ನಾಲಂದ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ರಕ್ತದಾನ ಶಿಬಿರವು ತಾರೀಕು 20-10-2016 ರಂದು ಕಾಲೇಜಿನಲ್ಲಿ ನಡೆಯಿತು. ಸುಮಾರು 50 ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಕ್ತದಾನ ಮಾಡಿದರು.
ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ, ಪ್ರಾಧ್ಯಾಪಕರಾದ, ಶ್ರೀನಿಧಿ, ಕುಮಾರಿ ಶಿಲ್ಪಾ ಮೊದಲಾದವರು ರಕ್ತದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ . ಕಮಾಲಾಕ್ಷ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಅಶೋಕ ಮೊಟ್ಟಕುಂಜ , ಸ್ಟಾಫ್ ಕಾರ್ಯದರ್ಶಿ ಕೇಶವ ಶರ್ಮ, ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಎನ್. ಎಸ್.ಎಸ್ ಕಾರ್ಯದರ್ಶಿಗಳಾದ ವಿಕಾಸ್, ಭವಿಷ್ಯ, ಸುಧಾಕರ ಹಾಗೂ ವಿದ್ಯಾರ್ಥಿಗಳಾದ ಸೆರಿನಾ, ಅಭಿಲಾಷ್, ಸ್ರಜನ್ ಚಂದ್ರನ್, ವೈಶಾಲಿ ಮೊದಲಾದವರು ಸಹಕರಿಸಿದರು. ಕಾಸರಗೊಡು ಜನರಲ್ ಆಸ್ಪತ್ರೆಯ ಡಾ. ನಜೀಯ, ಮೇರಿ ಮೆತ್ಯೂ, ದೀಪಕ್,ಆಬಿದ್, ಅನ್ನಪೂರ್ಣೆಶ್ವರಿ ಶಿಬಿರವನ್ನು ನಡೆಸಿಕೊಟ್ಟರು.