್ತಿಬಂಧಗಳನ್ನು ಕವಿಯು ಅತ್ಯಂತ ಮನೋಹರವಾಗಿ ಮತ್ತು ದೀರ್ಘವಾಗಿ ಚಿತ್ರಿಸಿದ್ದಾನೆ. ಇದು ಒಂದು ಸಾಹಿತ್ಯಕ್ಕೆ ಮಾತ್ರ ಸಾಧ್ಯವಾಗುವಂತಹ ವಿಚಾರ. ಒಳ್ಳೆಯ ಸಾಹಿತ್ಯವು ನಮ್ಮ ಜೀವನದಲ್ಲಿ
ಪ್ರಪಂಚಕ್ಕೆ ಪೂಜ್ಯವನ್ನು ಕೊಟ್ಟ ಭಾರತ ಪೂಜನೀಯ – ಕಜಂಪಾಡಿ ಸುಬ್ರಹ್ಮಣ್ಯ ಭಟ್
ಆಧುನಿಕ ವಿದ್ಯಾಭ್ಯಾಸ ನಮ್ಮಲ್ಲಿ ಭಾರತೀಯತೆಯನ್ನು ಮರೆಸಿದೆ. ವೇದ ಪುರಾಣಗಳಲ್ಲಿ ಇರುವ ನೈತಿಕ ಪಾಠಗಳು ನಮಗೆ ಆದರ್ಶಗಳಾಗುತ್ತಿಲ್ಲ. ಪ್ರಪಂಚಕ್ಕೆ ಪೂಜ್ಯವನ್ನು ಕೊಟ್ಟದ್ದು ಭಾರತ. ಪೂಜ್ಯವಿಲ್ಲದೆ ಹೋದರೆ ಜಗತ್ತಿನ ವ್ಯಾವಹಾರಿಕ ವ್ಯವಸ್ಥೆಗೆ ಎಂಥ ತೊಡಕುಗಳಾಗುತ್ತಿತ್ತೊ ಊಹಿಸುವಂತಿಲ್ಲ. ಪೂಜ್ಯದೆದುರು ಎಷ್ಟು ದೊಡ್ಡ ಮೊತ್ತಗಳಿದ್ದರೂ ಅದಕ್ಕೆ ಬೆಲೆ ಬರುವುದಿಲ್ಲ. ವೇದಗಣಿತದಂಥಹ ಅಪೂರ್ವ ಗಣಿತವನ್ನು ವಿಶ್ವಕ್ಕೆ ಕೊಟ್ಟ ಹೆಮ್ಮೆ ನಮ್ಮ ಭಾರತದ್ದು. ಅಷ್ಟಾಂಗ ಯೋಗದ ಪರಿಕಲ್ಪನೆಯಂತು ಅಪಾರ. ಅದರೊಳಗೆ ಅಡಗಿದ ಬಾಹ್ಯ ಮತ್ತು ಆಂತರಿಕ ಸ್ಪುಟತ್ವ ಯಾವ ಕಾಲಕ್ಕೂ ಅನುಸರಣೀಯ. ಈಗಂತು ಯೋಗ ಮಹತ್ವವನ್ನು
ಭೂಮಿತ್ರಸೇನಾ ಕ್ಲಬ್ ಸದಸ್ಯರಿಂದ ವಾರಣಾಶಿ ಸಂಶೊಧನಾ ಕೇಂದ್ರ ಸಂದರ್ಶನ
ಭೂಮಿಯ ತಾಪಮಾನ ಇಂದು ಏರುಪೇರಾಗುತ್ತಿದೆ. ಪರಿಸರದ ಮೇಲೆ ನಮ್ಮ ನಿರಂತರ ಆಕ್ರಮಣ ನೆಲ, ಜಲ ಮತ್ತು ವಾಯುವನ್ನು ಕಲುಷಿತಗೊಳಿಸುತ್ತವೆ. ನಮ್ಮ ಆಧುನಿಕ ಬದುಕಿನ ರೀತಿ ರಿವಾಜುಗಳು ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗುತ್ತಿವೆ. ಭೂಮಂಡಲ ಇಂದು ಆನೇಕ ತೊಂದರೆಗಳನ್ನು ಅನುಭವಿಸುತ್ತಾ ಇದೆ. ನೀರಿಂಗಿಸುವಿಕೆ ಮತ್ತು ಜೈವಿಕ ಕೃಷಿ ವಿಧಾನದಿಂದ ತಕ್ಕಮಟ್ಟಿಗೆ ಇದನ್ನು ಪರಿಣಾಮಕಾರಿಯಾಗಿ ಎದುರಿಸಬಹುದು ಎಂದು ಅಡ್ಯನಡ್ಕ ವಾರಣಾಶಿ ಸಂಶೋಧನಾ ಕೇಂದ್ರದ ಡಾ|ಅಶ್ವಿನಿ ಕೃಷ್ಣ ಮೂರ್ತಿ ಹೇಳಿದರು. ಇವರು ವಾರಣಾಶಿ ಸಂಶೊಧನಾ ಕೇಂದ್ರ ಮತ್ತು ಜೈವಿಕ ಕೃಷಿ ತೋಟ ಸಂದರ್ಶಿಸಿದ
ಶುಚಿತ್ವ ಭಾರತಕ್ಕೆ ಒತ್ತು ಕೊಡೋಣ
ಪೆರ್ಲ : ರಾಷ್ಟ್ರೀಯ ದಿನಾಚರಣೆಗಳಲ್ಲಿ ಪರಿಸರ ಶುಚೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ’ಶುಚಿತ್ವ ಭಾರತ’ ಯೋಜನೆಗೆ ನಮ್ಮಿಂದಾಗುವ ಕೊಡುಗೆ ನೀಡಬೇಕು, ಇದರಿಂದ ನಮ್ಮ ಪರಿಸರವನ್ನು ಮಾಲಿನ್ಯಮುಕ್ತವಾಗಿರಿಸಬಹುದು ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ನುಡಿದರು. ಗಾಂಧಿ ಜಯಂತಿಯ ಅಂಗವಾಗಿ ನಾಲಂದದ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಹಮ್ಮಿಕೊಂಡ ಪೆರ್ಲ ಪೇಟೆ ಮತ್ತು ಮಹಾವಿದ್ಯಾಲಯ ಪರಿಸರ ಶುಚೀಕರಣ ಕಾರ್ಯಕ್ರಮಕ್ಕೆ ಚಾಲನೆಕೊಟ್ಟು ಅವರು ಮಾತನಾಡಿದರು. ಯೋಜನಾಧಿಕಾರಿ ಶಂಕರ್ ಖಂಡಿಗೆ, ಭೂಮಿತ್ರಸೇನಾ ಕ್ಲಬ್ ಸಂಚಾಲಕ ವಿಷ್ಣುಪ್ರಕಾಶ್ ಮುಳ್ಳೇರಿಯ, ಉಪನ್ಯಾಸಕರಾದ ರಂಜಿತ್
One day workshop
Nalanda college of Arts & Science Perla has conducted one day workshop on Security Analysis and General Awareness about Stock Market on 01/10/2015, Thursday under the Management and Commerce Department respectively. Sri. Shiva Kumar. K, Administraive Officer has inaugurated the function by lighting the lamp. “To access the share market transactions we need awareness, knowledge and experience regarding share
ನಾಲಂದ ಕಾಲೇಜಿಗೆ ಕಂಪ್ಯೂಟರ್ ಕೊಡುಗೆ
ಅದು ಒಂದು ಒಂದು ಚಿಕ್ಕ ಚೊಕ್ಕ ಸಮಾರಂಭ. ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ನಾಲಂದ ಕಾಲೇಜಿಗೆ ಕೊಡುಗೆಯಾಗಿ ಬಂದ ಎರಡು ಕಂಪ್ಯೂಟರ್ಗಳನ್ನು ಹಸ್ತಾಂತರಿಸುವ ಶುಭ ಘಳಿಗೆ. ಬ್ಯಾಂಕ್ ಅಧ್ಯಕ್ಷ ಶ್ರೀ ಎನ್. ಕೃಷ್ಣ ಕುಮಾರ್ ಕಂಪ್ಯೂಟರನ್ನು ಕಾಲೇಜಿನ ಆಡಳಿತಾಧಿಕಾರಿ ಶ್ರೀ ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ| ಜಯಗೋವಿಂದ ಉಕ್ಕಿನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೇವಾ ಸಹಕಾರಿ ಬ್ಯಾಂಕ್ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಉತ್ತಮ
NSS ORIENTATION CLASS
NSS unit of Nalanda College of Arts and Science Perla has conducted orientation class on 22-08-2015 at college auditorium. The Two ideologies of Gandhiji’s and Vivekananda’s were focused in the orientation class by Sri.Mohammed Ali, Ex- NSS Programme officer of Govt. College kasaragod. Sri Shankara.K NSS programme officer precided over the function. Sri Abhilash T.