ಪೆರ್ಲ : 13 ಜನವರಿ 2017 ರಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯಾದ ಆವರಣದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಆಯೋಜಿಸಿರುವ ಬೃಹತ್ ವಿವೇಕ ಉದ್ಯೋಗ ಮೇಳಕ್ಕೆ ಪೂರಕವಾಗಿ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ನಾಲಂದ ಕಾಲೇಜಿನಲ್ಲಿ ಕಾರ್ಯಾಲಯ ಉದ್ಘಾಟನೆಗೊಂಡಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಕಾರ್ಯಾಲಯವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧಿಕಾರಿ ವಿವೇಕ ಭಂಡಾರಿ ಉದ್ಯೋಗ ಮೇಳದ ಮಾಹಿತಿ ನೀಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಕೋಳಾರು ಸತೀಶ್ಚಂದ್ರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ| ಕೆ ಕಮಲಾಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜು ಆಡಳಿತಾಧಿಕಾರಿ ಕೆ. ಶಿವಕುಮಾರ ಸ್ವಾಗತಿಸಿ ವಂದಿಸಿದರು.
ವಿವೇಕ ಉದ್ಯೋಗ ಮೇಳದಲ್ಲಿ ಸುಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳೂ ಸೇರಿದಂತೆ ಸುಮಾರು 120 ಕಂಪೆನಿಗಳು ಭಾಗವಹಿಸಲಿವೆ. ಕಾಸರಗೋಡು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ನಾಲಂದಾ ಕಾಲೇಜಿನಲ್ಲಿ ತೆರೆಯಲಾದ ಕಾರ್ಯಾಲಯದಲ್ಲಿ ತಮ್ಮ ಹೆಸರನ್ನು ನೋದಾಯಿಸಬಹುದಾಗಿದೆ. ನಾಲಂದ ಕಾಲೇಜಿನ ಕಾರ್ಯಾಲಯಕ್ಕೆ ಪೂರಕವಾಗಿ ಅಗಲ್ಪಾಡಿ ಅನ್ನಪೂರ್ಣೇಶ್ವರಿ ಪ್ರೌಢಶಾಲೆ, ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಂತಾದೆಡೆಗಳಲ್ಲಿ ಕಾರ್ಯಾಲಯಗಳು ಕಾರ್ಯಾರಂಭಮಾಡಲಿವೆ. ಹೆಚ್ಚಿನ ಮಾಹಿತಿಗಾಗಿ : ಕೆ. ಶಿವಕುಮಾರ್, ಆಡಳಿತಾಧಿಕಾರಿಗಳು – 9483355168 ಅಥವಾ ಕಾಲೇಜಿನ ಕಾರ್ಯಾಲಯ – 04998 226350 ಇವರನ್ನು ಸಂಪರ್ಕಿಸಬಹುದು.