ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯಿ ಪಟೇಲ್ರವರ ಮಹಾನ್ ಕೊಡುಗೆಗಳನ್ನೂ ನೇತೃತ್ವ ಗುಣಗಳನ್ನೂ ಸ್ವಾತಂತ್ರ್ಯಾ ನಂತರದ ಭಾರತೀಯರೆಲ್ಲ ಸದಾ ಸ್ಮರಿಸಬೇಕು. ಅವರ ರೂಪ ಮತ್ತು ಮುಖ ಭಾವವು ಶಾಂತ ರೀತಿಯಲ್ಲಿದ್ದರೂ ಅವರ ಮನೋದಾರ್ಢ್ಯವು ಉಕ್ಕಿನಂತಹದಾಗಿತ್ತು ಎಂಬುದು ಸರ್ವವಿದಿತ ಎಂದು ಪೆರ್ಲ ನಾಲಂದ ಮಹಾವಿದ್ಯಾಲಯದ ಮಲಯಾಳಂ ಉಪನ್ಯಾಸಕಿ ವಿನೀಶ ಅವರು ಅಭಿಪ್ರಾಯಪಟ್ಟರು. ಸದ್ರಿ ಕಾಲೇಜಿನ ಎನ್.ಎಸ್.ಎಸ್ ವತಿಯಿಂದ ನಡೆದ ಅಂತಾರಾಷ್ಟೀಯ ಏಕತಾ ದಿನವನ್ನು ಆಚರಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು.ಗೀತಾ ಪಿ ಅವರು ಅಂತಾರಾಷ್ಟ್ರೀಯ ಉಳಿತಾಯ ದಿನದ ಅಂಗವಾಗಿ ಮಾತನಾಡುತ್ತಾ ನಮ್ಮ ಸಂಪಾದನೆಯ ಒಂದು ಪಾಲನ್ನು ಉಳಿತಾಯ ಮಾಡುವ ನಿರ್ಧಾರ ಮಾಡಿಕೊಂಡು ಬಾಕಿ ಉಳಿದುದರಲ್ಲಿ ಖರ್ಚನ್ನು ಸರಿದೂಗಿಸಬೇಕು. ಪ್ರತಿಯೊಬ್ಬರಲ್ಲೂ ಉಳಿತಾಯ ಮನೋಭಾವವು ಬೆಳೆದರೆ ಅವರಿಗೂ ದೇಶಕ್ಕೂ ಒಳ್ಳೆಯದು ಎಂದರು. ಎನ್.ಎಸ್.ಎಸ್ ಯೋಜನಾಧಿಕಾರಿ ಶಂಕರ ಖಂಡಿಗೆ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯದರ್ಶಿ ವಿಕಾಸ್ ಸ್ವಾಗತಿಸಿ ಅಖಿಲ್ ಎಸ್ ನಂಬಿಯಾರ್ ವಂದಿಸಿದರು. ವಿದ್ಯಾರ್ಥಿ ನಾಯಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು.