ಪೆರ್ಲ: ನಾಲಂದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಸ್ವಯಂ ರಕ್ತದಾನದ ಕುರಿತಾಗಿ ಕಾರ್ಯಗಾರ ನಡೆಯಿತು. ರಕ್ತದಾನವೆಂಬುವುದು ಮಹಾದಾನ. ಅದನ್ನು ಮೂರು ತಿಂಗಳಿಗೊಮ್ಮೆ ಫಲಾಪೇಕ್ಷೆ ಇಲ್ಲದೇ ದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯವಿದೆ. ಯುವ ಜನಾಂಗ ರಕ್ತದಾನ ಮಾಡುವುದರಿಂದ ತಮ್ಮ ದೇಹದಲ್ಲಿ ರಕ್ತದ ಉತ್ಪತ್ತಿ ಹೆಚ್ಚುವುದಲ್ಲದೇ ತಮ್ಮ ಆರೋಗ್ಯದ ಹಿತದೃಷ್ಟಿಯಲ್ಲಿಯೂ ಉತ್ತಮ ಎಂದು ಬ್ಲಡ್ ಬ್ಯಾಂಕ್ನ ಸಂಯೋಜಕ ವಿನೋದ್ ಕುಮಾರ್ ವಿ. ಹೇಳಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಶಂಕರ ಖಂಡಿಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಕಾಸ್ ಸ್ವಾಗತಿಸಿ, ಅಖಿಲ್ ಯಸ್ ನಂಬ್ಯಾರ್ ವಂದಿಸಿದರು.