×
Nalanda College
Nalanda College of Arts & Science

Nalanda College of Arts & Science

A unit of : Vivekananda VidyaVardhaka Sangha Puttur (R)

ವಿಶ್ವ ಏಡ್ಸ್ ದಿನಾಚರಣೆ

ಪೆರ್ಲ: ನಾಲಂದ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಮತ್ತು ರೆಡ್‌ರಿಬ್ಬನ್ ಕ್ಲಬ್‌ವತಿಯಿಂದ ವಿಶ್ವಎಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಜನಜಾಗೃತಿ ರ್‍ಯಾಲಿ ಕಾಲೇಜಿನ ಪರಿಸರದಿಂದ ಪ್ರಾರಂಭಗೊಂಡು ಪೆರ್ಲ ಪೇಟೆಯಲ್ಲಿ ಸಮಾರೋಪಗೊಂಡಿತು. ಎಡ್ಸ್ ವಿರುದ್ಧ ಜನಜಾಗೃತಿ ರ್‍ಯಾಲಿಯನ್ನು ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ಶಿವಕುಮಾರ್ ಉದ್ಘಾಟಿಸಿ ವಿದೇಶಿ ಸಂಸ್ಕೃತಿಯನ್ನು ಅನುಸರಿಸಿದ ಪರಿಣಾಮವಾಗಿ ಈ ಮಾರಕರೋಗ ಹರಡಲು ಕಾರಣವಾಯಿತು. ಈ ರೋಗದ ವಿರುದ್ದ ಜನಜಾಗೃತಿ ಮೂಡಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ರ್‍ಯಾಲಿಯು ಸ್ತುತ್ಯಾರ್ಹವಾಗಿದೆ ಎಂದರು.

awareness-day1

awareness-day

ಎಣ್ಮಕಜೆ ಪಂಚಾಯತು ಅಧ್ಯಕ್ಷೆಯಾದ ಶ್ರೀಮತಿ ರೂಪವಾಣಿ ಆರ್ ಭಟ್ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಎನ್‌ಎಸ್‌ಎಸ್ ನಂತಹ ವಿದ್ಯಾರ್ಥಿ ಸಂಘಟನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಮೂಲಕ ರೋಗ ವಿಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯಎಂದರು. ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಧಿಕಾರಿ ಶ್ರೀ ತಿರುಮಲೇಶ್ವರ ಮಾತಾನಾಡಿ, ಎಡ್ಸ್ ನಂತಹ ಮಾರಕರೋಗ ಹರಡಲು ಪ್ರಮುಕವಾಗಿ ,ಅಸುರಕ್ಷಿತ ಲೈಂಗಿಕ ಸಂಬಂಧ, ಎಡ್ಸ್‌ರೋಗಿಯಿಂದ ರಕ್ತ ಪಡೆಯುವ ಮೂಲಕ,ಮೊದಲಾದ ಕಾರಣಗಳಿಂದ ಈ ರೋಗವು ಹರಡುತ್ತದೆ ಎಂದು ಹೇಳಿದರು. ರ್‍ಯಾಲಿಯಲ್ಲಿ ಎನ್‌ಎಸ್‌ಎಸ್ ಯೋಜನಾಧಿಕಾರಿ ಶ್ರೀ ಶಂಕರಖಂಡಿಗೆ, ಕನ್ನಡ ಉಪನ್ಯಾಸಕ ಕೇಶವ ಶರ್ಮ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಅಶೋಕ ಮೊಟ್ಟಕುಂಜ , ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕ ಶ್ರೀನಿಧಿ , ಪೆರ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ವಿಕಾಶ್ ಮತ್ತು ಸುಧಾಕರ, ಎನ್.ಎಸ್.ಎಸ್ ಸದಸ್ಯ ಗಿರೀಶ್ ಮೊದಲಾದವರು ರ್‍ಯಾಲಿಗೆ ನೇತೃತ್ವ ವಹಿಸಿದರು.